ತುಮಕೂರು: ಕೃಷಿ ಕೂಲಿ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಜಾರಿಗೆ ತರುತ್ತಿರುವ ಜನ ವಿರೋಧಿ ನೀತಿಗಳನ್ನು ಹಾಗೂ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ಮುಷ್ಕರದ ಅಂಗವಾಗಿ ತುಮಕೂರುನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾದವು.
ಕಾರ್ಮಿಕ ವಿರೋಧಿಯಾಗಿರುವ 4 ಸಂಹಿತೆಗಳನ್ನು ಜಾರಿಗೊಳಿಸುವುದನ್ನು ವಿರೋಧಿಸಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪುನರ್ ಸ್ಥಾಪಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಸೇವೆಗಳನ್ನು ಖಾಯಂ ಮಾಡಿ, 12 ಗಂಟೆಯ ದುಡಿಮೆ ಕಾನೂನು ಹಿಂಪಡೆಯಿರಿ, ಕನಿಷ್ಠ ವೇತನ ಮಾಸಿಕ 41 ಸಾವಿರ ನಿಗದಿ ಮಾಡಿ, ನಿಗದಿತ ಕಾಲಾವಧಿ ದುಡಿಮೆ ಅವಕಾಶ ನೀಡಿ, ಖಾಯಂ ಕೆಲಸಗಳೇ ಇಲ್ಲದಂತೆ ಮಾಡುವುದನ್ನು ವಿರೋಧಿಸಿ. ವಿದ್ಯುತ್ ಬಳಕೆದಾರರಿಗೆ ವಿಪರೀತ ಬೆಲೆ ಏರಿಕೆಗೆ ಕಾರಣವಾಗುವ ವಿದ್ಯುತ್ ಖಾಸಗೀಕರಣಕ್ಕೆ ದಾರಿ ಮಾಡುವ ವಿದ್ಯುತ್ ಕಾಯ್ದೆ ವಿರೋಧಿಸಿ. ರೈತರ ಸ್ವಾವಲಂಬನೆಗೆ ಕುತ್ತು ತರುವ ಬೀಜ ಮಸೂದೆ ವಿರೋಧಿಸಿ, ಬಲವಂತದ ಭೂಸ್ವಾಧೀನ, ಬಗರ್ ಹುಕುಂ ಸಾಗುವಳಿದಾರರ ಪ್ರಶ್ನೆ ಇತ್ಯರ್ಥಕ್ಕೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಸಾವಿರಾರು ರೈತ-ಕಾರ್ಮಿಕರು ಟೌನ್‌ಹಾಲ್ ಮುಂಭಾಗ ಸಮಾವೇಶಗೊಂಡು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಬಿ.ಎಸ್.ಎನ್.ಎಲ್ ಕಚೇರಿ ಎದುರು ಮುತ್ತಿಗೆ ಹಾಕಿದರು.
ಅಂತರಸನ ಹಳ್ಳಿ, ಸತ್ಯಮಂಗಲ, ವಸಂತನರಸಾಪುರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಲಸಕ್ಕೆ ಹಾಜರಾಗದ ಸಾವಿರಾರು ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾದರು. ಅಂಗನವಾಡಿ, ಬಿಸಿಯೂಟ, ಆಶಾ, ಮುನಿಸಿಪಲ್, ಆಸ್ಪತ್ರೆ, ಹಮಾಲಿ ಕಾರ್ಮಿಕರು, ಫುಟ್ ಪಾತ್ ವ್ಯಾಪಾರಿಗಳು, ಬ್ಯಾಂಕ್ ನೌಕರರು, ವಿಮಾ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


