nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್: ‘ಐಕಾನ್ ಆಫ್ ಡೆಕ್ಕನ್ ಸೀಸನ್–3’ ಫ್ಯಾಷನ್ ಮಾಡೆಲಿಂಗ್ ಸ್ಪರ್ಧೆ; ನೋಂದಣಿ ಆರಂಭ

    March 5, 2026

    ಹದಗೆಟ್ಟ ರಸ್ತೆ; ಸಂಚಾರ ಬಲು ಹೈರಾಣ: ಶೇಂಬೆಳ್ಳಿ ಗ್ರಾಮಸ್ಥರ ಆಕ್ರೋಶ

    March 5, 2026

    ಹಸೆ ಮಣೆ ಮೇಲೆ ಕುಂಡ್ರಿಸಿ ಕೊಡಬೇಕಿತ್ತೇನೋ ದುಡ್ಡ? | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 2)

    March 5, 2026
    Facebook Twitter Instagram
    ಟ್ರೆಂಡಿಂಗ್
    • ಬೀದರ್: ‘ಐಕಾನ್ ಆಫ್ ಡೆಕ್ಕನ್ ಸೀಸನ್–3’ ಫ್ಯಾಷನ್ ಮಾಡೆಲಿಂಗ್ ಸ್ಪರ್ಧೆ; ನೋಂದಣಿ ಆರಂಭ
    • ಹದಗೆಟ್ಟ ರಸ್ತೆ; ಸಂಚಾರ ಬಲು ಹೈರಾಣ: ಶೇಂಬೆಳ್ಳಿ ಗ್ರಾಮಸ್ಥರ ಆಕ್ರೋಶ
    • ಹಸೆ ಮಣೆ ಮೇಲೆ ಕುಂಡ್ರಿಸಿ ಕೊಡಬೇಕಿತ್ತೇನೋ ದುಡ್ಡ? | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 2)
    • ಮಳೆಗಾಲ ಆರಂಭಕ್ಕೂ ಮುನ್ನ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿ ಸ್ವಚ್ಛಗೊಳಿಸಿ: ಶಾಸಕ ಕೆ.ಎನ್.ರಾಜಣ್ಣ ಸೂಚನೆ
    • ಕುಣಿಗಲ್: ಮಾ.25ರಂದು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ
    • ಮಧುಗಿರಿ: ಮಾರ್ಚ್ 7ರಿಂದ ಕಬಡ್ಡಿ ಪಂದ್ಯಾಟ
    • ಮೋದಿ ಕಾರ್ಯಕ್ರಮಕ್ಕೆ ₹33 ಕೋಟಿ ವೆಚ್ಚ; ಜನರನ್ನು ಕರೆತರಲು ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ ₹6.5 ಕೋಟಿ!
    • ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ, ಸದ್ಯ ಹಾಲು ಮಾರೋ ಕೆಲಸ ಕೊಟ್ಟಿದ್ದಾರೆ:  ಡಿ.ಕೆ.ಸುರೇಶ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವಿನಿಂದ ಕಚ್ಚಿಸಿಕೊಂಡ ಯುವಕ..!
    ರಾಷ್ಟ್ರೀಯ ಸುದ್ದಿ July 14, 2024

    ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವಿನಿಂದ ಕಚ್ಚಿಸಿಕೊಂಡ ಯುವಕ..!

    By adminJuly 14, 2024No Comments2 Mins Read

    ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಯುವಕನೊಬ್ಬನಿಗೆ ಏಳು ಬಾರಿ ಹಾವು ಕಚ್ಚಿರುವ ಘಟನೆಯೊಂದು ಉತ್ತರಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.

    ಯುವಕನನ್ನು ಉತ್ತರಪ್ರದೇಶ ಜಿಲ್ಲೆಯ ಸೌರಾ ಗ್ರಾಮದ ನಿವಾಸಿ ವಿಕಾಸ್ ದುಬೆ ಎಂದು ಗುರುತಿಸಲಾಗಿದೆ. ಈತ ಕಳೆದ ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವಿನಿಂದ ಕಚ್ಚಿಸಿಕೊಂಡರೂ ಬದುಕಿದ್ದಾನೆ. ಇದೀಗ ಏಳನೇ ಬಾರಿ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಇಷ್ಟು ಬಾರಿ ಹಾವು ಕಚ್ಚಿದರೂ ಆತನ ಅದೃಷ್ಟ ಚೆನ್ನಾಗಿತ್ತು. ಇದಕ್ಕೆ ಈತನಿಗೆ ಚಿಕಿತ್ಸೆ ನೀಡುವ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.


    Provided by
    Provided by

    ವಿಕಾಸ್ ದುಬೆಗೆ ಜೂನ್‌ 2ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿತ್ತು. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದ. ಜೂನ್‌ 10ರಂದು ಮತ್ತೆ ಎರಡನೇ ಬಾರಿ ಹಾವು ಕಚ್ಚಿದೆ. ಈ ವೇಳೆಯೂ ಅದೇ ಆಸ್ಪತ್ರೆಗೆ ತೆರಳಿ ಅದೇ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಾನೆ. ಬಳಿಕ ಹಾವು ಕಂಡಾಗ ಭಯಪಡುತ್ತಿದ್ದ ಎನ್ನಲಾಗಿದೆ. ಜೂನ್‌ 17ರಂದು ಮತ್ತೆ ಹಾವಿನ ದಾಳಿಗೊಳಗಾಗಿದ್ದಾನೆ. ಈ ವೇಳೆ ಆತ ಗಾಬರಿಗೊಂಡಿದ್ದರಿಂದ ಮೂರ್ಛೆ ಕೂಡ ಹೋಗಿದ್ದ ಎನ್ನಲಾಗಿದೆ ಆದರೂ ಹಿಂದೆ ಚಿಕಿತ್ಸೆ ನೀಡಿದ ವೈದ್ಯರೇ ಚಿಕಿತ್ಸೆ ನೀಡಿ ಗುಣಮುಖನಾಗಿ ಮನೆಗೆ ಬಂದಿದ್ದಾನೆ. ಇದಾಗಿ ಕೆಲ ದಿನಗಳು ಬಿಟ್ಟು ನಾಲ್ಕನೇ ಬರಿ ಹಾವಿನ ಕಡಿತಕ್ಕೊಳಗಾದಾಗ ಮನೆಯವರು ಮತ್ತೆ ಆತನನ್ನು ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ವೈದ್ಯರು, ಸ್ವಲ್ಪ ಸಮಯ ಊರು ಬಿಟ್ಟು ಬೇರೆ ಕಡೆ ಇರುವಂತೆ ದುಬೆಗೆ ಸಲಹೆ ನೀಡಿದ್ದಾರೆ.

    ಅದರಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ದುಬೆ ತನ್ನ ಮನೆ ಬಿಟ್ಟು ಫತೇಹ್‌ ಪುರ್‌ ನ ರಾಧಾ ನಗರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಇರಲು ನಿರ್ಧರಿಸಿ ಅಲ್ಲಿಗೆ ತೆರಳಿದ್ದಾನೆ. ಆದರೆ ಆತನ ಅದೃಷ್ಟ ಸರಿ ಇರಲಿಲ್ಲ. ಅಲ್ಲಿಯೂ ಹಾವಿನ ದಾಳಿಗೆ ಒಳಗಾಗಿದ್ದಾನೆ ಮತ್ತೆ ಪೋಷಕರು ಆತನನ್ನು ತನ್ನ ಊರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಏಳನೇ ಬಾರಿ ಹಾವು ಕಚ್ಚಿದ ಪರಿಣಾಮ ದುಬೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    Comments are closed.

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್: ‘ಐಕಾನ್ ಆಫ್ ಡೆಕ್ಕನ್ ಸೀಸನ್–3’ ಫ್ಯಾಷನ್ ಮಾಡೆಲಿಂಗ್ ಸ್ಪರ್ಧೆ; ನೋಂದಣಿ ಆರಂಭ

    March 5, 2026

    ಬೀದರ್: ನಗರದ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಎಸ್.ಪಿ. ಮಾಡೆಲಿಂಗ್ ಹಬ್ ವತಿಯಿಂದ ‘ಐಕಾನ್ ಆಫ್ ಡೆಕ್ಕನ್ ಸೀಸನ್–3…

    ಹದಗೆಟ್ಟ ರಸ್ತೆ; ಸಂಚಾರ ಬಲು ಹೈರಾಣ: ಶೇಂಬೆಳ್ಳಿ ಗ್ರಾಮಸ್ಥರ ಆಕ್ರೋಶ

    March 5, 2026

    ಹಸೆ ಮಣೆ ಮೇಲೆ ಕುಂಡ್ರಿಸಿ ಕೊಡಬೇಕಿತ್ತೇನೋ ದುಡ್ಡ? | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 2)

    March 5, 2026

    ಮಳೆಗಾಲ ಆರಂಭಕ್ಕೂ ಮುನ್ನ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿ ಸ್ವಚ್ಛಗೊಳಿಸಿ: ಶಾಸಕ ಕೆ.ಎನ್.ರಾಜಣ್ಣ ಸೂಚನೆ

    March 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.