nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026

    ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!

    May 25, 2026

    ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು

    May 25, 2026
    Facebook Twitter Instagram
    ಟ್ರೆಂಡಿಂಗ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    • ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
    • ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು
    • ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?
    • ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಅನರ್ಹರಿಗೆ ಕೋಕ್!
    • ಪಾವಗಡ ಗಡಿ ಗ್ರಾಮಗಳಲ್ಲಿ ಜಾನುವಾರು, ಕೇಬಲ್ ಕಳ್ಳರ ಹಾವಳಿ: ರೈತರು ಕಂಗಾಲು!
    • ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ:  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ
    ತುಮಕೂರು March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    By adminMarch 7, 2026No Comments2 Mins Read
    siddaramaiah

    ತುಮಕೂರು: ಶುಕ್ರವಾರ ಮಂಡನೆಯಾದ ರಾಜ್ಯ ಬಜೆಟ್‌ ನಲ್ಲಿ ತುಮಕೂರು ಜಿಲ್ಲೆಗೆ ಅತ್ಯಲ್ಪ ಕೊಡುಗೆ ನೀಡಲಾಗಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ದೊಡ್ಡ ಯೋಜನೆಗಳ ಘೋಷಣೆಯಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ‘ಗ್ರೇಟರ್ ತುಮಕೂರು’ಗೆ ಹಿನ್ನಡೆ: ಸಚಿವ ಜಿ. ಪರಮೇಶ್ವರ್ ಅವರು ಆಶಿಸಿದ್ದ ‘ಗ್ರೇಟರ್ ತುಮಕೂರು’ ಯೋಜನೆಗೆ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ. ಸುಮಾರು 500 ಕೋಟಿ ರೂ. ಅನುದಾನದ ನಿರೀಕ್ಷೆಯಲ್ಲಿದ್ದ ಜಿಲ್ಲೆಗೆ ಕೇವಲ ಬಿಡಿಗಾಸಿನ ಯೋಜನೆಗಳನ್ನು ನೀಡಲಾಗಿದೆ ಎಂಬ ಟೀಕೆ ಕೇಳಿಬಂದಿದೆ.


    Provided by
    Provided by

    ಮೆಟ್ರೋ ಮತ್ತು ಐಟಿ ಪಾರ್ಕ್ ನಿರ್ಲಕ್ಷ್ಯ: ನಮ್ಮ ಮೆಟ್ರೋ ಯೋಜನೆಯನ್ನು ತುಮಕೂರಿನವರೆಗೆ ವಿಸ್ತರಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅಲ್ಲದೆ, 100 ಕೋಟಿ ರೂ. ವೆಚ್ಚದ ಐಟಿ ಪಾರ್ಕ್ ನಿರ್ಮಾಣದ ಪ್ರಸ್ತಾವನೆಯನ್ನೂ ಬಜೆಟ್ ಕೈಬಿಟ್ಟಿದೆ.

    ಕ್ರೀಡಾ ಕ್ಷೇತ್ರಕ್ಕೆ ಅನ್ಯಾಯ: ಅಂತರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ ಮತ್ತು ಈಜುಕೊಳಕ್ಕೆ ಈ ಹಿಂದೆ 6 ಕೋಟಿ ರೂ. ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು, ಆದರೆ ಈಗ ಕೇವಲ 3 ಕೋಟಿ ರೂ. ಮಾತ್ರ ಮೀಸಲಿಡಲಾಗಿದೆ.

    ಕೃಷಿ ಮತ್ತು ಮೂಲಸೌಕರ್ಯ: ಜಿಲ್ಲೆಯ ಪ್ರಮುಖ ಬೆಳೆಗಳಾದ ತೆಂಗು, ಹುಣಸೆ ಮತ್ತು ಹಲಸು ಸಂಸ್ಕರಣಾ ಘಟಕಗಳಿಗೆ ಯಾವುದೇ ಉತ್ತೇಜನ ಸಿಕ್ಕಿಲ್ಲ. ನಗರದ ಹೊರವಲಯದಲ್ಲಿ ಲಾಲ್‌ಬಾಗ್ ಮಾದರಿಯ ಉದ್ಯಾನವನ ನಿರ್ಮಿಸುವ ಜಿಲ್ಲಾಡಳಿತದ ಬೇಡಿಕೆಯನ್ನು ಪುರಸ್ಕರಿಸಲಾಗಿಲ್ಲ.

    ಜಿಲ್ಲೆಗೆ ಸಿಕ್ಕಿದ ಕೆಲವು ಪ್ರಮುಖ ಯೋಜನೆಗಳು:

    • ವಡೆಯರಪುರ ಬಳಿ 1.7 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣ.
    • ಗುಬ್ಬಿ ವೀರಣ್ಣ ಕಲಾಕ್ಷೇತ್ರದ ನವೀಕರಣಕ್ಕೆ 3 ಕೋಟಿ ರೂ.
    • ಕುಣಿಗಲ್, ತಿಪಟೂರು, ಮಧುಗಿರಿ ಮತ್ತು ಶಿರಾದಲ್ಲಿ ಶ್ರಮಿಕ ವಸತಿ ಶಾಲೆಗಳ ಆರಂಭ.
    • ತುಮಕೂರಿನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ.

    ಒಟ್ಟಾರೆಯಾಗಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ‘ಬಜೆಟ್’ ಇದಲ್ಲ ಎಂಬ ಭಾವನೆ ಜಿಲ್ಲೆಯ ಜನರಲ್ಲಿ ಮೂಡಿದೆ. ಸಚಿವ ಪರಮೇಶ್ವರ್ ಅವರ ‘ಒಂಟಿ ಧ್ವನಿ’ಗೆ ಸಿಎಂ ಸಿದ್ದರಾಮಯ್ಯ ಅವರಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ:  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ

    May 24, 2026

    ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ: 1.98 ಲಕ್ಷ ರೂಪಾಯಿ ಕಳೆದುಕೊಂಡ ತುಮಕೂರಿನ ವ್ಯಕ್ತಿ!

    May 24, 2026

    ತುಮಕೂರು ಜಿಲ್ಲೆಯಲ್ಲಿ 0.3 ಮಿ.ಮೀ. ಮಳೆ

    May 24, 2026

    Leave A Reply Cancel Reply

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026

    ಗದಗ: ಕಂಪ್ಯೂಟರ್ ಕ್ಲಾಸ್‌ ಗೆ ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ, ಅಪಹರಿಸಿ ಮತ್ತೊಮ್ಮೆ  ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆಯೊಂದು ಗದಗ…

    ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!

    May 25, 2026

    ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು

    May 25, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.