nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ

    August 28, 2026

    ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ

    August 28, 2026

    ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು

    August 28, 2026
    Facebook Twitter Instagram
    ಟ್ರೆಂಡಿಂಗ್
    • ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ
    • ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ
    • ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು
    • ಹಳ್ಳಿಮೈಸೂರು ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ಸಂಸದ ಶ್ರೇಯಸ್ ಎಂ. ಪಟೇಲ್ ದಿಢೀರ್ ಭೇಟಿ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಥಳದಲ್ಲೇ ಖಡಕ್ ಸೂಚನೆ
    • ಬಡಾವಣೆಯೋ.. ಕುಡುಕರ ಬಯಲಾಟವೋ?: ಕಸದ ಗಾಡಿಯಲ್ಲೇ ಎಣ್ಣೆ ಬಾಟಲಿಗಳ ಸಾಗಾಟ, ಪೊಲೀಸರೇ ಎಲ್ಲಿದ್ದೀರಿ?
    • ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ
    • ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ
    • ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ವೆಲ್ಕಮ್ ಡೇ  
    ಕೊರಟಗೆರೆ July 4, 2025

    ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ವೆಲ್ಕಮ್ ಡೇ  

    By adminJuly 4, 2025No Comments2 Mins Read
    koratagere

    ಕೊರಟಗೆರೆ : ಪಟ್ಟಣದ ಸುಭಾಷ್ ಪದವಿ ಪೂರ್ವ ಕಾಲೇಜ್ 2025–26  ನೇ ಸಾಲಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ವರ್ಷದ ಮೊದಲ ಕಲಿಕಾ ದಿನದ ಶುಭ ಹಾರೈಕೆಯನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂಸ್ಥೆಯ ಅಧ್ಯಕ್ಷರಾದ ಗಂಗರಾಜು “ಗ್ರಾಂಡ್ ವೆಲ್ಕಮ್ ಡೇ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದರು.

    ಜಿಲ್ಲೆಯ ಹೆಸರಾಂತ ಮುಖ್ಯ ಭಾಷಣಕಾರ, ಕವಿ–ಲೇಖಕರಾದ ಗಂಗಾಧರ್ ಕೊಡ್ಲಿರವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

    ಪ್ರಥಮ ಪಿಯುಸಿ ವಿದ್ಯಾರ್ಥಿ — ವಿದ್ಯಾರ್ಥಿನಿಯರಿಗೆ ವರ್ಷದ ಮೊದಲ ಕಲಿಕಾ ಚಟುವಟಿಕೆಗಳ  ಬಗ್ಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಮೌಲ್ಯಧಾರಿತ ಶಿಕ್ಷಣವನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮತ್ತು ಅಗತ್ಯವಾದ ಪ್ರಯೋಗೀಕ ಶಿಕ್ಷಣವನ್ನು ಸಂಸ್ಥೆಯು ಪೂರೈಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿಯಾದ ನಿರ್ಮಲಾ ತಿಳಿಸಿದರು.

    ನಂತರ ಮಾತನಾಡಿದ ಸುಭಾಷ್, ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಗಂಗರಾಜು, ಪ್ರೌಢಶಾಲೆಯ 10ನೇ ತರಗತಿ ವ್ಯಾಸಂಗವನ್ನು ಮುಗಿಸಿ ಕಾಲೇಜು ಹಂತದ ಶಿಕ್ಷಣ ಪಡೆಯಲು ಬಂದಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೊಸತನದ ಶಿಕ್ಷಣವನ್ನು ಶ್ರದ್ಧಾ ಏಕಾಗ್ರತೆ ವಿಶ್ವಾಸ ಮತ್ತು ಭಕ್ತಿಯಿಂದ ವಿದ್ಯಾಭ್ಯಾಸ ಕಲಿಯಬೇಕು ನಮ್ಮ ಸಂಸ್ಥೆಯು ಸಕಲ ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಮೌಲ್ಯ ಆಧಾರಿತ ಶಿಕ್ಷಣವನ್ನು ಸಹ ನೀಡಲಾಗುವುದು. ಈ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಮುಂದಿನ ವೃತ್ತಿಪರ ಕೋರ್ಸ್ ಗಳಿಗೆ ಹೋಗಲು ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಶ್ರಮ, ಶಿಸ್ತು ಮತ್ತು ಸಂಯಮ ನಿಮ್ಮಲ್ಲಿದ್ದರೆ ಖಂಡಿತ ತಮ್ಮ ತಮ್ಮ ಗುರಿ ತಲುಪುತ್ತೀರಿ ಹಾಗೆಯೇ ಕಾಲೇಜಿನ ಆಡಳಿತ ಮಂಡಳಿಯು ಸದಾಕಾಲ ತಮ್ಮಗಳ ಜೊತೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ತಿಳಿಸಿದರು.

    ಭಾಷಣಕಾರ ಕವಿ, ಲೇಖಕರಾದ ಗಂಗಾಧರ್ ಕೊಡ್ಲಿ ಮಾತನಾಡಿ, ಸುಭಾಷ್ ಪದವಿ ಪೂರ್ವ ಕಾಲೇಜು ತಾಲ್ಲೂಕಿನಲ್ಲಿ ಉತ್ತಮವಾದ ಶಿಕ್ಷಣ ನೀಡುತ್ತಿದೆ. ನುರಿತ ಅನುಭವಿ ಉಪನ್ಯಾಸಕರಿಂದ ಒಳ್ಳೆಯ ಶಿಕ್ಷಣ ಮಕ್ಕಳಿಗೆ ದೊರಕುತ್ತಿದೆ. ಮೌಲ್ಯಧಾರಿತ ಶಿಕ್ಷಣದ ಜೊತೆಗೆ ಪ್ರಾಯೋಗಿಕ ತರಬೇತಿಗಳಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶ್ರದ್ಧೆ ಭಕ್ತಿ ವಿನಯದಿಂದ ಓದಿದರೆ ಭವಿಷ್ಯದಲ್ಲಿ ಒಳ್ಳೆಯ ಗುರಿ ತಲುಪುತ್ತಾರೆ ಎಂದರು.

    ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲ ಗಂಗಾಧರ್, ಕನ್ನಡ ಪ್ರಾಧ್ಯಾಪಕರಾದ ದೊಡ್ಡನಾಗಪ್ಪ, ಉಪನ್ಯಾಸಕರಾದ ನವೀನ್, ದಯಾನಂದ್, ವಿವೇಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026

    ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ

    August 25, 2026

    ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

    August 22, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ

    August 28, 2026

    ಹಳೇಬೀಡು: ತಂದೆ-ತಾಯಿ ಹಾಗೂ ಅಕ್ಕ–ಭಾವನ ಸವಿ ನೆನಪಿಗಾಗಿ ಉದ್ಯಮಿಯೊಬ್ಬರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ₹20 ಲಕ್ಷ ವೆಚ್ಚದಲ್ಲಿ ನೂತನ…

    ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ

    August 28, 2026

    ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು

    August 28, 2026

    ಹಳ್ಳಿಮೈಸೂರು ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ಸಂಸದ ಶ್ರೇಯಸ್ ಎಂ. ಪಟೇಲ್ ದಿಢೀರ್ ಭೇಟಿ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಥಳದಲ್ಲೇ ಖಡಕ್ ಸೂಚನೆ

    August 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.