nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೆಎಎಸ್ ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪ: ಸ್ನೇಹಮಯಿ ಕೃಷ್ಣ ಬಂಧನ

    February 21, 2026

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 20, 2026

    ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ

    February 20, 2026
    Facebook Twitter Instagram
    ಟ್ರೆಂಡಿಂಗ್
    • ಕೆಎಎಸ್ ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪ: ಸ್ನೇಹಮಯಿ ಕೃಷ್ಣ ಬಂಧನ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ
    • ಬಳ್ಳಾರಿ: ದ್ವಿತೀಯ PUC–15,652 ವಿದ್ಯಾರ್ಥಿಗಳು, SSLC–23,271 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
    • ಬಾಗಲಕೋಟೆ ಕಲ್ಲು ತೂರಾಟ ಘಟನೆ: ತಪ್ಪಿತಸ್ಥರು ಯಾರೇ ಆಗಿದ್ದರೂ  ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ
    • ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ: ಮುಖ್ಯ ಆರೋಪಿ ಸೇರಿ ಎಂಟು ಮಂದಿ ಅರೆಸ್ಟ್; ಫೆ.24ರವರೆಗೆ ನಿಷೇಧಾಜ್ಞೆ ಜಾರಿ
    • ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಎಂಬ್ರಾಯಿಡರಿ, ಫ್ಯಾಬ್ರಿಕ್ ಪೇಂಟಿಂಗ್ ತರಬೇತಿಗೆ ಅರ್ಜಿ ಸಲ್ಲಿಸಿ
    • ಕಾರವಾರ: ಛತ್ರಪತಿ ಶಿವಾಜಿ ಜಯಂತಿ ಆಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಾವಗಾಂವ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಶಾಸಕರ ಮನೆಗೆ ಸಮೀಪವಿರುವ ಗ್ರಾಮಕ್ಕೇ ನೀರಿಲ್ಲ!
    ಜಿಲ್ಲಾ ಸುದ್ದಿ December 18, 2024

    ಸಾವಗಾಂವ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಶಾಸಕರ ಮನೆಗೆ ಸಮೀಪವಿರುವ ಗ್ರಾಮಕ್ಕೇ ನೀರಿಲ್ಲ!

    By adminDecember 18, 2024No Comments2 Mins Read
    bidar

    ಔರಾದ: ತಾಲೂಕಿನ ಭೋಂತಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸಾವಗಾಂವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ.

    ಹನಿ ನೀರಿಗಾಗಿ ಇಲ್ಲಿಯ ಜನರು ಹಾಹಾಕಾರ ಪಡುವ ಪರಿಸ್ಥಿತಿ ಉದ್ಭವಿಸಿದೆ.  ಜೆಜೆಎಂ ಯೋಜನೆ ಮೂಲಕ ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಿದರೂ, ಜನರಿಗೆ ಹನಿ ನೀರು ಒದಗಿಸಲು ಅಧಿಕಾರಿಗಳಿಂದ ಆಗುತ್ತಿಲ್ಲ, ಸಂಪೂರ್ಣ ಕಳಪೆ ಮಟ್ಟ ಕಾಮಗಾರಿ ಮಾಡಿರೋದ್ರಿಂದ ಈ ಯೋಜನೆ ದಿಕ್ಕು ತಪ್ಪಿದೆ ಎಂದು ಮುಖಂಡ ಸುಧಾಕರ್ ಕೊಳ್ಳುರ ಅವರು ಆಕ್ರೋಶ ವ್ಯಕ್ತಪಡಿಸಿದರು.


    Provided by
    Provided by

    ಗ್ರಾಮದ ಮಿನಬಾಯಿ ಎನ್ನುವ ತುಂಬ ಗರ್ಭಿಣಿ ಮಗುವನ್ನು ಎತ್ತಿಕೊಂಡು  ನೀರಿಗಾಗಿ ಅಲೆದಾಡುತ್ತಿರುವ ದೃಶ್ಯ ನೋಡಿದರೆ . ಇಡೀ ಮನುಕುಲದ ತಲೆತಗ್ಗಿಸುವ ಘಟನೆಯಾಗಿದೆ ಎಂದು ಸುಧಾಕರ್ ಕೊಳ್ಳುರ  ಹೇಳಿದರು.

    ಪ್ರತಿ ವರ್ಷ ಇಲ್ಲಿಯ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತ್ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋತರ ವರ್ತಿಸುತ್ತಿರುವುದು  ಖಂಡನೀಯ ಎಂದು ಅವರು ಹೇಳಿದರು.

    ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿರುವ ಅಧಿಕಾರಿಗಳಿಗೆ ಹಾಗೂ ಗುತ್ತೇದಾರರುಗಳಿಗೆ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು.

    ತಾಲೂಕಿನ ಶಾಸಕರಾದ ಪ್ರಭು ಚೌವ್ಹಾಣ್ ಅವರು ವಾಸ ಮಾಡುವ ಗ್ರಾಮದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿ ಈ ಗ್ರಾಮ ಇದೆ. ಈ ಗ್ರಾಮದಿಂದಲೇ ದಿನಾಲು ಓಡಾಡುತ್ತಾರೆ ಅವರ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮ ಆಗಿದೆ. ಆದರೂ ಶಾಸಕರು ಯಾವುದೇ ಕ್ರಮ ಕೈಗೊಂಡಿಲ್ಲ ,  ಶಾಸಕ ಪ್ರಭು ಚೌವ್ಹಾಣ್ ಅವರ ಗಮನಕ್ಕೆ ಸುಮಾರು ಬಾರಿ ಗ್ರಾಮಸ್ಥರು ತಂದರೂ, ಶಾಸಕರು ಸಮಸ್ಯೆ ಬಗ್ಗೆ ಹರಿಸುವ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಬಾಲಾಜಿ, ಪದ್ಮಿನಿಬಾಯಿ, ಸೇವಂತಬಾಯಿ, ಮೀನಾಬಾಯಿ ಅವರು ಮಾತನಾಡಿ, ನಾವು ಎಷ್ಟೇ ಸರಿ ಗ್ರಾಮಕ್ಕೆ ನೀರು ಬಿಡಿ ಎಂದು ಮನವಿ ಮಾಡಿದರು ನಮ್ಮ ಸಮಸ್ಯೆ ಯಾರೂ ಕೇಳುತ್ತಿಲ್ಲ.  ನಾವುಗಳು ಮನೆ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಕೂಲಿ ಕೆಲಸಕ್ಕೆ ಹೋಗಬೇಕು. ಅಡುಗೆ ಮಾಡಲು ಕೂಡ ನೀರು ಇರುವುದಿಲ್ಲ. ನೀರಿಗಾಗಿ ಗ್ರಾಮದ ಹೊಲಗಳಿಗೆ ಅಲೆದಾಡಿ ನೀರು ತುಂಬುವುದರಲ್ಲೇ ಜೀವನ ಕಳೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ವಾರದಲ್ಲಿ ಸಮಸ್ಯೆ ಬಗೆಹರಿಸದೆ ಹೋದರೆ ತಾಲೂಕು ಪಂಚಾಯತ್ ಕಚೇರಿಯ ಎದುರು ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸುತ್ತವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.  ಹರಿದೇವ ಸಂಗನಾಳ, ಬಾಲಾಜಿ, ಮಹಾದೇವ , ತುಕಾರಾಮ ಮುಂತಾದವರು ಉಪಸ್ಥಿತರಿದ್ದರು.

    ವರದಿ: ಅರವಿಂದ ಮಲ್ಲಿಗೆ, ಬೀದರ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 20, 2026

    ಬಳ್ಳಾರಿ: ದ್ವಿತೀಯ PUC–15,652 ವಿದ್ಯಾರ್ಥಿಗಳು, SSLC–23,271 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

    February 20, 2026

    ಕಾರವಾರ: ಛತ್ರಪತಿ ಶಿವಾಜಿ ಜಯಂತಿ ಆಚರಣೆ

    February 20, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕೆಎಎಸ್ ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪ: ಸ್ನೇಹಮಯಿ ಕೃಷ್ಣ ಬಂಧನ

    February 21, 2026

    ಬೆಂಗಳೂರು: ಹಿರಿಯ ಕೆಎಎಸ್ (KAS) ಅಧಿಕಾರಿಯೊಬ್ಬರ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅಪಪ್ರಚಾರ ಮಾಡಿದ ಆರೋಪದ…

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 20, 2026

    ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ

    February 20, 2026

    ಬಳ್ಳಾರಿ: ದ್ವಿತೀಯ PUC–15,652 ವಿದ್ಯಾರ್ಥಿಗಳು, SSLC–23,271 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

    February 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.