nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ

    July 30, 2026

    ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ

    July 30, 2026

    ಗಡಿ ಚೆಕ್‌ ಪೋಸ್ಟ್‌ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್‌ ಪಿ ಬಲ್ಲಪ್ಪ ನಂದಗಾಂವೆ ಸೂಚನೆ

    July 30, 2026
    Facebook Twitter Instagram
    ಟ್ರೆಂಡಿಂಗ್
    • ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ
    • ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ
    • ಗಡಿ ಚೆಕ್‌ ಪೋಸ್ಟ್‌ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್‌ ಪಿ ಬಲ್ಲಪ್ಪ ನಂದಗಾಂವೆ ಸೂಚನೆ
    • ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ
    • ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ
    • ಸಿದ್ಧರಾಮಯ್ಯರ ‘ಅನ್ನಭಾಗ್ಯ’: ಎಷ್ಟೇ ಬರಗಾಲ ಬಂದರೂ ಊಟಕ್ಕೆ ತೊಂದರೆಯಾಗದು: ಕೆ.ಎನ್. ರಾಜಣ್ಣ
    • ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ್ದ ಬಸವಣ್ಣ:  ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಡಾ.ಎನ್.ತಿಪ್ಪೇಸ್ವಾಮಿ
    • ವಿಜ್ಞಾನ ಕಾಲೇಜಾಗಿ ಮೇಲ್ದರ್ಜೆಗೇರಿದ ಮೊರಾರ್ಜಿದೇಸಾಯಿ ವಸತಿ ಶಾಲೆ:  ಶಾಸಕರು, ಎಂಎಲ್ಸಿ ಪ್ರಯತ್ನದಿಂದ ಬಡವನಹಳ್ಳಿಗೆ ಪ.ಪೂ.ಕಾಲೇಜು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿ.ಹೊಸಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದಿಂದ  ಕಲಿಕಾ ಸಾಮಗ್ರಿ ವಿತರಣೆ
    ಪಾವಗಡ July 27, 2024

    ಬಿ.ಹೊಸಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದಿಂದ  ಕಲಿಕಾ ಸಾಮಗ್ರಿ ವಿತರಣೆ

    By adminJuly 27, 2024No Comments2 Mins Read
    pavagada

    ಪಾವಗಡ:  ತಾಲ್ಲೂಕಿನ ಅತ್ಯಂತ ಹಿಂದುಳಿದ ಹಾಗೂ ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಇರುವ ಬಿ.ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 150 ಮಕ್ಕಳಿಗೆ ಶಾಲಾ ಬ್ಯಾಗು, ನೋಟ್ ಪುಸ್ತಕಗಳು ಹಾಗೂ ನಿತ್ಯ ಉಪಯೋಗಿಸುವ ಕುಡಿಯುವ ನೀರಿನ ಬಾಟಲ್‌ ಗಳನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ವಿತರಿಸಲಾಯಿತು.

    ಕಾರ್ಯಕ್ರಮವು ಈ ಕುಗ್ರಾಮವಾದ ಬಿ.ಹೊಸಹಳ್ಳಿಯಲ್ಲಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಪೂಜ್ಯ ಸ್ವಾಮೀಜಿಯವರನ್ನು ಗ್ರಾಮಸ್ಥರು ಸ್ವಾಗತಿಸಿದರು. ಬಳಿಕ ಶಾಲೆಯ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

    ಮಕ್ಕಳಿಗೆ ಶಾಲಾ ಬ್ಯಾಗು ಮತ್ತಿತರ ಪರಿಕರಗಳನ್ನು ವಿತರಿಸಿದ ಬಳಿಕ  ಮಾತನಾಡಿದ ಸ್ವಾಮಿ ಜಪಾನಂದಜೀ ಮಹಾರಾಜ್, ಬಿ.ಹೊಸಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಭಾರತೀಯ ಸಂಸ್ಕೃತಿಯ, ಪರಂಪರೆಯನ್ನು ಉಳಿಸಿಕೊಂಡು ಬರಲು ಒತ್ತುಕೊಟ್ಟಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.

    ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಅತ್ಯಂತ ಕುಗ್ರಾಮವಾಗಿರುವ ಹಾಗೂ ಮುಖ್ಯ ವಾಹಿನಿಯಿಂದ ದೂರವಾಗಿರುವ ಶಾಲೆಗಳನ್ನು ಗುರುತಿಸಿ ಪ್ರತಿ ವರ್ಷ ಈ ತೆರನಾದ ಸೇವೆಯನ್ನು ಮಾಡುತ್ತಿದ್ದೇವೆ. ಈ ಬಾರಿ ಬಿ.ಹೊಸಹಳ್ಳಿಗೆ ಭೇಟಿ ನೀಡಿದ್ದು, ಇಲ್ಲಿಯ ಸ್ಥಿತಿಗತಿಗಳನ್ನು ಕಂಡು ನಿಜಕ್ಕೂ ಸಹಕಾರ ನೀಡಿದ್ದು, ಇಲ್ಲಿಯ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಹ ಸೇವೆಯನ್ನು ಮಾಡುತ್ತೇವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿ.ಹೊಸಹಳ್ಳಿ ಗ್ರಾಮದ ಶ್ರೀ ಪ್ರಜ್ವಲರೆಡ್ಡಿ ಇತ್ತೀಚಿನ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 710 ಅಂಕಗಳನ್ನು ಪಡೆದು ರಾಷ್ಟ್ರದಲ್ಲಿಯೇ ಹೆಸರು ಮಾಡಿದ್ದಾನೆ. ಇಂತಹ ಅನೇಕಾನೇಕ ವಿದ್ಯಾರ್ಥಿಗಳು ಗ್ರಾಮಗಳಲ್ಲಿದ್ದು ಅದರಲ್ಲಿಯೂ ಬಿ.ಹೊಸಹಳ್ಳಿಯಂತಹ ಅತ್ಯಂತ ಕುಗ್ರಾಮ, ಸುತ್ತಲೂ ಬೆಟ್ಟಗುಡ್ಡಗಳು ಹಾಗೂ ಅರಣ್ಯ ಪ್ರದೇಶವನ್ನು ಹೊಂದಿರುವಂತಹ ಜೊತೆಯಲ್ಲಿ ಸರಿಯಾದ ವಾಹನ ಸೌಕರ್ಯಗಳಿಲ್ಲದೆ ಕಷ್ಟಪಟ್ಟು ಓದುತ್ತಿರುವ ಈ ಮಕ್ಕಳಿಗೆ ಎಷ್ಟು ಸಹಾಯ ಮಾಡಿದರೂ ಸಾಲದು. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಆದಷ್ಟು ಶ್ರೀ ರಾಮಕೃಷ್ಣ ಸೇವಾಶ್ರಮದ ಮೂಲಕ ಸಹಾಯಹಸ್ತ ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

    ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಜಿ ಶಾಸಕರಾದ  ತಿಮ್ಮರಾಯಪ್ಪ,  ಪೂಜ್ಯ ಸ್ವಾಮೀಜಿಯವರು ರಾಷ್ಟ್ರದಲ್ಲಿಯೇ ತಮ್ಮ ಸೇವಾ ಯಜ್ಞಗಳನ್ನು ಅವಿರತವಾಗಿ ನಡೆಸುತ್ತಾ ಇಂದು ಬಿ.ಹೊಸಹಳ್ಳಿಯ ಸೌಭಾಗ್ಯದಂತೆ ಈ ಗ್ರಾಮಕ್ಕೆ ತಲುಪಿದ್ದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ, ಈ ಕುಗ್ರಾಮದ ಶಾಲೆಗೆ ಶಾಶ್ವತ ಶಿಕ್ಷಕರೇ ಇಲ್ಲ, ಕೇವಲ ನಿಯೋಜಿತರಾದ ಶಿಕ್ಷಕರು ಕೆಲಸ ಮಾಡುತ್ತಿದ್ದು, ಸದರಿ ಶಾಲೆಗೆ ಶಾಶ್ವತ ಶಿಕ್ಷಕರನ್ನು ನೇಮಿಸಬೇಕೆಂದು ಸರ್ಕಾರದ ಗಮನಕ್ಕೆ ತಂದರು.

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು ಭಾಗವಹಿಸಿದ್ದರು. ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಕೆ.ಎಸ್.ರಾಮಮೂರ್ತಿ, ಶ್ರೀ ಬಾಲಾಜಿ ಹಾಗೂ ಶ್ರೀ ವೀರೇಶ್ ರವರು ಉಪಸ್ಥಿತರಿದ್ದರು.

    ವರದಿ: ನಂದೀಶ್ ನಾಯ್ಕ, ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ

    July 30, 2026

    ಮಾಶಾಸನ ಸ್ಥಗಿತ ಖಂಡನೆ: ಸರ್ಕಾರ ದಿವಾಳಿ ಹಂತ ತಲುಪಿದೆ: ಕೆ.ಎಂ. ತಿಮ್ಮರಾಯಪ್ಪ ಆರೋಪ

    July 29, 2026

    ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ

    July 28, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ

    July 30, 2026

    ಸರಗೂರು / ಎಚ್.ಡಿ. ಕೋಟೆ:  ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಅತಿ ದೊಡ್ಡ ಶಾಪವಾಗಿದ್ದು, ಇದರ ವಿರುದ್ಧ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು.…

    ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ

    July 30, 2026

    ಗಡಿ ಚೆಕ್‌ ಪೋಸ್ಟ್‌ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್‌ ಪಿ ಬಲ್ಲಪ್ಪ ನಂದಗಾಂವೆ ಸೂಚನೆ

    July 30, 2026

    ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ

    July 30, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.