nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜಿಲ್ಲಾಡಳಿತದ ನಿರ್ಬಂಧಕ್ಕೆ ಡೋಂಟ್ ಕೇರ್: ಪೊಲೀಸರ ಎದುರೇ ಅಂಜನಾದ್ರಿ ಬೆಟ್ಟ ಏರಿದ ಪುನೀತ್ ಕೆರೆಹಳ್ಳಿ!

    March 22, 2026

    ಶಿರಾದ ಲಕ್ಕನಹಳ್ಳಿಯಲ್ಲಿ ಖಬರಸ್ಥಾನಕ್ಕೆ ಜಾಗ ನೀಡಲು ಮುಸ್ಲಿಮರ ಒತ್ತಾಯ: ಪ್ರತಿಭಟನೆ

    March 22, 2026

    ಇಟ್ನ — ಹಾಲುಗಡ ಜಾತ್ರೆ ಪ್ರಾಣಿಬಲಿ ಮುಕ್ತ: ದಯಾನಂದ ಸ್ವಾಮೀಜಿ

    March 21, 2026
    Facebook Twitter Instagram
    ಟ್ರೆಂಡಿಂಗ್
    • ಜಿಲ್ಲಾಡಳಿತದ ನಿರ್ಬಂಧಕ್ಕೆ ಡೋಂಟ್ ಕೇರ್: ಪೊಲೀಸರ ಎದುರೇ ಅಂಜನಾದ್ರಿ ಬೆಟ್ಟ ಏರಿದ ಪುನೀತ್ ಕೆರೆಹಳ್ಳಿ!
    • ಶಿರಾದ ಲಕ್ಕನಹಳ್ಳಿಯಲ್ಲಿ ಖಬರಸ್ಥಾನಕ್ಕೆ ಜಾಗ ನೀಡಲು ಮುಸ್ಲಿಮರ ಒತ್ತಾಯ: ಪ್ರತಿಭಟನೆ
    • ಇಟ್ನ — ಹಾಲುಗಡ ಜಾತ್ರೆ ಪ್ರಾಣಿಬಲಿ ಮುಕ್ತ: ದಯಾನಂದ ಸ್ವಾಮೀಜಿ
    • ಸರಗೂರು: ಮಾನವೀಯತೆ ಹಾಗೂ ಸಾಮರಸ್ಯದ ಬದುಕು ಇಂದಿನ ಅಗತ್ಯ: ಶಾಸಕ ಅನಿಲ್ ಚಿಕ್ಕಮಾದು
    • ರುಡ್‌ ಸೆಟ್ ಸಂಸ್ಥೆ: ಡಿಟಿಪಿ ತರಬೇತಿಗೆ ಅರ್ಜಿ
    • ಅಂಗನವಾಡಿ ಹುದ್ದೆ: ಆಕ್ಷೇಪಣೆ ಸಲ್ಲಿಸಲು ಅವಕಾಶ
    • ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ: ಯಾರೆಲ್ಲ ಅರ್ಜಿಸಲ್ಲಿಸಬಹುದು?
    • ಸಂಸತ್ತಿನಲ್ಲಿ ಶೇ.50 ಮಹಿಳಾ ಮೀಸಲಾತಿ ಮಸೂದೆ ಅನುಮೋದನೆಯಾಗಲಿ: ಸಚಿವ ಡಾ.ಜಿ.ಪರಮೇಶ್ವರ್ ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹುಳಿಯಾರು: ಲಾಕಪ್‌ ಡೆತ್‌ ಪ್ರಕರಣ: ಸಿಐಡಿ ತನಿಖೆಗೆ ಗೃಹ ಸಚಿವ ಜಿ.ಪರಮೇಶ್ವರ್‌ ಆದೇಶ
    ತುಮಕೂರು March 20, 2026

    ಹುಳಿಯಾರು: ಲಾಕಪ್‌ ಡೆತ್‌ ಪ್ರಕರಣ: ಸಿಐಡಿ ತನಿಖೆಗೆ ಗೃಹ ಸಚಿವ ಜಿ.ಪರಮೇಶ್ವರ್‌ ಆದೇಶ

    By adminMarch 20, 2026No Comments1 Min Read
    parameshwar

    ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ವ್ಯಕ್ತಿಯೊಬ್ಬರ ಸಾವಿನ (ಲಾಕಪ್ ಡೆತ್) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಜಿ.ಪರಮೇಶ್ವರ್, ಈ ಬಗ್ಗೆ ಸಿಐಡಿ ತನಿಖೆಗೆ ಶುಕ್ರವಾರ ಆದೇಶಿಸಿದ್ದಾರೆ.

    ಯಳನಾಡು ಗ್ರಾಮದ ಕಾಂತರಾಜು (50) ಎಂಬುವವರನ್ನು ಜೂಜಾಟದ ಆರೋಪದ ಮೇಲೆ ಪೊಲೀಸರು ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದರು. ಬೆಳಗಿನ ಜಾವ ಸುಮಾರು 1:30ರ ಸುಮಾರಿಗೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂತರಾಜು ಮೃತಪಟ್ಟಿದ್ದಾರೆ.


    Provided by
    Provided by

    ಈ ಸಾವು ಪೊಲೀಸ್ ದೌರ್ಜನ್ಯದಿಂದಲೇ ಸಂಭವಿಸಿದೆ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು, ಹುಳಿಯಾರು ಪೊಲೀಸ್ ಠಾಣೆಯ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಂತರ ತುಮಕೂರು ಎಸ್ಪಿ ಅವರು ಸೂಕ್ತ ತನಿಖೆಯ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

    ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, “ವಿಚಾರಣೆಯ ಸಮಯದಲ್ಲಿ ಸಾವು ಸಂಭವಿಸಿರುವುದು ದುರದೃಷ್ಟಕರ. ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ಸಿಐಡಿ ತನಿಖೆಗೆ ಆದೇಶಿಸಿದ್ದೇನೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮೃತರ ಮೇಲೆ ದೈಹಿಕ ಹಲ್ಲೆ ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ. ಒಂದು ವೇಳೆ ಪೊಲೀಸರ ಹಲ್ಲೆ ಸಾಬೀತಾದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ತಿಳಿಸಿದ್ದಾರೆ.

    ಪ್ರಸ್ತುತ ಮೃತದೇಹದ ಮರಣೋತ್ತರ ಪರೀಕ್ಷೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ರುಡ್‌ ಸೆಟ್ ಸಂಸ್ಥೆ: ಡಿಟಿಪಿ ತರಬೇತಿಗೆ ಅರ್ಜಿ

    March 21, 2026

    ಅಂಗನವಾಡಿ ಹುದ್ದೆ: ಆಕ್ಷೇಪಣೆ ಸಲ್ಲಿಸಲು ಅವಕಾಶ

    March 21, 2026

    ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ: ಯಾರೆಲ್ಲ ಅರ್ಜಿಸಲ್ಲಿಸಬಹುದು?

    March 21, 2026

    Leave A Reply Cancel Reply

    Our Picks

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026

    LPG ಸಿಲಿಂಡರ್‌ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಸಾವು!

    March 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಜಿಲ್ಲಾಡಳಿತದ ನಿರ್ಬಂಧಕ್ಕೆ ಡೋಂಟ್ ಕೇರ್: ಪೊಲೀಸರ ಎದುರೇ ಅಂಜನಾದ್ರಿ ಬೆಟ್ಟ ಏರಿದ ಪುನೀತ್ ಕೆರೆಹಳ್ಳಿ!

    March 22, 2026

    ಕೊಪ್ಪಳ: ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧದ ನಡುವೆಯೂ ಪುನೀತ್ ಕೆರೆಹಳ್ಳಿ ಪೊಲೀಸರೊಂದಿಗೆ ವಾಗ್ವಾದ…

    ಶಿರಾದ ಲಕ್ಕನಹಳ್ಳಿಯಲ್ಲಿ ಖಬರಸ್ಥಾನಕ್ಕೆ ಜಾಗ ನೀಡಲು ಮುಸ್ಲಿಮರ ಒತ್ತಾಯ: ಪ್ರತಿಭಟನೆ

    March 22, 2026

    ಇಟ್ನ — ಹಾಲುಗಡ ಜಾತ್ರೆ ಪ್ರಾಣಿಬಲಿ ಮುಕ್ತ: ದಯಾನಂದ ಸ್ವಾಮೀಜಿ

    March 21, 2026

    ಸರಗೂರು: ಮಾನವೀಯತೆ ಹಾಗೂ ಸಾಮರಸ್ಯದ ಬದುಕು ಇಂದಿನ ಅಗತ್ಯ: ಶಾಸಕ ಅನಿಲ್ ಚಿಕ್ಕಮಾದು

    March 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.