ಧಾರವಾಡ : ಇಂದು (ಮಾ.3) ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಎಡಿಸಿ ಅವರಾದ ಗೀತಾ ಸಿ.ಡಿ. ಅವರು ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಸಮಾಜಗಳು, ಜಾತಿಗಳು, ಧರ್ಮಗಳು, ತಮ್ಮದೇ ವೈಭವವನ್ನು ಸಮಾಜದ ಮೇಲೆ ಪ್ರಭಾವ ಬಿರುತ್ತಾ ಬಂದಿವೆ. ಸಂಸ್ಕøತಿಗಳು, ಕಲೆಗಳು, ವಿಚಾರಗಳು ಭಿನ್ನವಾದಂತಹ ದೇಶದಲ್ಲಿ ಒಂದು ಚಿಕ್ಕ ಧರ್ಮದಲ್ಲಿ ಜನಿಸಿದಂತಹ ಶ್ರೀ ಯೋಗಿನಾರೇಯಣ ಯತೀಂದ್ರರ ಅವರು ಮಹಾನ್ ಪುರುಷರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಭೂಮಿ ವಿವಿಧ ಮಹಾಪುರುಷರನ್ನು ಜನ್ಮ ನೀಡಿದ ಪವಿತ್ರ ನಾಡಾಗಿದೆ. ಪ್ರತಿ ಜನಾಂಗಕ್ಕೂ ಒಬ್ಬ ಮಹಾನ್ ವ್ಯಕ್ತಿ ಇದ್ದು ಅವರು ತಮ್ಮ ಸಮುದಾಯದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸಿದವರು. ಇಂತಹ ಮಹನೀಯರ ಜೀವನಚರಿತ್ರೆ ಮತ್ತು ತತ್ವಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
ಸಂಸ್ಕೃತಿ ಎಂದರೆ ಕೇವಲ ಆಚರಣೆಗಳಲ್ಲ. ಅದು ನಮ್ಮ ನಡೆ–ನುಡಿ ಪಾಠ ಕಲೆ ಮತ್ತು ಜೀವನಮೌಲ್ಯಗಳ ಸಂಕಲನವಾಗಿದೆ ಮಹಾಪುರುಷರ ಆದರ್ಶಗಳನ್ನು ನಾವು ಪುನಃ ಸ್ಮರಿಸಿ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಂದು ಹೇಳಿದರು
ಧಾರವಾಡ ಬಲಿಜ ಸಮಾಜ ಉಪಾಧ್ಯಕ್ಷ ನಾಗರಾಜ ಶಿಗ್ಗಾಂವ ಅವರು ಶ್ರೀ ಯೋಗಿನಾರೇಯಣ ಯತೀಂದ್ರರ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ಆರತಿ ದೇವಶಿಖಾಮಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಉಪತಹಶೀಲ್ದಾರ ಕೆ.ಶ್ರೀಧರ, ಬಲಿಜ ಸಮಾಜದ ಅಧ್ಯಕ್ಷ ಪ್ರಶಾಂತ ಕುಮಾರ ನಾಯ್ಡು, ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶ ನಾಯ್ಡು, ಸಮಾಜದ ಹಿರಿಯರು ಶಾಂತಕುಮಾರಿ, ದಿನೇಶ ರೆಡ್ಡಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


