nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ

    June 17, 2026

    ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ

    June 17, 2026

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026
    Facebook Twitter Instagram
    ಟ್ರೆಂಡಿಂಗ್
    • ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
    • ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ
    • ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    • ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
    • ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
    • ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
    • ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮ: ಸಚಿವ ಈಶ್ವರ ಖಂಡ್ರೆ
    • ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಲಿ: ನೇಮಿಚಂದ್ರ
    ತುಮಕೂರು March 8, 2025

    ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಲಿ: ನೇಮಿಚಂದ್ರ

    By adminMarch 8, 2025No Comments2 Mins Read
    mahila dinacharane

    Provided by
    Provided by

    ತುಮಕೂರು: ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಬೇಕು. ಮಹಿಳೆಯರನ್ನು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಗಂಡುಮಕ್ಕಳಲ್ಲಿ ಎಳವೆಯಲ್ಲೇ ಬಿತ್ತಬೇಕು. ಗಂಡ–ಹೆಂಡತಿ ಪರಸ್ಪರ ಗೌರವಿಸಿಕೊಂಡು ಬಾಳುವ ಮನೋಭಾವ ಬೆಳೆಯಬೇಕು ಎಂದು ಲೇಖಕಿ ನೇಮಿಚಂದ್ರ ಅಭಿಪ್ರಾಯಪಟ್ಟರು.

    ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಪರಿಸ್ಥಿತಿ ಮೊದಲಿಗಿಂತ ಈಗ ಸುಧಾರಿಸಿದೆ. ಆದರೆ ಸಮಾನತೆಯ ಸಂಸ್ಕೃತಿ ಇನ್ನೂ ನಮ್ಮಲ್ಲಿ ಪಕ್ವವಾಗಿಲ್ಲ ಎಂದರು.

    ಹುಟ್ಟಿನಿಂದಲೇ ಯಾರೂ ಶ್ರೇಷ್ಠರಲ್ಲ, ಕನಿಷ್ಠರೂ ಅಲ್ಲ. ಸ್ತ್ರೀ ಪುರುಷರ ವಿಷಯದಲ್ಲೂ ಇದು ಸರಿ. ಈ ಚಿಂತನೆ ಎಲ್ಲರಲ್ಲೂ ಮೂಡಿಬರಬೇಕು. ಆದರೆ ನಮ್ಮ ಸಮಾಜದ ದೃಷ್ಟಿಕೋನ ಬದಲಾಗಿಲ್ಲ. ಹೆಂಡತಿ ಗಂಡನಿಗೆ ವಿಧೇಯಳಾಗಿರಬೇಕು, ಗಂಡ ಹೆಂಡತಿಗೆ ಹೊಡೆಯುವುದು ಸರಿ ಎಂಬ ಮನಸ್ಥಿತಿ ಈಗಲೂ ಬಹುಪಾಲು ಇದೆ. ಹೀಗೆ ಭಾವಿಸುವವರಲ್ಲಿ ಮಹಿಳೆಯರೂ ಇದ್ದಾರೆ ಎಂಬುದು ಆಶ್ಚರ್ಯಕರ ಎಂದರು.

    ಶೈಕ್ಷಣಿಕ ರಂಗದಲ್ಲಿ ಯಾವುದೇ ಪರೀಕ್ಷೆ ಫಲಿತಾಂಶ ಬಂದಾಗಲೂ ಬಾಲಕಿಯರದೇ ಮೇಲುಗೈ ಎಂದಿರುತ್ತದೆ. ಆಮೇಲೆ ಇವರೆಲ್ಲ ಎಲ್ಲಿ ನಾಪತ್ತೆಯಾಗುತ್ತಾರೆ ಎಂದೇ ತಿಳಿಯುವುದಿಲ್ಲ. ಅವಕಾಶಗಳ ಕೊರತೆ ಹಾಗೂ ಸಮರ್ಥ ಮಾದರಿಗಳ ಕೊರತೆಯೇ ಇದಕ್ಕೆ ಕಾರಣ. 120 ವರ್ಷಗಳ ನೊಬೆಲ್ ಪ್ರಶಸ್ತಿ ಇತಿಹಾಸದಲ್ಲಿ ವಿಜ್ಞಾನ ಕೇತ್ರದಲ್ಲಿ ಕೇವಲ 20 ಮಹಿಳೆಯರು ಮಾತ್ರ ನೊಬೆಲ್ ಪಡೆದಿದ್ದಾರೆ ಎಂದರು.

    ಯಾವ ಕಂಪೆನಿಗಳ ಆಡಳಿತ ಮಂಡಳಿಗಳಲ್ಲಿ ಲಿಂಗವೈವಿಧ್ಯ ಇರುತ್ತದೋ, ಅದು ಹೆಚ್ಚು ಯಶಸ್ವಿಯಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಆದರೆ ನಮ್ಮಲ್ಲಿ ಇದರ ಕೊರತೆ ಇದೆ. 2010ರ ವೇಳೆಗೆ ಭಾರತದ ಕಂಪೆನಿಗಳ ಆಡಳಿತ ವಿಭಾಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 5ಕ್ಕಿಂತಲೂ ಕಡಿಮೆ ಇತ್ತು. ಇದು ಈಗ ಶೇ. 18ನ್ನು ದಾಟಿರುವುದು ಆಶಾದಾಯಕ ಎಂದರು.

    ಸಮಾನತೆ ಇಲ್ಲದ ಸಂಸ್ಕೃತಿ ನಮ್ಮನ್ನು ಹೆಚ್ಚು ದೂರ ಕರೆದುಕೊಂಡು ಹೋಗುವುದಿಲ್ಲ. ಪ್ರಾಯೋಗಿಕವಾಗಿ ಜಾರಿಗೆ ಬರದ ಯಾವ ಸಿದ್ಧಾಂತಕ್ಕೂ ಅರ್ಥವಿಲ್ಲ. ಮಹಿಳೆಯರ ಕಾಲುಗಳನ್ನು ಕಟ್ಟಿಹಾಕಿ ನಿಮಗೆ ಗೆಲ್ಲಲು ಸಾಧ್ಯವಿಲ್ಲ ಎಂದು ನಂಬಿಸುವ ಸನ್ನಿವೇಶ ಇಂದಿಗೂ ಮುಂದುವರಿದಿದೆ. ಮಹಿಳೆಯರು ಈ ಬಂಧನಗಳಿಂದ ಮುಕ್ತವಾಗಿ ಅವರಿಗಾಗಿ ತೆರೆದಿರುವ ಅವಕಾಶಗಳನ್ನು ಆತ್ಮವಿಶ್ವಾಸದಿಂದ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಮಹಿಳಾ ಅಧ್ಯಯನ ಕೇಂದ್ರ ಪ್ರಕಟಿಸಿರುವ ಸುದ್ದಿಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಇದು ವೇಗದ ಯುಗ; ಮಹಿಳೆ ವಿವಿಧ ರಂಗಗಳಲ್ಲಿ ಇಂದು ಉನ್ನತ ಸಾಧನೆ ಮಾಡುತ್ತಿದ್ದಾಳೆ. ಆಕೆ ಇನ್ನಷ್ಟು ಸಾಧನೆ ಮಾಡುವಂತೆ ಸೂಕ್ತ ಬೆಂಬಲ ಹಾಗೂ ಸಹಾನುಭೂತಿಯ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.

    ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಕಲಾ ಕಾಲೇಜಿನ ಪ್ರಾಂಶುಪಾಲ ಬಿ. ಕರಿಯಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಶೇಟ್, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ

    June 17, 2026

    ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ

    June 17, 2026

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ

    June 17, 2026

    ತುಮಕೂರು: ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹಿಸಿ, ಗ್ರಾಮಸ್ಥರು ಹಾಗೂ ಪೋಷಕರು AIDSO ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ…

    ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ

    June 17, 2026

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.