ತಿಪಟೂರು: ಸಂವಿಧಾನ ಒಂದು ಜಾತಿಗೆ ಅಥವಾ ವರ್ಗಕ್ಕೆ ಜನರಿಗೆ ಸೀಮಿತ ಎಂಬ ಭ್ರಮೆಯಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಸಿ.ಬಿ.ಶಶಿಧರ್ ತಿಳಿಸಿದರು.
ಸ್ಪಂದನ ಟ್ರಸ್ಟ್ ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ ಸಂವಿಧಾನದ ಅರಿವು ಹಾಗೂ ಸಂವಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರು ಶಿಬಿರಾರ್ಥಿಗಳ ಪೈಕಿ 20 ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ಬೆಳ್ಳಿ ನಾಣ್ಯ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಐದು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬೆಳ್ಳಿ ನಾಣ್ಯಹಾಗೂ ತಲ 5,000 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಉತ್ತಮ ಹತ್ತು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬೆಳ್ಳಿ ನಾಣ್ಯ ನೀಡಿ ತಲ ಎರಡೂವರೆ ಸಾವಿರ ರೂಪಾಯಿ ನೀಡಿಸನ್ಮಾನಿಸಲಾಯಿತು. ಉಳಿದ ಆರು ಶಿಬಿರಾರ್ಥಿ ಗಳಿಗೆ ಬೆಳ್ಳಿ ನಾಣ್ಯದೊಂದಿಗೆ ಪ್ರಶಸ್ತಿ ಪತ್ರನೀಡಲಾಯಿತು.
ಈ ಕಾರ್ಯಕ್ರಮದೊಂದಿಗೆ ಮುಖಂಡರಾದ ವಕೀಲೆ ಪೌಸಿಯ ಖಾನ ರಂಗಸ್ವಾಮಿ ಶಾಂತಕುಮಾರ್ ಹಲವಾರು ಮುಖಂಡರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


