nammatumakuru

    Subscribe to Updates

    Get the latest creative news from FooBar about art, design and business.

    What's Hot

    ರೀಲ್ಸ್‌ ಹುಚ್ಚು: ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಬೆಂಗಳೂರಿನ ಮಹಿಳೆ!

    March 18, 2026

    ಶಿರಾದಲ್ಲಿ LPG ಸಿಲಿಂಡರ್ ಅಭಾವ: ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬಿಸಿ

    March 18, 2026

    ಮಹನೀಯರ ಜಯಂತಿ ಅದ್ದೂರಿ ಆಚರಣೆ: ಬಳ್ಳಾರಿ ಎಡಿಸಿ ಮಹಮ್ಮದ್ ಝುಬೇರ್ ಎನ್. ಹೇಳಿಕೆ

    March 17, 2026
    Facebook Twitter Instagram
    ಟ್ರೆಂಡಿಂಗ್
    • ರೀಲ್ಸ್‌ ಹುಚ್ಚು: ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಬೆಂಗಳೂರಿನ ಮಹಿಳೆ!
    • ಶಿರಾದಲ್ಲಿ LPG ಸಿಲಿಂಡರ್ ಅಭಾವ: ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬಿಸಿ
    • ಮಹನೀಯರ ಜಯಂತಿ ಅದ್ದೂರಿ ಆಚರಣೆ: ಬಳ್ಳಾರಿ ಎಡಿಸಿ ಮಹಮ್ಮದ್ ಝುಬೇರ್ ಎನ್. ಹೇಳಿಕೆ
    • ಬಳ್ಳಾರಿ:  SSLC ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿ ನಿಷೇಧಾಜ್ಞೆ ಜಾರಿ
    • ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ
    • ಮಾ.18ರಿಂದ SSLC ಪರೀಕ್ಷೆ ಆರಂಭ: 8.65 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ, ಶಿಕ್ಷಣ ಸಚಿವರ ಶುಭಾಶಯ
    • ‘ಸೆರಗ ಸರ್ಸೆ’ ಹಾಡಿನ ವಿವಾದ: ಫಿಲ್ಮ್ ಚೇಂಬರ್‌ ಗೆ ಮಹಿಳಾ ಆಯೋಗದಿಂದ ಪತ್ರ
    • ತಿಪಟೂರಿನಲ್ಲಿ ಅಡುಗೆ ಅನಿಲ ಅಭಾವ: ಸಿಲಿಂಡರ್‌ ಗಾಗಿ ಗ್ರಾಹಕರ ಹೈರಾಣು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರಗೂರು: ವಿಜೃಂಭಣೆಯಿಂದ ನಡೆದ  ಹನುಮ ಜಯಂತಿ ಉತ್ಸವದ ಶೋಭಯಾತ್ರೆ
    ಜಿಲ್ಲಾ ಸುದ್ದಿ January 5, 2026

    ಸರಗೂರು: ವಿಜೃಂಭಣೆಯಿಂದ ನಡೆದ  ಹನುಮ ಜಯಂತಿ ಉತ್ಸವದ ಶೋಭಯಾತ್ರೆ

    By adminJanuary 5, 2026No Comments2 Mins Read
    sargur

    ಸರಗೂರು:  ಹಿಂದೂ ಸಂಘಟನೆಗಳ ಜಾಗೃತಿಗಾಗಿ ಪಟ್ಟಣದ ಶ್ರೀ ಹನುಮಜಯಂತಿ ಆಚರಣಾ ಸಮಿತಿ ಭಾನುವಾರ ಆಯೋಜಿಸಿದ್ದ ಹನುಮ ಜಯಂತಿ ಉತ್ಸವದ ಶೋಭಯಾತ್ರೆ ಬಹಳ ವಿಜೃಂಭಣೆಯಿಂದ ಜರುಗಿತು.

    ದಾರಿಯುದ್ದಕ್ಕೂ ಭಗವಾನ್ ಹನುಮನ ಘೋಷಣೆ ಮೊಳಗಿದವು.  ಶೋಭಾಯಾತ್ರೆ ಅಂಗವಾಗಿ ಪಲ್ಲಕ್ಕಿಯಲ್ಲಿ ಕೂರಿಸಿದ್ದ ಹನುಮಂತನ ಭಾವಚಿತ್ರಕ್ಕೆ ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ, ಪಡುವಲು ವಿರಕ್ತಮಠದ ಮಹಾದೇವಸ್ವಾಮೀಜಿ, ಭರತೇಶ್ ಗುರೂಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸರಗೂರು ತಾಲೂಕು ಅಧ್ಯಕ್ಷ ಕೆ.ಎಂ.ವೀರಭದ್ರಪ್ಪ, ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ, ಮುಖಂಡರಾದ ಜಯಪ್ರಕಾಶ್, ಆಚರಣಾ ಸಮಿತಿ ಅಧ್ಯಕ್ಷ ನವೀನ್‌ಕುಮಾರ್ ಸೇರಿದಂತೆ ಮುಖಂಡರು ಹನುಮನ ಭಾವಚಿತ್ರವುಳ್ಳ ಶೋಭಯಾತ್ರೆಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.


    Provided by
    Provided by

    ಪಟ್ಟಣದ ಕೆಇಬಿ ಕಚೇರಿಯಿಂದ ಹೊರಟ ಶೋಭಾಯಾತ್ರೆ ಮೆರವಣಿಗೆಯು ಹುಣಸೂರು–ಎಸ್.ಬೇಗೂರು ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣ, ಮಹಾವೀರ ವೃತ್ತ, ಚಿಕ್ಕದೇವಮ್ಮನ ವೃತ್ತ, ಮೂಲಕ ೨ನೇ ಮುಖ್ಯ ರಸ್ತೆಯಲ್ಲಿ ಸಾಗಿ ಸಂತೆಮಾಳದ ಮಾಸ್ತಮ್ಮನ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.

    ಪಟ್ಟಣದ ಪ್ರಮುಖ ಬೀದಿಗಳು ಕೆಸರಿಮಯವಾಗಿದ್ದು, ಹನುಮನ ಭಕ್ತರ ಕೈಯಲ್ಲಿ ಕೆಸರಿ ಬಾವುಟಗಳು ರಾರಾಜಿಸಿದವು. ಇದಲ್ಲದೆ ಭಕ್ತರು ಹನುಮನ ಧ್ಯಾನ, ಶ್ಲೋಕಗಳನ್ನು ಪಠಣ ಮಾಡಿ, ವಿವಿಧ ಘೋಷಣೆ ಕೂಗುತ್ತಾ ದಾರಿಯುದ್ದಕ್ಕೂ ಜೈಕಾರ ಹಾಕಿದರು. ವಾದ್ಯಗೋಷ್ಠಿಗಳು ಮೊಳಗಿದವು. ಹಳೆ ಹೆಗ್ಗುಡಿಲು ನೀಲಕಂಠ ತಂಡದಿಂದ ವೀರಗಾಸೆ ನೃತ್ಯ ಪ್ರದರ್ಶನವಾಯಿತು. ಅಲ್ಲಲ್ಲಿ ಮಜ್ಜಿಗೆ, ಪಾನಕ ವಿತರಿಸಲಾಯಿತು. ಇದರೊಂದಿಗೆ ಮುಸ್ಲಿಂ ಬಾಂಧವರೂ ಮಜ್ಜಿಗೆ ವಿತರಣೆ ಮಾಡಿದ್ದು, ವಿಶೇಷವಾಗಿತ್ತು.

    ಮುಖಂಡರಾದ ಜಯಪ್ರಕಾಶ್ ಮಾತನಾಡಿ, ಎಲ್ಲರೂ ಒಗ್ಗೂಡಿ ಹನುಮನ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಸದೃಢ, ಸಮಾನತೆ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಯುಕವಕರ ಮೇಲಿದೆ. ಹೀಗಾಗಿ ಎಲ್ಲರೂ ಶ್ರಮಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಿದರೆ ಒಳಿತು ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ವಿನಯ್, ನೂರಾಳಸ್ವಾಮಿ, ಉಮಾರಾಮಚಂದ್ರ, ಮಾಜಿ ಮೇಯರ್ ಶಿವಕುಮಾರ್, ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈಕಾ ಪ್ರೇಮ್‌ಕುಮಾರ್, ಮುಖಂಡರಾದ ಮೊತ್ತ ಬಸವರಾಜಪ್ಪ, ಶ್ರೀನಾಥ್, ಬಿಜೆಪಿ ಟೌನ್ ಅಧ್ಯಕ್ಷ ಚನ್ನಪ್ಪ, ಸಿ.ಕೆ.ಗಿರೀಶ್, ಹಂಚೀಪುರ ಗುರುಸ್ವಾಮಿ, ಮುಖಂಡರಾದ ದಡದಹಳ್ಳಿ ಡಿ.ಜಿ.ಶಿವರಾಜು, ಭಜರಂಗಿ ರಾಮು, ಗುರುಸ್ವಾಮಿ, ರವಿಕುಮಾರ್, ಮಂಜುನಾಥ್, ಗೋಬಿರಂಗಸ್ವಾಮಿ, ಶಿವಕುಮಾರ್, ಚಿಕ್ಕದೇವಮ್ಮ ಬೆಟ್ಟದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ನಂಜಪ್ಪ,  ಬಸವರಾಜು, ಆನಂದ ಮೈಲಾರಿ, ಉಮೇಶ್, ಅಭಿ, ರಮೇಶ್, ನವೀನ್, ಶ್ರೀವತ್ಸ, ಶೇಷ, ಬಂಕವಾಡಿ ಶ್ರೀಪಾಲ್ ಸ್ಯಾಂಡಿ, ಆರ್ಯಮಹೇಶ್, ಪೇಂಟ್‌ನಾಗರಾಜು, ಬಿಡುಗಲು ರಾಜು, ಫೈನಾನ್ಸ್ ಎಸ್.ಎ.ನಾಗೇಂದ್ರ, ಎಸ್.ಎಚ್.ರಮೇಶ್, ಜಯಂತ್, ಮುತ್ತಣ್ಣ, ಸಂತೋಷ್, ರೂಪೇಶ್, ಮಹೇಶ್, ಕನ್ನಡಪ್ರಮೋದ್ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಸಮಿತಿ ಸದಸ್ಯರು, ಮುಖಂಡರು ಹಾಜರಿದ್ದರು. ಶೋಭಾಯಾತ್ರೆ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರಗೂರು ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

    ಟ್ರ್ಯಾಕ್ಟರ್‌ಗಳಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು ಶೋಭಯಾತ್ರೆ ನಡೆಸಲಾಯಿತು. ಕೇಸರಿ ಟೀ ಶರ್ಟ್‌, ಶಾಲು ತೊಟ್ಟು ಗುಂಪು ಗುಂಪಾಗಿ ಮೆರವಣಿಗೆಯಲ್ಲಿ ಭಕ್ತರು ಸಾಗಿದರು.

    ಭಕ್ತರಿಗೆ ರಸ್ತೆಯುದ್ದಕ್ಕೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಶಿರಾದಲ್ಲಿ LPG ಸಿಲಿಂಡರ್ ಅಭಾವ: ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬಿಸಿ

    March 18, 2026

    ಮಹನೀಯರ ಜಯಂತಿ ಅದ್ದೂರಿ ಆಚರಣೆ: ಬಳ್ಳಾರಿ ಎಡಿಸಿ ಮಹಮ್ಮದ್ ಝುಬೇರ್ ಎನ್. ಹೇಳಿಕೆ

    March 17, 2026

    ಮಹಿಳೆಯರ ಚಿತ್ರಕಲೆಯಲ್ಲಿ ‘ಪ್ರಕೃತಿ’ ಅನಾವರಣ: ಹೇಮಂತ್ ಎನ್.

    March 17, 2026

    Leave A Reply Cancel Reply

    Our Picks

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026

    LPG ಸಿಲಿಂಡರ್‌ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಸಾವು!

    March 14, 2026

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರೀಲ್ಸ್‌ ಹುಚ್ಚು: ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಬೆಂಗಳೂರಿನ ಮಹಿಳೆ!

    March 18, 2026

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಜನ ಎಂತಹ ಹುಚ್ಚಾಟಕ್ಕೂ ಮುಂದಾಗುತ್ತಾರೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಆಘಾತಕಾರಿ ಘಟನೆಯೇ…

    ಶಿರಾದಲ್ಲಿ LPG ಸಿಲಿಂಡರ್ ಅಭಾವ: ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬಿಸಿ

    March 18, 2026

    ಮಹನೀಯರ ಜಯಂತಿ ಅದ್ದೂರಿ ಆಚರಣೆ: ಬಳ್ಳಾರಿ ಎಡಿಸಿ ಮಹಮ್ಮದ್ ಝುಬೇರ್ ಎನ್. ಹೇಳಿಕೆ

    March 17, 2026

    ಬಳ್ಳಾರಿ:  SSLC ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿ ನಿಷೇಧಾಜ್ಞೆ ಜಾರಿ

    March 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.