ಬೆಂಗಳೂರು: ರಾಜ್ಯದ ಸುಮಾರು 50 ಸಾವಿರ ಅತಿಥಿ ಶಿಕ್ಷಕರಿಗೆ ನೀಡಲಾಗುವ ಪೊಲೀಸ್ ಪರಿಶೀಲನೆ ಪ್ರಮಾಣಪತ್ರ (Police Verification Certificate) ನೀಡುವ ಪ್ರಕ್ರಿಯೆಯನ್ನು ಯಾವುದೇ ಲಂಚವಿಲ್ಲದೆ, ಅನಗತ್ಯ ವಿಳಂಬವಿಲ್ಲದೆ ಹಾಗೂ ಠಾಣೆಗೆ ಕರೆಸದೇ ಗೌರವಯುತವಾಗಿ ಕಾನೂನುಬದ್ಧವಾಗಿ ನಡೆಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಲಾಗಿದೆ.
ಈ ಸಂಬಂಧ KRS ಸಮಿತಿಯ ನಿಯೋಗ ಇಂದು ಕರ್ನಾಟಕ ಸರ್ಕಾರದ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಾದ M.A.Saleem ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಅತಿಥಿ ಶಿಕ್ಷಕರು ಪೊಲೀಸ್ ಪರಿಶೀಲನೆ ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ವಿಳಂಬ, ಅನಗತ್ಯ ದಾಖಲೆಗಳ ಬೇಡಿಕೆ ಹಾಗೂ ಠಾಣೆಗೆ ಹಾಜರಾಗಲು ಸೂಚನೆ ನೀಡುವಂತಹ ಸಮಸ್ಯೆಗಳು ಎದುರಾಗುತ್ತಿವೆ ಎಂದು ನಿಯೋಗ ತಿಳಿಸಿತು. ಈ ಸಮಸ್ಯೆಗಳನ್ನು ತಪ್ಪಿಸಲು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡುವಂತೆ ಮನವಿ ಮಾಡಲಾಗಿದೆ.
ಈ ನಿಯೋಗದಲ್ಲಿ ಗಜೇಂದ್ರ ಕುಮಾರ್ ಗೌಡ, ಶ್ರೀವಾರಿ ನಾಗರಾಜ್, ಸಂಪಯ್ಯ, ಶ್ಯಾಮಲಾ ಹಾಗೂ ಪ್ರಭಾಕರ್ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


