ತುಮಕೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಆರೈಕೆ ವ್ಯವಸ್ಥೆ ಬಲಪಡಿಸುವ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಅವರು ಕೆಲವೊಂದು ಶಿಫಾರಸ್ಸುಗಳನ್ನು ಸಲ್ಲಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಈ ಶಿಫಾರಸ್ಸು ಅಂಶಗಳನ್ನೊಳಗೊಂಡ ಪತ್ರ ರವಾನಿಸಿರುವ ಅವರು, ಜನನದ ಮೊದಲ 28 ದಿನಗಳು ಮಗುವಿನ ಬದುಕಿಗೆ ಅತ್ಯಂತ ಸಂವೇದನಾಶೀಲ ಅವಧಿಯಾಗಿದ್ದು, ಈ ಹಂತದಲ್ಲಿ ಸಮರ್ಪಕ ಚಿಕಿತ್ಸೆ ಮತ್ತು ಸುರಕ್ಷಿತ ಆರೈಕೆ ಲಭ್ಯವಾಗದಿದ್ದಲ್ಲಿ ಜೀವ ಅಪಾಯದ ಸಾಧ್ಯತೆ ಇರುತ್ತದೆ. ನವಜಾತ ಶಿಶುಗಳ ಆರೋಗ್ಯ ರಕ್ಷಣೆ ಮಕ್ಕಳ ಬದುಕುವ, ಬೆಳೆಯುವ ಹಾಗೂ ಗೌರವಪೂರ್ಣ ಬದುಕಿನ ಹಕ್ಕಿಗೆ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎನ್.ಐ.ಸಿ.ಯು., ಎಸ್.ಎನ್.ಸಿ.ಯು. ಹಾಗೂ ಎನ್.ಬಿ.ಎಸ್.ಯು. ಗಳಲ್ಲಿ ನವಜಾತ ಶಿಶುಗಳ ಆರೈಕೆ ಬಲವರ್ಧನೆಗೆ ಕೆಲವು ಕ್ರಮ ಜರುಗಿಸುವ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿದ್ದಾರೆ.
ಮೂಲ ಸೌಕರ್ಯ ಮತ್ತು ವೈದ್ಯಕೀಯ ಉಪಕರಣಗಳ ತುರ್ತು ಒದಗಿಸುವಿಕೆ, ಅಗತ್ಯ ಪ್ರಮಾಣದ ತಜ್ಞ ವೈದ್ಯರು ಮತ್ತು ತರಬೇತಿ ಪಡೆದ ಸಿಬ್ಬಂದಿ ನೇಮಕ, ಹಾಸಿಗೆ ಮತ್ತು ಕೊಠಡಿ ವ್ಯವಸ್ಥೆ ವಿಸ್ತರಣೆ, ನಿರಂತರ ತರಬೇತಿ ಮತ್ತು ಮಾನದಂಡ ಆಧಾರಿತ ಆರೈಕೆ ವ್ಯವಸ್ಥೆ, ಮೇಲ್ವಿಚಾರಣೆ ಮತ್ತು ಜವಾಬ್ದಾರಿ ವ್ಯವಸ್ಥೆ ಈ ಕ್ರಮಗಳನ್ನು ಅನುಸರಿಸಿದರೆ ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯ ಕಾರ್ಯ ಎಂದು ತಿಪ್ಪೇಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


