ಸರಗೂರು: ಪಟ್ಟಣದಲ್ಲಿ ಶನಿವಾರ ಹಿಂದೂ ಸಮಾಜೋತ್ಸವದ ವತಿಯಿಂದ ಬೃಹತ್ ಶೋಭಾಯಾತ್ರೆ, ವಿಜೃಂಭಣೆಯಿಂದ ನೆರವೇರಿತು.
ಸ್ನೇಹಸ್ತ್ರೀ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಸುಧಾ ಮೃತ್ಯುಂಜಪ್ಪ ಮಾತನಾಡಿ, ಇವಾಗ ಎಲ್ಲರು ಹಿಂದೂ ಸಂಸ್ಕೃತಿ ಬಿಟ್ಟು ವಿದೇಶ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ವಿದೇಶಿಗಳು ನಮ್ಮ ಭಾರತ ಸಂಸ್ಕೃತಿ ಬಗ್ಗೆ ಮಾರು ಹೋಗಿ ನಮ್ಮ ಸಂಸ್ಕೃತಿ ದೊಡ್ಡದು ಎಂದು ತಿಳಿದು ಬರುತ್ತಿದ್ದಾರೆ. ಸಂಘಟನೆ ಮಾಡಬೇಕು, ದೇವಾಲಯಕ್ಕೆ ಹೋಗಬೇಕು, ಉಡುಗೆ ತೊಡುಗೆಯಿಂದ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸುತ್ತದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಹೊಳ್ಳ ಮಾತನಾಡಿ, ಹಿಂದೂಗಳಾದ ನಮ್ಮಲ್ಲಿ ನಮ್ಮ ದೇಶದ, ನಮ್ಮಗಳ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ಪರಿಚಯಿಸಲು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಎಲ್ಲೆಡೆ ಹಿಂದೂ ಸಮಾಜೋತ್ಸವ ಆಚರಿಲಾಗುತ್ತಿದೆ. ಮೊದಲು ಹಿಂದೂಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಭಾರತಾಂಬೆ ಏಕತೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವುದು ಹಿಂದೂ ಸಮಾಜೋತ್ಸವದ ಉದ್ದೇಶವಾಗಿದೆ ಎಂದರು.
ಹಂಚಿಪುರ ಮಠದ ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂತ್ವವನ್ನು ಎಲ್ಲರೂ ಮೈಗೂಡಿಸಿ ಕೊಳ್ಳಬೇಕು, ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಒಂದು ಜಾತಿ, ವರ್ಗಕ್ಕೆ ಸೀಮಿತ ವಾಗಿಲ್ಲ, ಎಲ್ಲ ವರ್ಗದ ಸಮುದಾಯಕ್ಕೆ ಸೇರಿದ್ದು, ಮುಂದಿನ ಪೀಳಿಗೆಗೆ ಬದುಕು ಕಟ್ಟಿಕೊಳ್ಳಲು ಇದು ಮಾರ್ಗದರ್ಶನವಾಗುತ್ತದೆ ಎಂದು ತಿಳಿಸಿದರು.
ವಕೀಲ ಎಂ.ಎನ್.ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಮಹಾವೀರ ವೃತ್ತದಲ್ಲಿ ಹಿಂದೂ ಸಮಾಜೋತ್ಸವದ ಶೋಭ ಯಾತ್ರೆಗೆ ಹಂಚೀಪುರ ಮಠದ ಕಿರಿಯ ಸ್ವಾಮಿಜಿ ತೋಂಟದಾರ್ಯ ಸ್ವಾಮಿ ಚಾಲನೆ ನೀಡಿದರು.
ಶೋಭ ಯಾತ್ರೆಯು ಮಹಾವೀರ ವೃತ್ತದ ಗಣೇಶ ದೇವಸ್ಥಾನದ ಮೂಲಕ ಹೊರಟು ಎರಡನೇ ಮುಖ್ಯ ರಸ್ತೆ ಮೂಲಕ, ಚಿಕ್ಕದೇವಮ್ಮ ವೃತ್ತದ ಮೂಲಕ ಬಸವೇಶ್ವರ ದೇವಸ್ಥಾನದ ಬಳಿ ಶುಭ ಯಾತ್ರೆಯು ಆಗಮಿಸಿತು.
ಹಿಂದೂ ಸಮಾಜೋತ್ಸವದ ಆಚರಣಾ ಸಮಿತಿ ಸಂಚಾಲಕ ರಾಮು, ಸಹ ಸಂಚಾಲಕ ಭರತ್, ರವಿಕುಮಾರ್, ಚನ್ನಪ್ಪ, ಮಹೇಶ್ ಪಟೇಲ್, ಚನ್ನಪ್ಪ ಬಜರಂಗಿ, ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಶಿವಕುಮಾರ್, ರಾಧಿಕಾ ಶ್ರೀನಾಥ್,ಉಮಾ ರಾಮು, ವಿನಾಯಕ್, ನೂರಾಳ ಸ್ವಾಮಿ, ನವೀನ್ ಕುಮಾರ್, ನಾಗರಾಜು, ಗೋಬಿ ರಂಗಸ್ವಾಮಿ, ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷ ಗುರುಸ್ವಾಮಿ, ಸಿ.ಕೆ.ಗಿರೀಶ್, ಎಚ್.ಹನು, ವರ್ತಕ ಮಂಡಳಿ ಅಧ್ಯಕ್ಷ ಎಸ್.ಪಿ.ಪ್ರಸಾದ್, ಎಸ್. ಹರೀಶ್, ಎಸ್.ಬಿ. ನಂಜುಂಡಸ್ವಾಮಿ, ಯಶವಂತ್, ಕಾಟವಾಳು ವೀರಭದ್ರಪ್ಪ, ಕೆ.ಸುರೇಶ್ ಜೈನ್, ಸುನಂದರಾಜು, ಎಸ್.ಎಚ್. ರಮೇಶ್ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


