nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿ.ಐ.ಎಸ್.ಎಫ್. ಕೋಸ್ಟಲ್ ಸೈಕ್ಲೋಥಾನ್ ರ್ಯಾಲಿಗೆ ಅದ್ದೂರಿ ಸ್ವಾಗತ

    February 18, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ

    February 17, 2026
    Facebook Twitter Instagram
    ಟ್ರೆಂಡಿಂಗ್
    • ಸಿ.ಐ.ಎಸ್.ಎಫ್. ಕೋಸ್ಟಲ್ ಸೈಕ್ಲೋಥಾನ್ ರ್ಯಾಲಿಗೆ ಅದ್ದೂರಿ ಸ್ವಾಗತ
    • ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ
    • ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ
    • ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ
    • ಜನರ ತೆರಿಗೆ ಹಣ ಜಾಹೀರಾತಿಗೆ ಪೋಲು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ, ಮಾರ್ಚ್ 18 ರಿಂದ SSLC ಪರೀಕ್ಷೆ ಪ್ರಾರಂಭ
    • ಪೆರು ದೇಶದ ಈ ವಿಚಿತ್ರ ಮಾರುಕಟ್ಟೆ ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ!
    • ಜೇನು ಕೃಷಿ: ಕಡಿಮೆ ಖರ್ಚಿನಲ್ಲಿ ಲಾಭದಾಯಕ ಉದ್ಯೋಗ ಆರಂಭಿಸುವುದು ಹೇಗೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಆಟೋ ಚಾಲಕರ ಕನ್ನಡ ಭಾಷಾಭಿಮಾನವನ್ನು ಗೌರವಿಸಬೇಕು: ಪ.ಪಂ. ಅಧ್ಯಕ್ಷೆ ಚೈತ್ರಾ ಸ್ವಾಮಿ
    ಜಿಲ್ಲಾ ಸುದ್ದಿ November 29, 2025

    ಆಟೋ ಚಾಲಕರ ಕನ್ನಡ ಭಾಷಾಭಿಮಾನವನ್ನು ಗೌರವಿಸಬೇಕು: ಪ.ಪಂ. ಅಧ್ಯಕ್ಷೆ ಚೈತ್ರಾ ಸ್ವಾಮಿ

    By adminNovember 29, 2025No Comments2 Mins Read
    kannada rajyothsava

    ಸರಗೂರು:  ಕನ್ನಡ ನಾಡು ನುಡಿ ಭಾಷೆಯ ಮೇಲಿರುವ ಆಟೋ ಚಾಲಕರ ಭಾಷಾಭಿಮಾನವನ್ನು ನಾವೆಲ್ಲರೂ ಗೌರವಿಸಬೇಕು. ಕನ್ನಡ ಭಾಷೆಯನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ವರ್ಷ ಪೂರ್ತಿ ನಡೆಸಿ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ ತಿಳಿಸಿದರು.

    ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಚಾಮುಂಡೇಶ್ವರಿ ಆಟೋ ಚಾಲಕರು ಹಾಗೂ ಮಾಲಿಕರ ಸಂಘದ ವತಿಯಿಂದ ಶನಿವಾರದಂದು 70 ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    Provided by
    Provided by

    ಕನ್ನಡ ಭಾಷೆಗೆ ಸಾವಿರಾರು ವರ್ಷ ಗಳ ಇತಿಹಾಸವಿದ್ದು, ಇತ್ತೀಚಿನ ವರ್ಷಗಳಲ್ಲಿ ಬೇರೆ ರಾಜ್ಯಗಳ ಅನ್ಯಭಾಷೆಕಾರ ವಲಸೆಯಿಂದ ಕನ್ನಡ ಭಾಷೆಗೆ ತೊಡಕ್ಕಾಗುತ್ತಿದೆ, ಕನ್ನಡದ ಹಿರಿಮೆ–ಗರಿಮೆ ಸಾರುವ ಕೆಲಸ ಪ್ರತಿಯೊಬ್ಬ ಕನ್ನಡಿಗರ ಗುರಿಯಾಗಬೇಕು. ಕನ್ನಡದ ಅಭಿಮಾನವನ್ನು ಒಂದು ದಿನಕ್ಕೆ ಸಿಮಿತವಾಗಿರದೆ ಪ್ರತಿದಿನವೂ ಕನ್ನಡದ ಅಭಿಮಾನ, ಆಚರಣೆಯಾಗಬೇಕು. ಕನ್ನಡಪರ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಂಡು ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ವಾಗಬೇಕು. ನಾಡು ನುಡಿ ಪರಂಪರೆ ಬಿಂಬಿಸು ಕಾರ್ಯವಾಗಬೇಕು ಎಂದರು.

    ಪಪಂ ಸದಸ್ಯ ಹಾಗೂ ನಾಯಕ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ ಮಾತನಾಡಿ, ಯಾವುದೇ ಸಹಾಯವಿಲ್ಲದೆ ಸ್ವಯಂಪ್ರೇರಣೆಯಿಂದ ಮನೆಯ ಹಬ್ಬದಂತೆ ಕನ್ನಡ ಹಬ್ಬವನ್ನು ಆಚರಿಸುವ ಆಟೊ ಚಾಲಕರ ಪ್ರೇಮ ಮರೆಯಲಾಗದು, ಕಷ್ಟವಿದ್ದರೂ ಸ್ವಾವಲಂಬಿ ಬದುಕಿಗೆ ಚಾಲಕರಾಗಿದ್ದಾರೆ. ನವೆಂಬರ್‌ ತಿಂಗಳಲ್ಲಿ ಸಡಗರದಿಂದ ಮಾತೃಭಾಷೆ, ನಾಡು–ನುಡಿಯನ್ನು ಸ್ಮರಿಸುವ ಇವರ ಸತ್ಕಾರ್ಯವನ್ನು ಬುದ್ಧಿಜೀವಿಗಳು ಅನುಸರಿಸಬೇಕು.  ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಲ್ಲಿದೆ. ಸ್ವಂತ ಹಣದಲ್ಲಿ ಮನೆಯ ಹಬ್ಬದಂತೆ ಆಚರಿಸುವ ಚಾಲಕರ ಮಾತೃಭಾಷೆ ಪ್ರೇಮ ಮರೆಯಲಾಗದು ಎಂದರು.

    ಕನ್ನಡಾಂಬೆಯ ಧ್ವಜ ಹಾರಿಸಿ, ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ಚಾಲಕರು ಪಟ್ಟಣದ ಪ್ರಮುಖ ಬೀದಿಯಲ್ಲಿ ಆಟೊಗಳಿಗೆ ಕನ್ನಡ ಬಾವುಟ, ಹಳದಿ, ಕೆಂಪು ಹೂವುಗಳಿಂದ ಅಲಂಕರಿಸಿ ಕನ್ನಡಾಂಬೆಗೆ ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಸಾಗಿದರು. ಸಿಹಿ ತಿನಿಸು, ಅನ್ನ ದಾಸೋಹ ಏರ್ಪಡಿಸಲಾಗಿತ್ತು.

    ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಲುವಕೃಷ್ಣ, ಸೂಪರ್ ಮಾರ್ಕೆಟ್ ಮಾಲೀಕ ವರುಣ್, ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಬಿ.ವಿ.ಸ್ಟೋರ್ ಜಗದೀಶ್, ಗುತ್ತಿಗೆದಾರ ರಾಘವೇಂದ್ರ, ಆಟೋ ಪಾರ್ಟ್ಶ್ರೀಕಂಠಸ್ವಾಮಿ, ವಿಷ್ಣು ಅಭಿಮಾನಿ ಸಂಘದ ದೊಡ್ಡಭೈರ, ಚಾಮುಂಡೇಶ್ವರಿ ಮೆಸ್ ಮಾಲೀಕ ಕೃಷ್ಣ, ಪಳನಿಸ್ವಾಮಿ, ಚಾಮುಂಡೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ಚಿಕ್ಕಸ್ವಾಮಿ, ಉಪಾಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ವಿಜಯ್, ಸಹ ಕಾರ್ಯದರ್ಶಿ ಭದ್ರ, ಖಜಾಂಚಿ ಮಹೇಶ್, ಮಾಜಿ ಅಧ್ಯಕ್ಷ ವಸೀಂ, ಸ್ವಾಮಿ, ಹಾಲಪ್ಪ, ಆನಂದ, ರವಿ, ಪರಶುರಾಮ, ಸುದೀಪ್, ಹರೀಶ್, ಯೋಗೀಶ್, ಪ್ರಕಾಶ್, ರವಿ, ಸಂಜೀವ, ನರಸಿಂಹ, ಶ್ರೀನಿವಾಸ್, ಚಂದ್ರ, ಮೂರ್ತಿ, ಶಶಿ, ಕಾರಯ್ಯ ಸೇರಿದಂತೆ ಆಟೋ ಚಾಲಕರು, ಮಾಲೀಕರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಿ.ಐ.ಎಸ್.ಎಫ್. ಕೋಸ್ಟಲ್ ಸೈಕ್ಲೋಥಾನ್ ರ್ಯಾಲಿಗೆ ಅದ್ದೂರಿ ಸ್ವಾಗತ

    February 18, 2026

    ಬೀದರ್‌ | ಕಾರಂಜಾ ಕಾಲುವೆಗೆ ಬಿದ್ದು ತಂದೆ–ಮಗ ಸಾವು

    February 17, 2026

    ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌ ನಲ್ಲಿ ಮಹಿಳಾ ಉದ್ಯಮಿಗಳನ್ನು ನೋಂದಾಯಿಸಲು ಮನವಿ

    February 16, 2026

    Leave A Reply Cancel Reply

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸಿ.ಐ.ಎಸ್.ಎಫ್. ಕೋಸ್ಟಲ್ ಸೈಕ್ಲೋಥಾನ್ ರ್ಯಾಲಿಗೆ ಅದ್ದೂರಿ ಸ್ವಾಗತ

    February 18, 2026

    ಕಾರವಾರ: ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಆಯೋಜಿಸಿರುವ…

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ

    February 17, 2026

    ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ

    February 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.