nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ

    August 28, 2026

    ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ

    August 28, 2026

    ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು

    August 28, 2026
    Facebook Twitter Instagram
    ಟ್ರೆಂಡಿಂಗ್
    • ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ
    • ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ
    • ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು
    • ಹಳ್ಳಿಮೈಸೂರು ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ಸಂಸದ ಶ್ರೇಯಸ್ ಎಂ. ಪಟೇಲ್ ದಿಢೀರ್ ಭೇಟಿ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಥಳದಲ್ಲೇ ಖಡಕ್ ಸೂಚನೆ
    • ಬಡಾವಣೆಯೋ.. ಕುಡುಕರ ಬಯಲಾಟವೋ?: ಕಸದ ಗಾಡಿಯಲ್ಲೇ ಎಣ್ಣೆ ಬಾಟಲಿಗಳ ಸಾಗಾಟ, ಪೊಲೀಸರೇ ಎಲ್ಲಿದ್ದೀರಿ?
    • ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ
    • ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ
    • ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜನಸ್ನೇಹಿ ವೈದ್ಯಾಧಿಕಾರಿ ಡಾಕ್ಟರ್ ಲಕ್ಷ್ಮಿಕಾಂತಗೆ ನಿವೃತ್ತಿ ಬೀಳ್ಕೊಡುಗೆ
    ಕೊರಟಗೆರೆ June 3, 2025

    ಜನಸ್ನೇಹಿ ವೈದ್ಯಾಧಿಕಾರಿ ಡಾಕ್ಟರ್ ಲಕ್ಷ್ಮಿಕಾಂತಗೆ ನಿವೃತ್ತಿ ಬೀಳ್ಕೊಡುಗೆ

    By adminJune 3, 2025No Comments2 Mins Read

    ಕೊರಟಗೆರೆ : ಸರಳತೆಯೊಂದಿಗೆ ಕರ್ತವ್ಯದಲ್ಲಿ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ನಿವೃತ್ತಿಯಾದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ರವರ ಕಾರ್ಯವೈಖರಿ ಮತ್ತೊಬ್ಬರಿಗೆ ಪ್ರೇರಣೆಯಾಗಿದೆ ಎಂದು ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದರು.

    ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಮೀಟಿಂಗ್ ಹಾಲ್ ನಲ್ಲಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಜನಸ್ನೇಹಿ, ಪ್ರಾಮಾಣಿಕ ಆಡಳಿತ ವೈದ್ಯಾಧಿಕಾರಿ  ಡಾ. ಲಕ್ಷ್ಮಿಕಾಂತ್ ಗೆ ಕೊರಟಗೆರೆ ಸರ್ಕಾರಿ ಆಸ್ಪತ್ರೆ ಹಾಗೂ ಹೊಳೆನರಸೀಪುರ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ನಿವೃತ್ತಿ ಬೀಳ್ಕೊಡುಗೆ ನಡೆಸಲಾಯಿತು.

    ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ಕರ್ತವ್ಯ ನಿರ್ವಹಿಸಿ  ಕೊರಟಗೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಡಾಕ್ಟರ್ ಲಕ್ಷ್ಮಿಕಾಂತ್ ರವರಿಗೆ  ತಮ್ಮ ವೈದ್ಯಕೀಯ ವೃತ್ತಿಯಲ್ಲಿ 60 ವರ್ಷಗಳು ಪೂರೈಸಿದ್ದು, ಅವರಿಗೆ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವನ್ನು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಅದ್ದೂರಿಯಾಗಿ ನಡೆಸಿಕೊಟ್ಟರು.

    ಜನಸ್ನೇಹಿ ಎಲ್ಲರ ನೆಚ್ಚಿನ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್ ಅವರಿಗೆ ನಿವೃತ್ತಿ ಬೀಳ್ಕೊಡುಗೆ ಅದ್ದೂರಿಯಾಗಿ ನೆರವೇರಿಸಿ ಪುಷ್ಪ ಮಳೆಗಳನ್ನ ಹಾಕಿ ಸಿಹಿತಿನಿಸಿ ನೆಚ್ಚಿನ ಜನಸ್ನೇಹಿ ಅಧಿಕಾರಿಗೆ ಪ್ರತಿಯೊಬ್ಬ ವೈದ್ಯರು ಪ್ರೀತಿಯ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು.

    ನಿವೃತ್ತ ವೈದ್ಯಾಧಿಕಾರಿ  ಡಾ.ಲಕ್ಷ್ಮಿಕಾಂತ ಮಾತನಾಡಿ, ನನ್ನ ವೈದ್ಯಕೀಯ ವೃತ್ತಿಯಲ್ಲಿ ಬಹಳಷ್ಟು  ರೋಗಿಗಳನ್ನ ಕಂಡಿದ್ದೇನೆ, ಎಲ್ಲರ ಜೊತೆ ಪ್ರೀತಿಯಿಂದ ವರ್ತಿಸಿ  ಅವರಿಗೆ ಬೇಕಾಗಿರುವ ಚಿಕಿತ್ಸೆಗಳನ್ನು ನೀಡಿದ್ದೇವೆ. ನನ್ನ ಹೊಳೇನರಸಿಪುರ ಹಾಗೂ ಕೊರಟಗೆರೆ ಎಲ್ಲ ಜನತೆಗೆ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.

    ಡಾ. ಲಕ್ಷ್ಮಿಕಾಂತ್ ಪತ್ನಿ ಮಾತನಾಡಿ, ನಮ್ಮ ಮನೆ ಹಾಗೂ ಮಕ್ಕಳ ಜೊತೆ ಲಕ್ಷ್ಮಿಕಾಂತ್ ಡಾಕ್ಟರ್ ಇದ್ದದ್ದೇ ಕಡಿಮೆ. ಯಾವಾಗಲೂ ಆಸ್ಪತ್ರೆ ರೋಗಿಗಳ ಜೊತೆ ಇದ್ದದ್ದೇ ಜಾಸ್ತಿ ಅವರ ವೃತ್ತಿ ಜೀವನದಲ್ಲಿ ಮನೆಯಲ್ಲಿ ಇಲ್ಲವೇ ಇಲ್ಲ.  ಪ್ರತಿದಿನವೂ ಆಸ್ಪತ್ರೆಯಲ್ಲಿ ಜೀವನ ಕಳೆದವರು ಅವರನ್ನ ಪತಿಯಾಗಿ ಪಡೆದ ನಾನೇ ಪುಣ್ಯವಂತಳು.  ಜನರ ಸೇವೆಗಿಂತ ಬೇರೇನು ಇದೆ ಎನ್ನುತ್ತಾ ಬಂದವರು ಅವರು ಅದಕ್ಕಾಗಿ ಇಂದು ಅವರಿಗೆ ಜನಸ್ನೇಹಿ ಎನ್ನುವ ಬಿರುದು ಜನರು ಕೊಟ್ಟಿದ್ದಾರೆ ಅಷ್ಟೇ ಸಾಕು ನಮಗೆ ಎಂದು ತಿಳಿಸಿದರು.

    ಡಿಡಿಓ ವೈದ್ಯರಾದ ಮೋಹನ್ ದಾಸ್ ಮಾತನಾಡಿ, ಡಾಕ್ಟರ್ ಲಕ್ಷ್ಮಿಕಾಂತ್ ಅವರ ಜೊತೆ ವೈದ್ಯರಾಗಿ ಕರ್ತವ್ಯ ನಿರ್ಮಿಸುವುದೇ ಪುಣ್ಯ ಕಿರಿಯರಾಗಲಿ ಹಿರಿಯರಾಗಲಿ ಎಲ್ಲರನ್ನೂ ಒಂದೇ ರೀತಿಯಾಗಿ ನೋಡಿಕೊಳ್ಳುತ್ತಾ ಪ್ರತಿಯೊಬ್ಬರಿಗೂ ವೈದ್ಯಕೀಯ ಸಲಹೆಗಳನ್ನು ನೀಡುತ್ತಾ ರೋಗಿಗಳ ಜೊತೆ ಸ್ನೇಹಿತನಂತೆ ಮಾತನಾಡುತ್ತಾ  ಎಲ್ಲರನ್ನು ಗೌರವದಿಂದ ಕಂಡಂತಹ ಅಧಿಕಾರಿ ಡಾಕ್ಟರ್ ಲಕ್ಷ್ಮಿಕಾಂತ್  ಅವರಿಗೆ ಇಂದು 60 ವರ್ಷಗಳು ಪೂರೈಸಿದ್ದು ನಿವೃತ್ತಿ ಹೊಂದುತ್ತಿದ್ದಾರೆ.  ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಸಹಜವಾಗಿರುತ್ತದೆ. ಆದರೆ ನಾವು ಮಾಡಿದಂತಹ ಸೇವೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಅಂತಹ ವೈದ್ಯರ ಪಟ್ಟಿಗೆ ಸೇರುವವರು ಡಾ.ಲಕ್ಷ್ಮಿಕಾಂತ್ ಎಂದು ಸಂತೋಷದಿಂದ ಹೇಳುತ್ತೇನೆ  ಎಂದರು.

    ಈ ವೇಳೆ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026

    ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ

    August 25, 2026

    ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

    August 22, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ

    August 28, 2026

    ಹಳೇಬೀಡು: ತಂದೆ-ತಾಯಿ ಹಾಗೂ ಅಕ್ಕ–ಭಾವನ ಸವಿ ನೆನಪಿಗಾಗಿ ಉದ್ಯಮಿಯೊಬ್ಬರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ₹20 ಲಕ್ಷ ವೆಚ್ಚದಲ್ಲಿ ನೂತನ…

    ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ

    August 28, 2026

    ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು

    August 28, 2026

    ಹಳ್ಳಿಮೈಸೂರು ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ಸಂಸದ ಶ್ರೇಯಸ್ ಎಂ. ಪಟೇಲ್ ದಿಢೀರ್ ಭೇಟಿ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಥಳದಲ್ಲೇ ಖಡಕ್ ಸೂಚನೆ

    August 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.