ಬೇಲೂರು: ಮಕ್ಕಳು ಆಟದೊಂದಿಗೆ ಪಾಠ ಪ್ರವಚನಗಳ ಕಡೆ ಗಮನಹರಿಸಬೇಕು ಎಂದು ಸಂಹಿತ ಟಿನಿ ಕಿಡ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ. ಎಸ್. ಹರೀಶ್ ಹೇಳಿದರು.
ಗ್ರಾಮದ ಶ್ರವಣ್ ಪಟೇಲ್ ಕಲ್ಯಾಣ ಮಂಟಪದಲ್ಲಿ ಸಂಹಿತ ಟಿನಿ ಕಿಡ್ ಶಾಲೆಯ ಜಾಂಬೂರಿ ಎರಡನೇ ವರ್ಷದ ಯುಕೆಜಿ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲೆಯ ಆವರಣಕ್ಕೆ ಬಂದಾಗ ಪುಟ್ಟ ಪುಟ್ಟ ಮಕ್ಕಳು ಆಟದೊಂದಿಗೆ ಪಾಠ ಪ್ರವಚನಗಳ ಕಡೆ ಗಮನಹರಿಸುತ್ತಿದ್ದರೆ ನಾವು ಸಹ ಮಕ್ಕಳ ಜೊತೆಗೆ ಒಂದಾಗುತ್ತೇವೆ. ಪುಟ್ಟ ಮಕ್ಕಳ ಪೋಷಕರು ಸಹಕಾರದಿಂದ ಈ ಶಾಲೆಯು ಇಷ್ಟರ ಮಟ್ಟಿಗೆ ಬೆಳೆಯಲು ಸಹಕಾರಿಯಾಗಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಮಕ್ಕಳ ಆಟ ಪಾಠ ವ್ಯಾಸಂಗಕ್ಕೆ ಬೇಕಾಗುವ ಸೌಲಭ್ಯವನ್ನು ನೀಡುತ್ತೇವೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸಿ.ಆರ್. ಲಾವಣ್ಯ ಮಾತನಾಡುತ್ತಾ, ಈ ಸಂಸ್ಥೆಯು ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳ ಜ್ಞಾನ, ವಿದ್ಯಾರ್ಜನೆ ಅತಿ ಮುಖ್ಯವಾಗಿದೆ. ಅದಕ್ಕೆ ನಮ್ಮ ಶಿಕ್ಷಕ ವೃಂದದವರು ಮಕ್ಕಳ ವ್ಯಾಸಂಗದ ಕಡೆ ಹೆಚ್ಚಿಗೆ ಗಮನ ಹರಿಸಿ ಅವರ ಮುಂದಿನ ವ್ಯಾಸಂಗದ ಬುನಾದಿ ಗಟ್ಟಿ ಮಾಡುವುದೇ ನಮ್ಮಗಳ ಮೂಲ ಉದ್ದೇಶವಾಗಿದೆ ಎಂದರು.
ನಂತರ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಸಿ.ಎನ್. ಬಸವರಾಜು, ಹೇಮಂತ್ ಕುಮಾರ್, ವಕೀಲ ಪ್ರವೀಣ್ ಕುಮಾರ್, ಹೆಗ್ಗರೆಯ ಗುರುಕುಲ ಕಿಡ್ ಸಂಸ್ಥೆಯ ಕಾಂತರಾಜು, ಸಂಹಿತ ಸಂಸ್ಥೆಯ ಉಪಾಧ್ಯಕ್ಷ ಗಿರೀಶ್, ರಂಗಪ್ಪ, ಶಿವಣ್ಣ, ರೇಣುಕಾಪ್ರಸಾದ್, ಪೋಷಕರು ಹಾಗೂ ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


