nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ, ಸದ್ಯ ಹಾಲು ಮಾರೋ ಕೆಲಸ ಕೊಟ್ಟಿದ್ದಾರೆ:  ಡಿ.ಕೆ.ಸುರೇಶ್

    March 4, 2026

    ನಾನೇನು ಎಂಬುದು ಸಿಎಂಗೆ ಚೆನ್ನಾಗಿ ಗೊತ್ತಿದೆ: ಡಿ.ಕೆ.ಶಿವಕುಮಾರ್

    March 4, 2026

    ರಾಜ್ಯ ಸರ್ಕಾರಕ್ಕೆ ಫೋನ್ ಕದ್ದಾಲಿಕೆ ಮಾಡುವ ಅಗತ್ಯವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ

    March 4, 2026
    Facebook Twitter Instagram
    ಟ್ರೆಂಡಿಂಗ್
    • ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ, ಸದ್ಯ ಹಾಲು ಮಾರೋ ಕೆಲಸ ಕೊಟ್ಟಿದ್ದಾರೆ:  ಡಿ.ಕೆ.ಸುರೇಶ್
    • ನಾನೇನು ಎಂಬುದು ಸಿಎಂಗೆ ಚೆನ್ನಾಗಿ ಗೊತ್ತಿದೆ: ಡಿ.ಕೆ.ಶಿವಕುಮಾರ್
    • ರಾಜ್ಯ ಸರ್ಕಾರಕ್ಕೆ ಫೋನ್ ಕದ್ದಾಲಿಕೆ ಮಾಡುವ ಅಗತ್ಯವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ
    • ವಿದೇಶಿ ಪ್ರವಾಸಕ್ಕೆ ಹೋಗಿದ್ದ ಶಾಸಕರು ವಾಪಸ್: ಯಾರ್ಯಾರು, ಏನೇನು ಅಧ್ಯಯನ ಮಾಡಿದ್ರು ?
    • ಖಮೇನಿ  ಹತ್ಯೆ ಹಿನ್ನೆಲೆ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಜಿ.ಪರಮೇಶ್ವರ್ ಎಚ್ಚರಿಕೆ
    • ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಶಾಸಕ ಸುರೇಶ್‌ ಬಾಬು ಸೂಚನೆ
    • ನಾಪತ್ತೆಯಾಗಿದ್ದ ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಗಳು ಪತ್ತೆ: ಸ್ವಾಮೀಜಿ ಹೋಗಿದ್ದೆಲ್ಲಿಗೆ?
    • ತುಮಕೂರು: ಭೀಮಸಂದ್ರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೆದ್ದಾರಿಯಲ್ಲಿನ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ
    ತುಮಕೂರು January 6, 2026

    ಹೆದ್ದಾರಿಯಲ್ಲಿನ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ

    By adminJanuary 6, 2026No Comments2 Mins Read
    protest

    ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ನಗರದ ವಾರ್ಡ್ ನಂ. 34ರ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂನಲ್ಲಿ ಎ ನ್‌ಹೆಚ್–4 ಕಾಯ್ದಿರಿಸಿದ ರಸ್ತೆ ಜಾಗದಲ್ಲಿ ಅನಧಿಕೃತ ಶೆಡ್‌ ಗಳನ್ನು ನಿರ್ಮಿಸಿದ್ದು ತೆರವುಗೊಳಿಸಲು ಹಾಗೂ ಹಿಂದೂ–ಮುಸ್ಲಿಂ ಎಂದು ದ್ವೇಷ ಬಿತ್ತುವ ಸಮಾಜ ಘಾತಕ ಜಯಸಿಂಹ ಎನ್ನುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ,  ತುಮಕೂರು ನಗರದ ವಾರ್ಡ್ ನಂ. 34 ರಲ್ಲಿರುವ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂ ಘೋಷಿತ ಕೊಳಚೆ ಪ್ರದೇಶವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಈ ಹಿಂದೆ ಎನ್‌ಹೆಚ್–4 ಗೆ ಬಂದ 12 ಗುಡಿಸಲುಗಳಿಗೆ ಪರಿಹಾರ ಹಣವಾಗಿ 1 ಲಕ್ಷದ ವರೆವಿಗೂ ಪಡೆದುಕೊಂಡು ಪರ್ಯಾಯವಾಗಿ ಕ್ಯಾತ್ಸಂದ್ರ ಎಸ್.ಎಲ್ ನಗರದಲ್ಲಿ ಹಕ್ಕುಪತ್ರಗಳನ್ನು ಇತ್ತೀಚೆಗೆ ಪಡೆದಿರುವ ಕೆಲವೊಬ್ಬರನ್ನು ಸ್ವಯಂ ಘೋಷಿತ ಸಮಾಜ ಸೇವಕ ಜಯಸಿಂಹ ಎಂಬುವವರು ಹಕ್ಕುಪತ್ರದ ಆಮಿಷವೊಡ್ಡಿ ಎಳ್ಳರಬಂಡೆಯ ನಾಗರಿಕರಲ್ಲಿ ಅಶಾಂತಿಯನ್ನು ಉಂಟು ಮಾಡಿ ಏಕಾಏಕಿ ಗುಡಿಸಲುಗಳನ್ನು ಹಾಕಿಸಿ ಇಲ್ಲಿ ವಾಸಿಸುವ ಕುಟುಂಬಗಳಿಗೆ ಬೆದರಿಕೆ ಹಾಕಿರುವುದು ಗೂಂಡಾ ಪ್ರವೃತ್ತಿಯಾಗಿದೆ. ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್ ಮತ್ತು ಮಾಜಿ ಸಚಿವರಾದ ಕೆ.ಎನ್ ರಾಜಣ್ಣನವರಿಗೆ ಸುಳ್ಳು ಮಾಹಿತಿಯನ್ನು ನೀಡಿ ಹಿಂದೂ ಮುಸ್ಲಿಂ ದ್ವೇಷವನ್ನು ಬಿತ್ತುತ್ತಿರುವುದು ಇಲ್ಲಿರುವ ಸಮಾಜದ ಶಾಂತಿಯನ್ನು ಕದಡುವ ಕೆಲಸವಾಗುತ್ತಿದೆ. ಘನ ಸರ್ಕಾರದ ಸುತ್ತೋಲೆ ಮತ್ತು ಮಾನದಂಡದಂತೆ ಇತ್ತೀಚೆಗೆ ಜಿಲ್ಲಾಡಳಿತ ಇಲ್ಲಿರುವ 44 ಕುಟುಂಬಗಳಿಗೆ ಹಕ್ಕುಪತ್ರ ನೀಡಿದೆ, ಹಾಗಾಗಿ ಅನಧಿಕೃತ ಶೆಡ್‌ಗಳನ್ನು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಬೇಕು. ದ್ವೇಷ ಬಿತ್ತುವ ಕಿಡಿಗೇಡಿಗಳ ಮೇಲೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.


    Provided by
    Provided by

    ಸ್ಥಳೀಯರಾದ ರಾಜಮ್ಮ ಮತ್ತು ನಗೀನಾ ಮಾತನಾಡಿ, ಕಳೆದ 40 ವರ್ಷಗಳಿಂದ ನಾವು ವಾಸಿಸುವ ಮನೆಗಳಿಗೆ ಹಕ್ಕುಪತ್ರಗಳಿರಲಿಲ್ಲ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಇರಲಿಲ್ಲ ನಾವು ತುಮಕೂರು ಸ್ಲಂ ಸಮಿತಿಯಿಂದ ಸಂಘಟಿತರಾಗಿ ನಮ್ಮ ಪ್ರದೇಶವನ್ನು ಘೋಷಣೆ ಮಾಡಿಸಿಕೊಂಡ ಮೇಲೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಕಲ್ಪಿಸಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದಿಂದ ಹಕ್ಕುಪತ್ರ ನೀಡಿರುವುದರಿಂದ ನಿಟ್ಟುಸಿರು ಬಿಟ್ಟಿದ್ದೇವೆ, ಆದರೆ ನಮ್ಮ ಪ್ರದೇಶಕ್ಕೆ ಸಂಬಂಧವಿಲ್ಲದ ಜಯಸಿಂಹ ಮತ್ತು ಅವರ ಹಿಂಬಾಲಕರು ನಮಗೆ ಪ್ರತಿನಿತ್ಯ ತೊಂದರೆ ನೀಡುತ್ತಿರುವುದಲ್ಲದೆ ಬೇರೆ ನಗರದ ಜನರನ್ನು ಕರೆಸಿ ಗುಂಪು ಗುಂಪಾಗಿ ಸೇರುವುದು, ತೊಡೆತಟ್ಟಿ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸ್ಥಳೀಯರನ್ನು ಎತ್ತುಕಟ್ಟಿ ಜಗಳ ಮಾಡಿಸಬೇಕೆಂದು ಮುಂದಾಗಿರುವುದು ಭಯದ ವಾತಾವರಣಕ್ಕೆ ಕಾರಣವಾಗಿದೆ ಮಾನ್ಯ ಜಿಲ್ಲಾಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.

    ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಗರಪಾಲಿಕೆ ಮತ್ತು ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಯಿತು ಪ್ರತಿಭಟನಾ ನೇತೃತ್ವವನ್ನು ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ, ತಂಕ್ರಯ್ಯ, ಮುಬಾರಕ್, ರಂಗನಾಥ್ ಶಾಬುದ್ದೀನ್ ವಹಿಸಿದ್ದರು ಎಳ್ಳರಬಂಡೆ ಶಾಖಾ ಸಮಿತಿಯ ಶಾಖಾ ಸಮಿತಿಯ ಜಾಬೀರ್ ಖಾನ್, ಮಂಜುನಾಥ್, ಶಹೇಬ್ ಉಲ್ಲಾಖಾನ್, ಗೌರಮ್ಮ, ರತ್ನಮ್ಮ, ಶಾರದಮ್ಮ, ಮುನೀರ್ ಅಹಮದ್, ಅಮೀನ್ ಬಾನು, ಜಯಂತಿ, ಮಂಜುಳಾ, ರಮಾದೇವಿ, ಆಯಿಷಾ, ಪದ್ಮ, ಅಂಜನಮ್ಮ ಪಾಲ್ಗೊಂಡಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ನಾಪತ್ತೆಯಾಗಿದ್ದ ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಗಳು ಪತ್ತೆ: ಸ್ವಾಮೀಜಿ ಹೋಗಿದ್ದೆಲ್ಲಿಗೆ?

    March 4, 2026

    ತುಮಕೂರು: ಭೀಮಸಂದ್ರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ

    March 4, 2026

    ಮೇಲ್ವರ್ಗ–ಕೆಳವರ್ಗ ಪದ ಬಳಕೆಯೇ ಸರಿ ಇಲ್ಲ: ಶಾಸಕ ಕೆ.ಎನ್.ರಾಜಣ್ಣ

    March 2, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ, ಸದ್ಯ ಹಾಲು ಮಾರೋ ಕೆಲಸ ಕೊಟ್ಟಿದ್ದಾರೆ:  ಡಿ.ಕೆ.ಸುರೇಶ್

    March 4, 2026

    ರಾಮನಗರ: ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ…

    ನಾನೇನು ಎಂಬುದು ಸಿಎಂಗೆ ಚೆನ್ನಾಗಿ ಗೊತ್ತಿದೆ: ಡಿ.ಕೆ.ಶಿವಕುಮಾರ್

    March 4, 2026

    ರಾಜ್ಯ ಸರ್ಕಾರಕ್ಕೆ ಫೋನ್ ಕದ್ದಾಲಿಕೆ ಮಾಡುವ ಅಗತ್ಯವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ

    March 4, 2026

    ವಿದೇಶಿ ಪ್ರವಾಸಕ್ಕೆ ಹೋಗಿದ್ದ ಶಾಸಕರು ವಾಪಸ್: ಯಾರ್ಯಾರು, ಏನೇನು ಅಧ್ಯಯನ ಮಾಡಿದ್ರು ?

    March 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.