ಸರಗೂರು: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಸದಸ್ಯತ್ವ ಅಭಿಯಾನವು ಭಾನುವಾರ ದೇವಲಾಪುರ ಹುಲ್ಲೇಮಾಳ, ತೆಲಗುಮಸಹಳ್ಳಿ, ಸಿದ್ದಾಪುರ, ತೆರಣಿಮುಂಟಿ ಗ್ರಾಮಗಳಿಗೆ ನಡೆಯಿತು.
ಸಂಘದ ಅಧ್ಯಕ್ಷ ನಟರಾಜು ಸಮ್ಮುಖದಲ್ಲಿ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯ್ತು. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹೆಚ್ಚಿನ ಕೆಲಸ ಮಾಡುವ ನಿಟ್ಟಿನಲ್ಲಿ ಈ ಸದಸ್ಯತ್ವ ಅಭಿಯಾನ ನಡೆಸಲಾಯ್ತು.
ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ 100 ರಿಂದ 200 ಜನರು ಸದಸ್ಯತ್ವ ಪಡೆದುಕೊಂಡು ನಮ್ಮ ಜನಾಂಗವನ್ನು ರಾಷ್ಟ್ರ ಮಟ್ಟಕ್ಕೆ ತೋರಿಸಬೇಕು. ನಮ್ಮ ಜನಾಂಗದ ಯುವ ಪೀಳಿಗೆ ಮುಂದಿನ ಭವಿಷ್ಯಗಳಿಗೆ ಮಾದರಿವಾಗುವ ನಿಟ್ಟಿನಲ್ಲಿ, ಎಲ್ಲಾ ಗ್ರಾಮದ ಮುಖಂಡರು ಮತ್ತು ಯುವಕರು ನಮ್ಮ ಜೊತೆ ಕೈಜೋಡಿಸಲು ಮುಂದೆ ಬನ್ನಿ ಎಂದು ಕರೆ ನೀಡಿದರು.
ನಾವುಗಳು ತಾಲ್ಲೂಕು ಮಟ್ಟದಿಂದ 1,000 ಸಾವಿರಕ್ಕಿಂತ ಹೆಚ್ಚು ಸದಸ್ಯತ್ವ ಮಾಡಿ ಜಿಲ್ಲಾ ಮತ್ತು ರಾಜ್ಯಕ್ಕೆ ಕಳಿಸಿ, ನಂತರ ರಾಷ್ಟ್ರಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಮಾಹಿತಿಯನ್ನು ನೀಡಲಾಗುವುದು ಹೇಳಿದರು.
ಈ ಸಂದರ್ಭದಲ್ಲಿ ಬಸವ ಬಳಗ ಅಧ್ಯಕ್ಷ ಗಣಪತಿ, ಕಾರ್ಯದರ್ಶಿ ಬಸವರಾಜು ಎಂ.ಎನ್., ನಿರ್ದೇಶಕರಾದ ಬಿ. ಮಾದಪ್ಪ, ಸಿದ್ದಪ್ಪ, ಜಯಕುಮಾರ್, ಶಿವಾನಂದ, ಮುಖಂಡರಾದ ಹಂಚಿಪುರ ಬಸವಣ್ಣ, ಗಿರೀಶ್, ನಂಜಪ್ಪ, ಯುವ ಸಮಿತಿ ಅಧ್ಯಕ್ಷ ನಂದೀಶ, ಬಸವರಾಜ್, ರವೀಶ್, ಲೋಕೇಶ್, ತೆಲುಗು ಮಸಳ್ಳಿ ಗ್ರಾಮದ ಮಲ್ಲಪ್ಪ, ಗುರುಮಲ್ಲಪ್ಪ, ದೊಡ್ಡಣ್ಣ, ನಾಗರಾಜಪ್ಪ, ಗಿರೀಶ್, ಚಂದ್ರಪ್ಪ, ಸುರೇಶ್ ಮುಖಂಡರಾದ ಹಂಚಿಪುರ ಬಸವಣ್ಣ, ಪರಶಿವಮೂರ್ತಿ, ಗ್ರಾಮದ ಮುಖಂಡರಾದ ಮಹದೇವಸ್ವಾಮಿ, ದೇವರಾಜು, ಪ್ರಕಾಶ್, ನಾಗೇಂದ್ರ ಸ್ವಾಮಿ, ಸುರೇಶ್, ಪ್ರತಾಪ್, ನಂದೀಶ್, ಮಹೇಶ್, ವಿರುಪಾಕ್ಷ, ಯೋಗೇಶ್, ಸಿದ್ದ ಮಲ್ಲಪ್ಪ ಎಲ್ಲಾ ಗ್ರಾಮದ ಮುಖಂಡರು ಹಾಗೂ ಯಜಮಾನರು ಹಾಜರಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q