nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ

    May 26, 2026

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026
    Facebook Twitter Instagram
    ಟ್ರೆಂಡಿಂಗ್
    • ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ
    • ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ
    • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
    • ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    • ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
    • ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಪಿಲ‌ ನದಿಗೆ 30 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ: ಶಾಸಕ ಅನಿಲ್ ಚಿಕ್ಕಮಾದು
    ಜಿಲ್ಲಾ ಸುದ್ದಿ November 12, 2025

    ಕಪಿಲ‌ ನದಿಗೆ 30 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ: ಶಾಸಕ ಅನಿಲ್ ಚಿಕ್ಕಮಾದು

    By adminNovember 12, 2025No Comments2 Mins Read
    anil chikkamadu

    ಸರಗೂರು:   ತಾಲೂಕಿನ ತುಂಬಸೋಗೆ ಗ್ರಾಮದ ಬಳಿ‌ ಕಪಿಲ‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕರು, ಅರಣ್ಯ ವಸತಿ‌ ಹಾಗೂ ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು.

    ಸಮೀಪದ ತುಂಬಸೋಗೆ ಗ್ರಾಮದಲ್ಲಿ ಮಂಗಳವಾರದಂದು 35 ಲಕ್ಷ ರೂ. ವೆಚ್ಚದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.


    Provided by
    Provided by

    ಕಬಿನಿ ಜಲಾಶಯ ನಿರ್ಮಾಣದ ವೇಳೆ ನಿರ್ಮಿಸಲಾದ ಸೇತುವೆ ತುಂಬಾ ಹಳೆಯದಾಗಿದ್ದು, ಶಿಥಿಲಗೊಂಡಿದೆ. ಹೀಗಾಗಿ ನೂತನವಾಗಿ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ 30 ಕೋಟಿ ರೂ.ಅನುದಾನ ದೊರಕಿದ್ದು,  ಎರಡು ಬಸ್ ಹೋಗುವಂತೆ ಸೇತುವೆ ಅಗಲೀಕರಣ ಮಾಡಲಾಗುವುದು. ಇದಲ್ಲದೆ ಸರಗೂರು ಹ್ಯಾಂಡ್ ಪೋಸ್ಟ್ ರಸ್ತೆಯನ್ನು ದ್ವಿಪಥ ರಸ್ತೆ ಮಾಡಲು ಸರಕಾರ ಗಮನಕ್ಕೆ ತರಲಾಗಿದೆ  ಎಂದು ಅವರು ಹೇಳಿದರು.

    ಹೈಟೆಕ್ ಭವನ: ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಭವನ ಮಾದರಿಯಲ್ಲಿಯೇ ಗ್ರಾಮದಲ್ಲಿ ಭವನ ನಿರ್ಮಾಣಗೊಳ್ಳಬೇಕು. ಶುಭ, ಸಮಾರಂಭಗಳು ನಡೆಯುವಂತೆ ನೋಡಿಕೊಳ್ಳ ಬೇಕು. ಇದಕ್ಕಾಗಿ ಸುರಕ್ಷಿತ ಭವನ‌ ನಿರ್ಮಾಣ ಮಾಡಬೇಕು. ಕೋಟೆ ವಾಲ್ಮೀಕಿ ಭವನಕ್ಕೆ 2 ಕೋಟಿ ರೂ.ಅನುದಾನ ತರಲಾಗಿದೆ. ಶೀಘ್ರದಲ್ಲೇ ‌ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

    ಗ್ರಾಮದಲ್ಲಿ ಭವನ  ನಿರ್ಮಾಣಕ್ಕೆ 1 ಕೋಟಿ ರೂ.ಅನುದಾನ ಕೇಳಿದ್ದೀರಿ. ಸದ್ಯ ಮುಖ್ಯಮಂತ್ರಿಗಳ ಅನುದಾನ 20 ಲಕ್ಷ ರೂ., ಸಂಸದರ ಅನುದಾನ 10 ಲಕ್ಷ ರೂ., ಶಾಸಕರ ಅನುದಾ‌ನ 5 ಲಕ್ಷ ರೂ. ಒಟ್ಟಾರೆ 35 ಲಕ್ಷ ರೂ. ಅನುದಾ‌ನ ಬಿಡುಗಡೆಯಾಗಿದೆ. ಗ್ರಾಮಸ್ಥರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಇದಲ್ಲದೆ ಬಸ್ ನಿಲ್ದಾಣಕ್ಕೆ 6 ಲಕ್ಷ‌ ರೂ., ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು  ಅನುದಾನ ನೀಡಲಾಗುವುದು ಎಂದರು.

    ಟಿಎಸ್ಪಿ, ಎಸ್ ಸಿ ಪಿ ಯೋಜನೆಯಡಿ:

    ಗ್ರಾಮದ ರಸ್ತೆಗಳನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ತುಂಬಸೋಗೆ ನಿಲುವಾಗಿಲು ರಸ್ತೆ ಅಭಿವೃದ್ಧಿ ಗೆ ಕ್ರಮ ವಹಿಸಲಾಗುವುದು. ಹೆಬ್ಬಲಗುಪ್ಪೆ, ಇಟ್ನ ಗ್ರಾಮಗಳ ಸಂಪರ್ಕದ ಜಮೀನಿನ ರಸ್ತೆ ಯನ್ನು ಮೆಟ್ಲಿಂಗ್ ಮಾಡಿಸಿಕೊಡಲಾಗುವುದು. ಹಂತ, ಹಂತವಾಗಿ ಗ್ರಾಮದ ಅಭಿವೃದ್ಧಿ ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಕಾಂಗ್ರೆಸ್ ಹಿರಿಯ ಮುಖಂಡ ಬಿ.ಪಿ.ಬಸಪ್ಪ ಮಾತನಾಡಿ, ತುಂಬಸೋಗೆ–ಹೆಬ್ಬಲಗುಪ್ಪೆ ಗ್ರಾಮದ ಸಂಪರ್ಕ‌ ರಸ್ತೆ ಅಭಿವೃದ್ದಿ ಪಡಿಸಬೇಕು. ಗ್ರಾಮದಲ್ಲಿ ಎಲ್ಲ ಜನಾಂಗದವರಿಗೂ ಸ್ಮಶಾನ ಜಾಗದ ಸಮಸ್ಯೆಯಾಗಿದ್ದು,  ಸ್ಮಶಾನ ನೀಡಬೇಕು. ಗ್ರಾಮಕ್ಕೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿರುವುದು ತುಂಬಾ ಸಂತಸ. ಜಾಗದ‌ ಕೊರತೆ ಇದೆ. ನಿಲುವಾಗಿಲು–ತುಂಬಸೋಗೆ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.

    ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿದರು. ತುಂಬಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ,  ಸದಸ್ಯರಾದ ನಾಗೇಂದ್ರ, ಚೆನ್ನನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಾಮರಾಜು, ಕಾಂಗ್ರೆಸ್ ಮುಖಂಡರಾದ ಬಿ.ಸಿ.ಬಸಪ್ಪ, ಶಂಭುಲಿಂಗನಾಯಕ, ಜಿನ್ನಹಳ್ಳಿ ರಾಜನಾಯಕ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ನಂಜಪ್ಪ, ತಾಪಂ ಮಾಜಿ ಸದಸ್ಯ ಅಂಕಪ್ಪ, ಬಿದರಹಳ್ಳಿ ರಾಜು, ಪ್ರಕಾಶ್, ಜಕ್ಕಹಳ್ಳಿ ಮಲ್ಲೇಶ್, ಸಿದ್ದನಾಯಕ ಬಾಚೇಗೌಡನಹಳ್ಳಿ, ಆದಿ ಕರ್ನಾಟಕ‌ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನರಾಜಣ್ಣ, ತುಂಬಸೋಗೆ ನಾಗಣ್ಣ, ಹಳೆಯೂರು ಚಿನ್ನಯ್ಯ, ಶಿವಲಿಂಗು, ಸೋಮಣ್ಣ, ನಿರ್ಮಿತಿ ಕೇಂದ್ರದ ಸುಪ್ರೀತ್, ವಸಂತ್, ಅಶೋಕ್,  ಶಿವಕುಮಾರ್, ಆಪ್ತ ಸಹಾಯಕರಾದ ಮಂಜುನಾಥ್, ಸುದರ್ಶನ್  ಸೇರಿದಂತೆ ಇನ್ನಿತರರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಈ ವರ್ಷ 52 ಸಾವಿರ ಅತಿಥಿ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

    May 23, 2026

    ಬೀದರ್ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಭೀಕರ ಹಲ್ಲೆ: 7 ಮಂದಿ ಆರೋಪಿಗಳ ಬಂಧನ

    May 23, 2026

    ಒಕ್ಕರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ: ಮೂರು ನಾಯಿಗಳನ್ನು ಬಲಿ ಪಡೆದ ಚಿರತೆ

    May 22, 2026

    Leave A Reply Cancel Reply

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ತುಮಕೂರು: ಜಿಲ್ಲೆಯಲ್ಲಿ ಮೇ 28 ರಂದು ಮುಸ್ಲಿಮರು  ಆಚರಿಸಲಿರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಚೋದನೆ ನೀಡುವ ಬ್ಯಾನರ್, ಬಂಟಿಂಗ್ಸ್ ಸೇರಿದಂತೆ…

    ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ

    May 26, 2026

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.