nammatumakuru

    Subscribe to Updates

    Get the latest creative news from FooBar about art, design and business.

    What's Hot

    10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ:  ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ |  ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ

    August 5, 2026

    ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್”  ಆಗಸ್ಟ್ 7ರಂದು  ಅದ್ದೂರಿ ರಿಲೀಸ್

    August 5, 2026

    ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್‌?

    August 4, 2026
    Facebook Twitter Instagram
    ಟ್ರೆಂಡಿಂಗ್
    • 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ:  ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ |  ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
    • ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್”  ಆಗಸ್ಟ್ 7ರಂದು  ಅದ್ದೂರಿ ರಿಲೀಸ್
    • ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್‌?
    • ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್‌ ಆರ್‌ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್‌.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ
    • ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ
    • ತುಮಕೂರು: ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಹಿರಿಯ ಶಾಸಕರಿಗೆ ಕಡೆಗಣನೆ; ಕಾಂಗ್ರೆಸ್‌ ನಲ್ಲಿ ಬಂಡಾಯದ ಕಾವು
    • ಕಾರವಾರ: ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್–ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್‌ ಲೈನ್ ಅರ್ಜಿ
    • ಗ್ಯಾಸ್ ಸಿಲಿಂಡರ್‌ ಕಳ್ಳತನ ಜಾಲ ಭೇದಿಸಿ ಬೀದರ್ ಪೊಲೀಸರು: ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್‌ ವಶ | ನಾಲ್ವರು ಆರೋಪಿಗಳ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಂದಿ ಜೋಗರ ಕಾಲೋನಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ದಿಢೀರ್ ಭೇಟಿ: ಇದು ನಮ್ಮತುಮಕೂರು ವರದಿ ಫಲಶ್ರುತಿ
    ತುಮಕೂರು October 21, 2024

    ಹಂದಿ ಜೋಗರ ಕಾಲೋನಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ದಿಢೀರ್ ಭೇಟಿ: ಇದು ನಮ್ಮತುಮಕೂರು ವರದಿ ಫಲಶ್ರುತಿ

    By adminOctober 21, 2024No Comments4 Mins Read
    koratagere

    ವಿಶೇಷ ವರದಿ : ಮಂಜುಸ್ವಾಮಿ ಎಂ.ಎನ್., ಕೊರಟಗೆರೆ

    ತುಮಕೂರು : ಗುಬ್ಬಿ ತಾಲೂಕಿನಲ್ಲಿ ಕಳೆದ 40 ವರ್ಷಗಳಿಂದಲೂ ಸಹ ಅಲೆಮಾರಿ ಹಂದಿಜೋಗಿ ಸಮುದಾಯದ ಜನರು ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗದ ಗುಡಿಸಲಿನಲ್ಲಿಯೇ ವಾಸವಾಗಿದ್ದರು. ಮಳೆಗಾಲ ಬಂದರೆ ತಗ್ಗು ಪ್ರದರ್ಶನದ ಗುಡಿಸಲಿಗೆ ನೀರು ಬರುತ್ತಿತ್ತು. ಮೂಲಭೂತ ಸೌಕರ್ಯಗಳಿಲ್ಲದೆ ಪ್ರತಿನಿತ್ಯ ತೀವ್ರ ನಿಕೃಷ್ಟ ಸ್ಥಿತಿಯಲ್ಲಿ ಬಿಸಿಲು ಮಳೆ ಎನ್ನದೆ ಜೀವನ ಸಾಗಿಸುತ್ತಿದ್ದರು. ಒಂದೆಡೆ ಪುಟ್ಟ ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲದೆ ಅನಕ್ಷರಸ್ಥರಾಗಿ ಜೀವನ ಸಾಗಿಸುತ್ತಿದ್ದರು ಸಾಂಕ್ರಾಮಿಕ ರೋಗಗಳಿಂದ ಕೆಲವು ಮಂದಿ ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟಿದ್ದರು. ಇದನ್ನೆಲ್ಲಾ ಗಮನಿಸಿದ ನೈಜ್ಯ ಹೋರಾಟಗಾರರ ವೇದಿಕೆ ಬೆಂಗಳೂರು ಮತ್ತು ಕಾಳಜಿ ಫೌಂಡೇಶನ್ ತುಮಕೂರು ಈ ಎರಡು ಸಂಘಟನೆಯ ದಿಟ್ಟ ಹೋರಾಟಗಾರರು ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಕಲ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿದ್ದರು.

    ಕಾಳಜಿ ಫೌಂಡೇಶನ್ ತುಮಕೂರು ಮತ್ತು ನೈಜ್ಯ ಹೋರಾಟಗಾರರ ವೇದಿಕೆಯ ಕಾರ್ಯಕರ್ತರು ಗುಬ್ಬಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇ ಓ ಮತ್ತು ಪ.ಪಂ. ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ನಮ್ಮ ತುಮಕೂರು ವಾಹಿನಿಯು ಸುದ್ದಿ ಬಿತ್ತರಿಸಲಾಗಿತ್ತು.

    ನಂತರ ಎಚ್ಚೆತ್ತ ಅಧಿಕಾರಿಗಳು ಸಾತೇನಹಳ್ಳಿ ಗ್ರಾಮದಲ್ಲಿ ಕಳೆದ ೨೦೧೭-೧೮ ರಲ್ಲಿ ಎರಡು ಎಕರೆ ಜಮೀನನ್ನು ಅಲೆಮಾರಿಗಳ ನಿವೇಶನಕ್ಕೆ ಮೀಸಲಿಟ್ಟ ಜಾಗದ ಸ್ಥಳ ಪರಿಶೀಲನೆ ಮಾಡಿ, ಅಲೆಮಾರಿಗಳಿಗೆ ಮುಖ್ಯವಾಗಿ ಅಗತ್ಯವಿರುವ ಮೂಲಭೂತ ಸೌಕರ್ಯಗಾಳದ ಕುಡಿಯುವ ನೀರು ಮತ್ತು ವಿದ್ಯುತ್ ಇತರೇ ಸೌಕರ್ಯಗಳನ್ನು ವ್ಯವಸ್ಥೆ ಮಾಡಲು  ಕಳೆದ ಗುರುವಾರ ತಾ.ಪಂ. ಇಓ ಶಿವಪ್ರಕಾಶ್ ನೇತೃತ್ವದ ತಂಡ ಭೇಟಿ ನೀಡಿತ್ತು ಹಾಗೂ ನಿವೇಶದ ಹಕ್ಕು ಪತ್ರ, ವಸತಿ, ಇನ್ನಿತರೆ ಸೌಕರ್ಯಗಳನ್ನು ನೀಡಲು ಕ್ರಮ ಕೈಗೊಂಡು ಎಲ್ಲವನ್ನೂ ಶೀಘ್ರವೇ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ನಿವೇಶನಕ್ಕೆ ಮೀಸಲಿಟ್ಟ ಜಾಗದಲ್ಲಿಯೇ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅಧಿಕಾರಿಗಳು ಸೂಚನೆ ನೀಡಿದ್ದರು.

    ನಂತರ ಕೇವಲ ಎರಡೇ ದಿನಗಳಲ್ಲಿ ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಅತಿ ಹೆಚ್ಚು ಮಳೆ ಆಗುತ್ತಿರುವ ಕಾರಣ ಅಲೆಮಾರಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದೆಂಬ ಸದುದ್ದೇಶದಿಂದ ಪಟ್ಟಣದ ಬಾಬು ಜಗಜೀವನ್ ರಾಮ್ ಭವನಕ್ಕೆ ಜಿಲ್ಲಾಡಳಿತದ ಮಾರ್ಗದರ್ಶನ ಪಡೆದು ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಾಶ್ರಿತರನ್ನು ಸ್ಥಳಾಂತರಿಸಿದರು.

    ಹಂದಿ ಜೋಗರ ಕಾಲೋನಿಗೆ ಉಪ ಲೋಕಾಯುಕ್ತರ ಭೇಟಿ: ಸಂತ್ರಸ್ತರ ಕುಟುಂಬಕ್ಕೆ ವಸತಿ ಕಲ್ಪಿಸುವ ಭರವಸೆ

    ಹಂದಿ ಜೋಗರ ಕಾಲೋನಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅಲೆಮಾರಿಗಳ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು 42 ಕುಟುಂಬಗಳ ಗುಡಿಸಲಿಗೆ ಭೇಟಿ ನೀಡಿ ನಿರಾಶ್ರಿತರ ಕಷ್ಟ-ಸುಖದ ಬಗ್ಗೆ ಸಮಗ್ರ ಮಾಹಿತಿ ಪಡೆದ ನಂತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಲ್ಲರಿಗೂ ವಸತಿ ಕಲ್ಪಿಸುವ ಭರವಸೆ ನೀಡಿದರು. ಕೆರೆ ಇರುವ ಜಾಗದಲ್ಲಿ ನಿರಾಶ್ರಿತರು ಇರುವುದು ಸೂಕ್ತವಲ್ಲ ಅವರಿಗೆ ಕೂಡಲೇ ಮೂಲಭೂತ ಸೌಲತ್ತು ನೀಡಿ ಶೀಘ್ರವೇ ವಸತಿಯನ್ನು ನಿರ್ಮಿಸಿ ಸಾತೇನಹಳ್ಳಿಯ ನಿವೇಶನಗಳತ್ತ ಕಳುಹಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದರು.

    ಅಲೆಮಾರಿ ಕುಟುಂಬಗಳಿಗೆ ಮಂಜೂರಾದ ನಾಲ್ಕು ಎಕರೆ ಜಾಗದಲ್ಲಿ 42 ನಿವೇಶನ ಹಂಚಿಕೆ ಆಗಲಿದೆ. ಗುರುತಿಸಲಾದ 65 ಕುಟುಂಬಗಳನ್ನು ಅಲ್ಲಿಗೆ ಶಿಫ್ಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. 15 ಮಂದಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದ್ದು ಉಳಿದವರಿಗೂ ಸಹ ಹಕ್ಕುಪತ್ರ ಸಿಗಲಿದೆ. ಹಂತ ಹಂತವಾಗಿ ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಸಾತೇನಹಳ್ಳಿಗೆ ಶಿಫ್ಟ್ ಮಾಡಿ ಕೆರೆಯ ಜಾಗವನ್ನು ಕೆರೆಯಾಗಿ ಉಳಿಸಿದರು ಕ್ರಮವಹಿಸಬೇಕಿದ್ದು ತಿಳಿಸಿದರು.

    ಅಲೆಮಾರಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ತಹಶೀಲ್ದಾರ್ ಗೆ ಸೂಚನೆ:

    ಅಲೆಮಾರಿ ಕುಟುಂಬಗಳ ಮಕ್ಕಳು ಯಾರು ಸಹ ಅವಿದ್ಯಾವಂತರಾಗಿ ಉಳಿಯಬಾರದು ಪುಟ್ಟ ಮಕ್ಕಳು ವಿದ್ಯಾವಂತರಾಗಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಜೀವನ ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಚಿಂತಿಸಿ ಕೂಡಲೇ ಸ್ಥಳೀಯ ವಸತಿ ಶಾಲೆಗೆ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣ ನೀಡಬೇಕೆಂದು ತಹಶೀಲ್ದಾರ್ ರವರಿಗೆ ಸೂಚಿಸಿದರು..

    ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಯಂತ್ ಕುಮಾರ್, ನೂರುನ್ನಿಸಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್, ಲೋಕಾಯುಕ್ತ ಎಸ್ ಪಿ ಲಕ್ಷ್ಮಿ ನಾರಾಯಣ್, ಎ ಸಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಬಿ ಆರತಿ, ತಾ ಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ವೀಣಾ, ಪ.ಪಂ. ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಹಾಜರಿದ್ದರು.


    ಹೆಚ್.ಎಂ.ವೆಂಕಟೇಶ್ ಹೇಳಿದಿಷ್ಟು:

    ಗುಬ್ಬಿ ಮಾವಿನಕಟ್ಟೆಕೆರೆ ಸಮೀಪ ಹಂದಿ ಜೋಗಿ, ಬುಗುಡ ಜನಾಂಗದವರು 40 ವರ್ಷಗಳಿಗೂ ಹೆಚ್ಚು ಕಾಲದಿಂದ ಯಾವುದೇ ಮೂಲಭೂತ ಸೌಕರ್ಯಗಳಲ್ಲದೆ ಬದುಕು ಕಟ್ಟಿಕೊಂಡಿದ್ದರು.  ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಗುಡಿಸಿಲೊಳಗೆ ನೀರು ತುಂಬಿತು. ಗುಡಿಸಿಲಲ್ಲಿ ಮಲಗಿದ ಅಜ್ಜಿ ಒಬ್ಬಳು ನೀರಿನಲ್ಲಿ ಮಲಗಿ ಪ್ರಾಣಬಿಟ್ಟಳು. ಈ ಘಟನೆಯು ನಮಗೆ ಮನಕುಲುಕುವಂತೆ ಮಾಡಿತು.  ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆಯೇ? ಎಂಬ ಪ್ರಶ್ನೆ ನಮ್ಮಲ್ಲೇ ಉದ್ಭವಾಯಿತು.

    ಕಾಳಜಿ ಫೌಂಡೇಶನ್ ನೊಂದಿಗೆ ಚರ್ಚೆ ನಡೆಸಿ ಇಲ್ಲಿನ 42 ಕುಟುಂಬಗಳಿಗೆ 8 ವರ್ಷಗಳ ಹಿಂದೆ ಮಂಜೂರಾದ ಜಮೀನಿನಲ್ಲಿ ಮೂಲಭೂತ ಸೌಕರ್ಯ ಕೊಡಬೇಕು ಮತ್ತು ತಕ್ಷಣ ಈ ನರಕ ಯಾತನೆ  ಅನುಭವಿಸುತ್ತಿರುವ ಈ ಅನಕ್ಷರಸ್ತ, ಧ್ವನಿ ಇಲ್ಲದವರನ್ನು ಸರ್ಕಾರ ತಾತ್ಕಾಲಿಕ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಬೇಕು.   ಸ್ವಾತೇನಹಳ್ಳಿಯಲ್ಲಿ  ಮಂಜೂರಾದ ಜಮೀನಿನಲ್ಲಿ ಮೂಲಭೂತ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಲ್ಲಿಗೆ ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ತಾಲೂಕ್ ಆಡಳಿತ ಮುಂದೆ ಮನವಿ ಸಲ್ಲಿಸಲಾಗಿತ್ತು.

    ಗುಬ್ಬಿ ತಾಸಿಲ್ದಾರ್ ಮತ್ತು ಪಟ್ಟಣ ಪಂಚಾಯಿತಿ ಚೀಪ್ ಆಫೀಸರ್ ನಮ್ಮ ಮನವಿಗೆ ಸ್ಪಂದಿಸಿ ತಕ್ಷಣ ಅವರನ್ನು ಬಾಬು ಜಗಜೀವನ್ ರಾಮ್ ಭವನಕ್ಕೆ ಸ್ಥಳಾಂತರ ಮಾಡಿ ಸ್ವಾತೇನಹಳ್ಳಿ ಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಪ್ರಾರಂಭ ಮಾಡಿರುವುದು ಶ್ಲಾಘನೀಯ ವಿಷಯವಾಗಿದೆ.

    ಏಳೆಂಟು ವರ್ಷಗಳಿಂದ  ನೆನೆಗುದಿಗೆ ಬಿದ್ದ ಪ್ರಕರಣವು ನಮ್ಮ ಹೋರಾಟದ ಒಂದೇ ವಾರದಲ್ಲಿ  ಕಾರ್ಯರೂಪಕ್ಕೆ ಬರುತ್ತಿರುವುದನ್ನು ನೋಡಿದರೆ. ನಾವು ಸರಿಯಾದ ದಾರಿಯಲ್ಲಿ ಇದ್ದೇವೆ ಎಂಬುದು ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ಪಾಲಿಸದೆ ಇದ್ದಲ್ಲಿ ಹೋರಾಟಗಾರರು ಬೀದಿಗೆ ಇಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ.

    –ಹೆಚ್.ಎಂ.ವೆಂಕಟೇಶ್,   ಹಿರಿಯ ಸಾಮಾಜಿಕ ಹೋರಾಟಗಾರರು,  ನೈಜ್ಯ ಹೋರಾಟಗಾರರ ವೇದಿಕೆ

     

    gubbi tumakuru


    ಸುಮಾರು 40 ವರ್ಷಗಳಿಂದ ಸೂರಿಲ್ಲದೆ, ಮೂಲಭೂತ ಸೌಕರ್ಯಗಳಿಲ್ಲದೆ, ವಿಷ–ಜಂತುಗಳ ದಾಳಿಯಿಂದ ತತ್ತರಿಸಿ ಹೋಗಿದ್ದ ಅಲೆಮಾರಿಗಳಿಗೆ ಇದೀಗ ಅಧಿಕಾರಿಗಳ ನಿರಂತರ ಪರಿಶ್ರಮದಿಂದ ಹೊಸ ಜೀವನ ಪ್ರಾರಂಭವಾಗುತ್ತಿರುವುದು ಸಂತಸದ ಸುದ್ದಿಯಾಗಿದೆ.  ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ತುಮಕೂರು ಸದಾಕಾಲ ನಿರಾಶ್ರಿತರ ಪರ ದಿಟ್ಟ ಧ್ವನಿಯಾಗಿ ಕೆಲಸ ಮಾಡುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕಾನೂನಿನ ಪ್ರಕಾರ ಸಕಲ ಸೌಲಭ್ಯಗಳನ್ನು ಕಲ್ಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಮಾನ್ಯ ಉಪ ಲೋಕಾಯುಕ್ತರು ನೀಡಿರುವ ಭರವಸೆಗಳು ಶೀಘ್ರವೇ ನಿರಾಶ್ರಿತರಿಗೆ ತಲುಪಬೇಕು.

    – ನಟರಾಜ್ ಜಿ.ಎಲ್. ಅಧ್ಯಕ್ಷರು, ಕಾಳಜಿ ಫೌಂಡೇಶನ್ ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ:  ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ |  ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ

    August 5, 2026

    ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ

    August 4, 2026

    560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ

    August 4, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ:  ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ |  ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ

    August 5, 2026

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ಮುಂಗಾರು ಮಳೆಯಿಲ್ಲದೇ ಕರ್ನಾಟಕದ 28 ಜಿಲ್ಲೆಗಳು ಬರಪೀಡಿತ ಪ್ರದೇಶ. ರಾಜ್ಯ ಸರಕಾರ ಕೇಂದ್ರ…

    ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್”  ಆಗಸ್ಟ್ 7ರಂದು  ಅದ್ದೂರಿ ರಿಲೀಸ್

    August 5, 2026

    ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್‌?

    August 4, 2026

    ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್‌ ಆರ್‌ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್‌.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ

    August 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.