ಇಂದು ಲೋಕಸಭೆಯಲ್ಲಿ ಸ್ಪೀಕರ್ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾಕೆ ಗೊತ್ತೆ ? ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳ ನಾಯಕರು ಎದ್ದು ನಿಂತು ಗಲಾಟೆ ಮಾಡಿದ್ದಾರೆ. ಪ್ರಧಾನಿ ಮೋದಿ ಭಾಷಣಕ್ಕೆ ಅಡ್ಡಿ ಪಡಿಸುವ ಯತ್ನ ನೀಡಿದ್ದಾರೆ.
ಮೋದಿ ಭಾಷಣ ಆರಂಭವಾಗ್ತಿದ್ದಂತೆ ಮೋದಿ ವಿರುದ್ಧ ವಿಪಕ್ಷಗಳ ನಾಯಕರು ಘೋಷಣೆ ಕೂಗಿದ್ರು. ಅದರಲ್ಲೂ ರಾಹುಲ್ ಗಾಂಧಿ ಎದ್ದು ನಿಂತು ಕಿರುಚುತ್ತಿದ್ದನ್ನು ಕಂಡ ಸ್ಪೀಕರ್ ಓಂ ಬಿರ್ಲಾ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದರು. ಶಾಂತವಾಗಿ ಮೊದಲು ಭಾಷಣ ಕೇಳಿ, ಏನು ಹೇಳ್ತಾರೆ ಅಂತ ಕೇಳಿಸಿಕೊಳ್ಳಿ. ಹೀಗೆ ಮಾಡಿದ್ರೆ ಸಹಿಸೋಕೆ ಆಗಿಲ್ಲ ಎಂದು ವಾರ್ನಿಂಗ್ ಕೊಟ್ರು. ಇನ್ನೂ ಸ್ಪೀಕರ್ ಹೀಗೆ ಹೇಳುತ್ತಿದ್ದಂತೆ ರಾಹುಲ್ ಗಾಂಧಿ ಸೈಲೆಂಟ್ ಆದರು.
ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತಿನ ಮೂಲಕವೇ ಇಂದು ಸಖತ್ ಕೌಂಟರ್ ಕೊಟ್ಟಿದ್ದಾರೆ.ಹಿಂದೂಗಳ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು, ಜನರು ಶತಮಾನಗಳವರೆಗೆ ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ವ್ಯಕ್ತಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾನೆ ಎಂದು ದೇಶಕ್ಕೆ ತಿಳಿದಿದೆ, ಒಬಿಸಿ ವ್ಯಕ್ತಿಯನ್ನು ಕಳ್ಳ ಎಂದು ಕರೆದಿದ್ದಕ್ಕಾಗಿ ಅವನಿಗೆ ಶಿಕ್ಷೆ ಸಿಕ್ಕಿದೆ ಮತ್ತು ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದಕ್ಕಾಗಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


