nammatumakuru

    Subscribe to Updates

    Get the latest creative news from FooBar about art, design and business.

    What's Hot

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಮುಳ್ಳಯ್ಯನಗಿರಿಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಟಿಟಿ: 13 ಪ್ರವಾಸಿಗರು ಅದೃಷ್ಟವಶಾತ್‌ ಪಾರು!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026
    Facebook Twitter Instagram
    ಟ್ರೆಂಡಿಂಗ್
    • ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!
    • ಮುಳ್ಳಯ್ಯನಗಿರಿಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಟಿಟಿ: 13 ಪ್ರವಾಸಿಗರು ಅದೃಷ್ಟವಶಾತ್‌ ಪಾರು!
    • ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ
    • ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಸ್ಪಷ್ಟನೆ ನೀಡಿದ ಆರ್.ವಿ.ದೇಶಪಾಂಡೆ
    • ಇಂಧನ ದರ ಏರಿಕೆ: ರಾಜಕೀಯ ಮಾಡದೆ ವ್ಯಾಟ್ ಕಡಿಮೆ ಮಾಡಿ; ಸಿಎಂ ಸಿದ್ದರಾಮಯ್ಯಗೆ ಆರ್.ಅಶೋಕ್ ಒತ್ತಾಯ
    • ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಖಡಕ್ ಎಚ್ಚರಿಕೆ!
    • ಬೇಸಿಗೆ ಕಾಲದಲ್ಲಿ ಲಿಂಬೆಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡುವುದು ಹೇಗೆ?
    • ವಿಶ್ವದ ಅತ್ಯಂತ ದೊಡ್ಡ ಶಕ್ತಿ ತಾಯಿ: ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶ್ರಾವಣ ಮಾಸಕ್ಕೆ ಸಜ್ಜಾದ ಶನೇಶ್ವರನ ದೇಗುಲ:  ಮೂರು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಲಿರುವ ಭಕ್ತ ಗಣ
    ಪಾವಗಡ August 10, 2024

    ಶ್ರಾವಣ ಮಾಸಕ್ಕೆ ಸಜ್ಜಾದ ಶನೇಶ್ವರನ ದೇಗುಲ:  ಮೂರು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಲಿರುವ ಭಕ್ತ ಗಣ

    By adminAugust 10, 2024No Comments2 Mins Read
    pavagada

    ಪಾವಗಡ: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸುಪ್ರಸಿದ್ಧಿ ಹೊಂದಿರುವ ದೇವಸ್ಥಾನ ತುಮಕೂರು ಜಿಲ್ಲೆಯ ಪಾವಗಡ  ಶನಿ ಮಹಾತ್ಮನ ಕ್ಷೇತ್ರ. ಗಡಿಭಾಗದಲ್ಲಿರುವ ಪಾವಗಡದ ಶನೇಶ್ವರ ದೇವಸ್ಥಾನ. ಇಲ್ಲಿನ ವಿಶೇಷವೇನೆಂದರೆ ಇಲ್ಲಿಗೆ ಬರುವ ಭಕ್ತಾದಿಗಳು ಬಹುತೇಕ ಉತ್ತರ ಕರ್ನಾಟಕ ಸೀಮಾಂಧ್ರ  ಮತ್ತು ತೆಲಂಗಾಣದಿಂದ ಬರುತ್ತಾರೆ, ಇಲ್ಲಿಗೆ ಬರುವಂತಹ ಭಕ್ತಾದಿಗಳು ಶನಿ ದೋಷ ನಿವಾರಣೆಗೆ ದೇವಸ್ಥಾನದಲ್ಲಿ ಸರ್ವ ಸೇವೆ, ನವಗ್ರಹ ಪೂಜೆ ತೈಲಾಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುತ್ತಾರೆ.

    ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿವಿಧಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ  ಭಕ್ತಾಧಿಗಳು ಶನೇಶ್ವರಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಸಾಮಾನ್ಯ ಜನರು, ರಾಜಕಾರಣಿಗಳು, ಸಿನಿಮಾ ತಾರೆಯರು, ಉದ್ಯಮಿಗಳು. ಸರ್ಕಾರಿ ಅಧಿಕಾರಿಗಳು ಎಲ್ಲ ವರ್ಗದವರು ಶನೇಶ್ವರ ಸ್ವಾಮಿ ದರ್ಶನ ಪಡೆಯುತ್ತಾರೆ. ಉದ್ಯೋಗ ಆಕಾಂಕ್ಷಿಗಳು,  ಮಕ್ಕಳಿಲ್ಲದವರು, ಮದುವೆ ಯೋಗ ಇಲ್ಲದವರು ಸ್ವಾಮಿಯ ದೇವಾಲಯಕ್ಕೆ ಹರಕೆ ಹೊತ್ತು ಬರುತ್ತಾರೆ. 3 ತಿಂಗಳಲ್ಲಿ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ವಿಶಿಷ್ಟ ಶಕ್ತಿದೇವತೆ ಸೀತಲಾದೇವಿಯು ಸಹ ದೇವಸ್ಥಾನದ ಪ್ರಾಂಗಣದ ಸನ್ನಿಧಿಯಲ್ಲಿದೆ.


    Provided by
    Provided by

    ಸ್ವಾಮಿಯ ದರ್ಶನಕ್ಕೆ ಭಕ್ತರ ಸಾಗರವೇ ಬರುವುದರಿಂದ ದರ್ಶನಕ್ಕೆಂದು ಬರುವ ಭಕ್ತಾಧಿಗಳಿಗೆ ವಿಶೇಷವಾಗಿ ಮಳೆ, ಬಿಸಿಲು ಸಮಸ್ಯೆ ಆಗದಂತೆ ಸರತಿಯಲ್ಲಿ ನಿಂತು ದರ್ಶನಕ್ಕೆ ಬರುವ ಭಕ್ತರು ಸರತಿ ಸಾಲಿನಲ್ಲಿ ಸುಗಮವಾಗಿ ಬರುವಂತೆ ಗ್ರಿಲ್ ಗಳು ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

    ದೇವಸ್ಥಾನದ ಒಳಗಡೆ ಹಾಗೂ ಅಕ್ಕಪಕ್ಕದಲ್ಲಿ ತೆಂಗಿನಕಾಯಿ ಹೊಡೆಯವುದನ್ನು ನಿಷೇಧಿಸಲಾಗಿದೆ.

    ಸೇವೆಗಳು: ಶನೀಶ್ವರ ದೇವಸ್ಥಾನದಲ್ಲಿ ನಿತ್ಯ ನಡೆಯುವ ‘ಸರ್ವ ಸೇವೆ’ ಪ್ರಮುಖವಾದದು. ಭಕ್ತರು ಇಲ್ಲಿಗೆ ಬರುವುದು ಸರ್ವ ಸೇವೆಗಾಗಿ. ಶನೇಶ್ವರ ಸ್ವಾಮಿಗೆ ಪ್ರಧಾನ ಪೂಜೆ, ಸೀತಲಾಂಬೆಗೆ ಕುಂಕುಮಾರ್ಚನೆ, ನವಗ್ರಹಗಳಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ ಇತ್ಯಾದಿಗಳೂ ‘ಸರ್ವ ಸೇವೆ’ಯಲ್ಲಿ ಒಳಗೊಂಡಿವೆ.

    ಮುಂಜಾನೆ 3 ಗಂಟೆಯಿಂದ ವಿಶೇಷ ಪೂಜೆ ರಾತ್ರಿ 7 ಗಂಟೆಗೆ ಮಹಾ ಮಂಗಳ ಆರತಿ ಬೆಳಗಿಸಿ ಪೂಜೆಯನ್ನು ಮಾಡಲಾಗುತ್ತಿದೆ.

    ಬರುವ ಭಕ್ತಾಧಿಗಳಿಗೆ ತುರ್ತು ಆರೋಗ್ಯ ಸೇವೆಯನ್ನು ಸಹ ಆರೋಗ್ಯ ಇಲಾಖೆ ವತಿಯಿಂದ ವ್ಯವಸ್ಥೆ ಮಾಡಲಾಗಿರುತ್ತದೆ.

    ಶನೇಶ್ವರ ದೇವಸ್ಥಾನಕ್ಕೆ ಮಾರ್ಗ:

    ಪಾವಗಡಕ್ಕೆ ಕೆ.ಎಸ್.ಆರ್.ಟಿ. ಬಸ್‌ಗಳ ಸೌಕರ್ಯವಿದೆ. ಪಾವಗಡ ತುಮಕೂರಿನಿಂದ 100 ಕಿ.ಮೀ, ಚಿತ್ರದುರ್ಗದಿಂದ 95 ಕಿ.ಮೀ,ಆಂದ್ರದ ಅನಂತಪುರದಿಂದ 100 ಕಿ.ಮೀ, ಬೆಂಗಳೂರಿನಿಂದ 160 ಕಿ.ಮೀ ದೂರದಲ್ಲಿದೆ.

    ಬೆಂಗಳೂರಿನಿಂದ ಬರುವವರು ಹಿಂದೂಪುರ ಮಾರ್ಗ ಹಾಗೂ ಕೊರಟಗೆರೆ, ಮಧುಗಿರಿ ಮಾರ್ಗವಾಗಿ ಬರಬಹುದು.

    ದೇವಸ್ಥಾನದ ಟ್ರಸ್ಟಿ ನಾ ವಸತಿಗೃಹಗಳಿವೆ 300,400,500 ರೂ ಮತ್ತು ಎ.ಸಿ ರೂಂಗೆ 950 ರೂ ದರದ ಕೊಠಡಿಗಳ ವಸತಿ ಗೃಹಗಳಿವೆ.

    ಇಂದು ಶ್ರಾವಣ ಮಾಸದ ಮೊದಲನೇ ಶನಿವಾರ ಆಗಿರುವುದರಿಂದ ನಮ್ಮ ನಿರೀಕ್ಷೇ 50,000  ರಿಂದ 60,000  ಭಕ್ತಾಧಿಗಳು ಬರುವ ನಿರಿಕ್ಷೆ ಇದೆ,ಆಗಮಿಸುವ ಭಕ್ತಾಧಿಗಳೆಲ್ಲರಿಗೂ ಸುಸಜ್ಜಿತವಾದ ಮೂಲ ಸೌಕರ್ಯವನ್ನು ಕಲ್ಪಿಸಲಾಗಿದೆ. ಕಳೆದ ಭಾರಿಯ ಸಮಸ್ಯೆಗಳನ್ನು ಈ ಭಾರಿ ಭಕ್ತತಾಧಿಗಳಿಗೆ ಆಗದಂತೆ ಕ್ರಮವಹಿಸಲಾಗಿದೆ. ಭಕ್ತರಿಗೆ ಶುಕ್ರವಾರ ಸಂಜೆ, ಶನಿವಾರ ಬೆಳಿಗ್ಗೆ ಮತ್ತು ಸಂಜೆ, ಭಾನುವಾರ ಬೆಳಿಗ್ಗೆ  ಅನ್ನಪೂರ್ಣೇಶ್ವರಿ ಟ್ರಸ್ಟ್ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿದೆ.

    —  ಆನಂದ್ ರಾವ್,  ಅಧ್ಯಕ್ಷರು, ದೇವಸ್ಥಾನದ ಕಾರ್ಯಕಾರಿ ಸಮಿತಿ


    ಶನೇಶ್ವರ ದೇವಸ್ಥಾನದ  ನೂರು ಮೀಟರ್ ದುರದಿಂದಲೇ ಮೊಬೈಲ್,ಆಭರಣ, ಹಣ ಹಾಗೂ ಜೇಬು ಕಳ್ಳತನ ಆಗದಂತೆ 360 ಡಿಗ್ರಿಯಲ್ಲಿ ಕಾರ್ಯನಿರ್ವಹಿಸುವ ಒಟ್ಟು 26 ಸಿ.ಸಿ ಕ್ಯಾಮೇರಗಳನ್ನು ಅಲವಡಿಸಲಾಗಿದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ನಮ್ಮ ಸಿಬ್ಬಂಧಿಯ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    —  ವೃತ್ತ ನಿರೀಕ್ಷಕರು, ಪಾವಗಡ ಪೊಲೀಸ್ ಠಾಣೆ


    ವರದಿ: ನಂದೀಶ್ ನಾಯ್ಕ,  ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಪಾವಗಡ ಗಡಿ ಗ್ರಾಮಗಳಲ್ಲಿ ಜಾನುವಾರು, ಕೇಬಲ್ ಕಳ್ಳರ ಹಾವಳಿ: ರೈತರು ಕಂಗಾಲು!

    May 25, 2026

    ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ

    May 24, 2026

    ಪಾವಗಡ: ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ

    May 24, 2026

    Comments are closed.

    Our Picks

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ನವದೆಹಲಿ/ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ’ಗೆ ಕೇಂದ್ರ ಗೃಹ ಸಚಿವಾಲಯ…

    ಮುಳ್ಳಯ್ಯನಗಿರಿಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಟಿಟಿ: 13 ಪ್ರವಾಸಿಗರು ಅದೃಷ್ಟವಶಾತ್‌ ಪಾರು!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಸ್ಪಷ್ಟನೆ ನೀಡಿದ ಆರ್.ವಿ.ದೇಶಪಾಂಡೆ

    May 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.