nammatumakuru

    Subscribe to Updates

    Get the latest creative news from FooBar about art, design and business.

    What's Hot

    ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ

    May 28, 2026

    ಆತುರದ ಮಾತಾಡಿದ್ರೆ ಸಿಎಂ ಪಟ್ಟ ಕೈತಪ್ಪುವ ಸಾಧ್ಯತೆ: ಡಿಕೆಶಿಗೆ ನೊಣವಿನಕೆರೆ ಅಜ್ಜಯ್ಯ ಭವಿಷ್ಯ

    May 28, 2026

    ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ನನ್ನ ಜೀವನ ತೆರೆದ ಪುಸ್ತಕ ಎಂದ ಸಿಎಂ

    May 28, 2026
    Facebook Twitter Instagram
    ಟ್ರೆಂಡಿಂಗ್
    • ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ
    • ಆತುರದ ಮಾತಾಡಿದ್ರೆ ಸಿಎಂ ಪಟ್ಟ ಕೈತಪ್ಪುವ ಸಾಧ್ಯತೆ: ಡಿಕೆಶಿಗೆ ನೊಣವಿನಕೆರೆ ಅಜ್ಜಯ್ಯ ಭವಿಷ್ಯ
    • ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ನನ್ನ ಜೀವನ ತೆರೆದ ಪುಸ್ತಕ ಎಂದ ಸಿಎಂ
    • ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ
    • ಸಿದ್ದರಬೆಟ್ಟ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ
    • ಜೂನ್ 2ರಿಂದ ಜನ ಶಿಕ್ಷಣ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ
    • ಪಲ್ಸ್ ಪೋಲಿಯೋ ಲಸಿಕೆ: ತುಮಕೂರಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ, ಅಲೆಮಾರಿ ಸಮುದಾಯ ಕೇಂದ್ರೀಕರಿಸಿ: ಜಿಲ್ಲಾಧಿಕಾರಿ ಸೂಚನೆ
    • ರಾಜ್ಯದ ಮುಂದಿನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ? 
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 3.5 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೆ ಸಜ್ಜು: ಗೃಹ ಸಚಿವ ಡಾ.ಜಿ.ಪರಮೇಶ್ವರ್
    ಕೊರಟಗೆರೆ April 8, 2025

    3.5 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೆ ಸಜ್ಜು: ಗೃಹ ಸಚಿವ ಡಾ.ಜಿ.ಪರಮೇಶ್ವರ್

    By adminApril 8, 2025No Comments2 Mins Read
    dr g parameshwar
    • ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ 2026ಕ್ಕೆ ಉದ್ಘಾಟನೆ

    ಕೊರಟಗೆರೆ : ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ 160 ಕೋಟಿ ರೂ ವೆಚ್ಚದಲ್ಲಿ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಡಿ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಭರವಸೆಯಂತೆ ಮುಂದಿನ ವರ್ಷ ನಾವು ನೀವೆಲ್ಲರೂ ರಣಜಿ ಕ್ರಿಕೆಟ್ ಟೂರ್ನಿಯನ್ನು ವೀಕ್ಷಿಸಲಿದ್ದೇವೆ ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.

    ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಭಾನುವಾರ ಆಯೋಜನೆಗೊಂಡಿದ್ದ  ಡಾ.ಬಿ.ಆರ್ ಅಂಬೇಡ್ಕರ್‍ ರವರ 138ನೇ ಜಯಂತಿ ಪ್ರಯುಕ್ತ  ಕೊರಟಗೆರೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್  ಹಾಗೂ  “ಪರಮೇಶ್ವರ್ ಕಪ್–2025” ಪಂದ್ಯಾವಳಿ ಸಮಾರಂಭ ಉದ್ದೇಶಿಸಿ ಮಾತನಾಡಿ, ತುಮಕೂರು ವಸಂತ ನರಸಾಪುರದ ಬಳಿ ಮುಂದಿನ ವರ್ಷ ಇಂಟನ್ರ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆಗೊಂಡು ರಣಜಿ ಸೇರಿದಂತೆ ಇನ್ನಿತರ ರಾಜ್ಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದರು.


    Provided by
    Provided by

    ಕ್ರೀಡಾಪಟುವಾಗಿ ಕ್ರೀಡೆಗೆ ನಾನು ಮೊದಲಿನಿಂದಲೂ ಪ್ರೋತ್ಸಾಹ ಕೊಟ್ಟುಕೊಂಡು ಬಂದಿದ್ದೇನೆ, ನಾನು ಮೊದಲ ಬಾರಿಗೆ ಕೊರಟಗೆರೆ ಶಾಸಕರಾದ ಸಂದರ್ಭದಲ್ಲಿ ಜನತೆಗೆ ಭರವಸೆ ನೀಡಿದ್ದೆ, ಇಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನ ನಿರ್ಮಾಣ ಮಾಡುತ್ತೇನೆ  ಎಂದು  ಅದಕ್ಕೆ ಬದ್ಧರಾಗಿ ಈ ಮೈದಾನವನ್ನ ಸುಸಜ್ಜಿತ ಕ್ರೀಡಾ ಮೈದಾನವಾಗಿ ಮಾರ್ಪಡುವಂತಹ ಎಲ್ಲಾ ತರಹದ ಕಾರ್ಯ ಕೈಗೊಳ್ಳಲಾಗಿದೆ, ಇದೇ ವರ್ಷ ಜಿಲ್ಲಾ ಪಂಚಾಯಿತಿ ಸಿಇಒ 3.5 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮೇಲ್ದರ್ಜೆ ಏರಿಸುವ ಮೂಲಕ ಹೈಟೆಕ್ ಕ್ರೀಡಾ ಮೈದಾನವಾಗಲಿದೆ ಎಂದರು.

    ತುಮಕೂರು ಜಿಲ್ಲೆಯಲ್ಲಿ ಬಹಳಷ್ಟು ಜನ ಕ್ರೀಡಾಪಟುಗಳಿದ್ದಾರೆ ಫುಟ್ಬಾಲ್ ನಲ್ಲಿದ್ದಾರೆ ಕಬಡ್ಡಿಯಲ್ಲಿದ್ದಾರೆ, ಕೊಕ್ಕೋದಲ್ಲಿದ್ದಾರೆ, ಕೊಕ್ಕೋದಲ್ಲಿ ಅನೇಕ ಸಂದರ್ಭದಲ್ಲಿ ಆಲ್ ಇಂಡಿಯಾ ಚಾಂಪಿಯನ್ ಹಾಗಿದ್ದರೆ, ನಮ್ಮ ಟೀಮ್, ಕ್ರಿಕೆಟ್ ಅನ್ನು ಕೂಡ ಶಾಲಾ ಕಾಲೇಜಿನಲ್ಲಿ ಇರುವಂತಹ ಪ್ರತಿಭೆಗಳನ್ನು ಗುರುತಿಸಿ ಅಂತಹ ಪ್ರತಿಭೆಗಳನ್ನು ಹೊರ ತರುವಂತಹ ಕಾರ್ಯ ಮುಂದಿನ ದಿನಗಳಲ್ಲಿ ಸಂಬಂಧಪಟ್ಟಂತ ಇಲಾಖೆ ಹಾಗೂ ಸಂಸ್ಥೆಗಳ ಸೇರಿದಂತೆ ಕ್ರೀಡಾ ಸಂಸ್ಥೆಗಳಿಂದ ಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಮುಖಂಡರಾದ ಅಶೋಕ ರಾಜು ವರ್ಧನ್, ಎಡಿ ಬಲರಾಮಯ್ಯ, ಮಹಾಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಪ.ಪಂ.ಸದಸ್ಯ ಕೆ.ಆರ್.ಓಬಳರಾಜ್ , ನಂದೀಶ್, ನಾಗರಾಜು, ಮಂಜುನಾಥ್ ಕ್ರಿಕೆಟ್ ಟೂರ್ನಮೆಂಟ್ ನ ಆಯೋಜಕರಾದ ನಂದೀಶ್, ಬೈರೇಶ್, ರಘುವೀರ್, ಶಿವು, ದೀಪಕ್ ಸೇರಿದಂತೆ ಇತರರು ಇದ್ದರು.

    ಕರ್ನಾಟಕವನ್ನು ಮಾದಕ ವಸ್ತುಗಳ ಮುಕ್ತ ಮಾಡಲು ಹೊರಟಿದ್ದೇವೆ, ಶಾಲಾ ಕಾಲೇಜುಗಳಲ್ಲಿ ಯಾವುದೇ ರೀತಿ ಈ ತರಹದ ವಾತಾವರಣ ಕಂಡುಬಂದರೆ ಅಂತಹ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ಹೊರಬರಬೇಕಾದರೆ ಶಾಲಾ ಕಾಲೇಜಿನ ಮಕ್ಕಳು ಹೆಚ್ಚೆಚ್ಚು ಕ್ರೀಡಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜ ಸ್ವಸ್ಥದಿಂದ ಇರಲು ಸಾಧ್ಯ .

    — ಡಾ.ಜಿ.ಪರಮೇಶ್ವರ,  ಗೃಹ ಸಚಿವ, ಕರ್ನಾಟಕ ಸರ್ಕಾರ


    ಆರ್.ಕೆ ಮೈಟಿ ಪ್ರಥಮ, ಅಶ್ವಮೇದ ದ್ವೀತಿಯ ಸ್ಥಾನ:

    ಪರಮೇಶ್ವರ್ ಕಪ್–2025 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯು ಯಶಸ್ಸಿಯಾಗಿ ನಡೆದಿದ್ದು, 24 ತಂಡವು ಟೂರ್ನಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದು, ಇದರಲ್ಲಿ ಪ್ರಥಮ ಸ್ಥಾನ ಬೆಂಗಳೂರಿನ ಆರ್.ಕೆ.ಮೈಟಿ ತಂಡ 2.22.222.ರೂ ಮತ್ತು ಆಕರ್ಷಕ ಟ್ರೋಪಿಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದು, ದ್ವೀತಿಯ ಸ್ಥಾನ ತುಮಕೂರಿನ ಅಶ್ವಮೇಧ ತಂಡ 1.11.111ರೂ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದಿದೆ. ತೃತೀಯ ಸ್ಥಾನ ಉಡುಪಿ ಪಾಂಚಜನ್ಯ ಕೋಟ, ನಾಲ್ಕನೇ ಸ್ಥಾನ ಕುಣಿಗಲ್ ಕಿಂಬರ್ಲಿ ತಂಡ ಜಯಗಳಿಸಿದ್ದು, ಮ್ಯಾನ್ ಆಫ್ ದಿ ಸೀರಿಸ್ ಸ್ಯಾಂಡಿ ಟಿವಿಎಸ್ ರೈಡರ್ ಬೈಕ್‍ನ್ನು ಬೆಸ್ಟ್ ಬೌಲರ್ ಸಂದೀಪ, ಬೆಸ್ಟ್ ಬ್ಯಾಟ್ಸ್‍ ಮ್ಯಾನ್ ಸಿದ್ದು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ಬೈಕ್‍ ನ್ನು ತಮ್ಮದಾಗಿಸಿಕೊಂಡಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಕಾರ್ಮಿಕರು ಇಲಾಖೆಯ ಸೌಲಭ್ಯ ಬಳಸಿಕೊಳ್ಳಬೇಕು: ಶ್ಯಾಮಣ್ಣರೆಡ್ಡಿ

    May 27, 2026

    ಮುಂಗಾರು ಹಿನ್ನೆಲೆ ರಸಗೊಬ್ಬರ ಅಂಗಡಿಗಳಿಗೆ ತಹಶೀಲ್ದಾರ್ ಅನಿರೀಕ್ಷಿತ ಭೇಟಿ: ರೈತರಿಗೆ ಕೊರತೆಯಾಗದಂತೆ ಸ್ಟಾಕ್ ಪರಿಶೀಲನೆ

    May 27, 2026

    ಕೊರಟಗೆರೆಯಲ್ಲಿ ಮಯೂರ ಬೇಕರಿಗೆ ಅಧಿಕಾರಿಗಳ ದಿಢೀರ್ ದಾಳಿ:  ಗೃಹ ಬಳಕೆ ಸಿಲಿಂಡರ್ ಬಳಕೆ, ಅವಧಿ ಮೀರಿದ ಚಾಕಲೇಟ್ ಪತ್ತೆ

    May 27, 2026

    Comments are closed.

    Our Picks

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ

    May 28, 2026

    ಬೆಂಗಳೂರು: “ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

    ಆತುರದ ಮಾತಾಡಿದ್ರೆ ಸಿಎಂ ಪಟ್ಟ ಕೈತಪ್ಪುವ ಸಾಧ್ಯತೆ: ಡಿಕೆಶಿಗೆ ನೊಣವಿನಕೆರೆ ಅಜ್ಜಯ್ಯ ಭವಿಷ್ಯ

    May 28, 2026

    ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ನನ್ನ ಜೀವನ ತೆರೆದ ಪುಸ್ತಕ ಎಂದ ಸಿಎಂ

    May 28, 2026

    ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ

    May 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.