nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಡವರ ಮನೆ ಬೆಳಗಲು ಶಾಲೆ ಉಳಿಸಿ, ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ! : ಲಕ್ಕಪ್ಪ

    March 24, 2026

    ಗುಬ್ಬಿ: ಆಟೊ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರ ಆಕ್ರೋಶ; ಬಂಕ್ ಮುಂದೆ ಪ್ರತಿಭಟನೆ

    March 24, 2026

    ವಿಪಕ್ಷಗಳಿಂದ ಸರ್ಕಾರದ ವಿರುದ್ಧ ದಿವಾಳಿ ಆರೋಪ ಶುದ್ಧ ಸುಳ್ಳು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್

    March 24, 2026
    Facebook Twitter Instagram
    ಟ್ರೆಂಡಿಂಗ್
    • ಬಡವರ ಮನೆ ಬೆಳಗಲು ಶಾಲೆ ಉಳಿಸಿ, ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ! : ಲಕ್ಕಪ್ಪ
    • ಗುಬ್ಬಿ: ಆಟೊ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರ ಆಕ್ರೋಶ; ಬಂಕ್ ಮುಂದೆ ಪ್ರತಿಭಟನೆ
    • ವಿಪಕ್ಷಗಳಿಂದ ಸರ್ಕಾರದ ವಿರುದ್ಧ ದಿವಾಳಿ ಆರೋಪ ಶುದ್ಧ ಸುಳ್ಳು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್
    • ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
    • ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!
    • ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!
    • ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?
    • ಜೆಡಿಎಸ್ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ: ಕಾರ್ಯಕರ್ತರಿಗೆ ಕೆ.ಎಂ.ಕೃಷ್ಣನಾಯಕ ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿಪಕ್ಷಗಳಿಂದ ಸರ್ಕಾರದ ವಿರುದ್ಧ ದಿವಾಳಿ ಆರೋಪ ಶುದ್ಧ ಸುಳ್ಳು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್
    ಕುಣಿಗಲ್ March 24, 2026

    ವಿಪಕ್ಷಗಳಿಂದ ಸರ್ಕಾರದ ವಿರುದ್ಧ ದಿವಾಳಿ ಆರೋಪ ಶುದ್ಧ ಸುಳ್ಳು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್

    By adminMarch 24, 2026No Comments2 Mins Read

    ಕುಣಿಗಲ್:  ವಿಪಕ್ಷಗಳು ಸರ್ಕಾರ ದಿವಾಳಿಯಾಗಿದೆ ಎಂದು ಆರೋಪ ಮಾಡುತ್ತಿದ್ದು, ಈ ಆರೋಪಗಳು ಶುದ್ಧ ಸುಳ್ಳು ಎಂದು ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತಾಲೂಕಿನ ಅಮೃತೂರು ಹೋಬಳಿ ಹೊಸಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು,  ರಾಜ್ಯ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕುಣಿಗಲ್ ಕ್ಷೇತ್ರದ ವಿವಿಧ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿದೆ. ವಿಪಕ್ಷಗಳ ಸರ್ಕಾರದ ವಿರುದ್ಧದ ದಿವಾಳಿ ಆರೋಪ ಶುದ್ಧ ಸುಳ್ಳು ಎಂದರು.


    Provided by
    Provided by

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಆ ಮೂಲಕ ಮನೆ ಒಡತಿಯ ಖಾತೆಗೆ ಎರಡು ಸಾವಿರ, ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವ ನಿಧಿ ಜಾರಿಗೆ ತಂದು ಇದಕ್ಕಾಗಿ ಪ್ರತಿ ವರ್ಷ 56 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಇದರಿಂದ ರೈತರು, ದೀನ ದಲಿತರು, ಮಹಿಳೆಯರು ಮತ್ತು ಬಡ ವರ್ಗದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.

    ರಾಜ್ಯ ಸರ್ಕಾರ ನನ್ನ ಕ್ಷೇತ್ರದ ನೀರಾವರಿ, ರಸ್ತೆ, ಸೇತುವೆ, ವಿವಿಧ ಇಲಾಖೆಯ ಸರ್ಕಾರಿ ಕಟ್ಟಡ, ಕುಡಿಯುವ ನೀರು ಸೇರಿ ಜನರ ಮೂಲಭೂತ ಸೌಲಭ್ಯಕ್ಕಾಗಿ ಈವರೆಗೂ ಸುಮಾರು 1,500 ಕೋಟಿ ರೂ.ಗಳು ಅನುದಾನ ನೀಡಿದೆ, ಇನ್ನೆಲ್ಲಿ ಸರ್ಕಾರ ದಿವಾಳಿಯಾಗಿದೆ? ಅವರ ಹತಾಶೆ ಮತ್ತು ಸುಳ್ಳು ಆರೋಪಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    15 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ: ಬಸವನ ಮತ್ತಿಕೆರೆ ರಸ್ತೆ 70 ಲಕ್ಷ, ಹೊಸಪುರ ಗೊಲ್ಲರಹಟ್ಟಿ ಸಿ.ಸಿ. ರಸ್ತೆ, ಚರಂಡಿ 50 ಲಕ್ಷ, ಕೊಡಗಿಹಳ್ಳಿ ಮಲ್ಲಾಪುರ ರಸ್ತೆ ಅಭಿವೃದ್ಧಿಗೆ 30 ಲಕ್ಷ, ಪಡುವಗೆರೆ ರಸ್ತೆ, ಚರಂಡಿ 1 ಕೋಟಿ, ಯಡವಾಣಿ ರಸ್ತೆ, ಚರಂಡಿಗೆ 4.50 ಕೋಟಿ, ಅರ್ಜುನಹಳ್ಳಿಯಿಂದ ಎಮ್ಮೆ ಕಾಲೋನಿ ರಸ್ತೆ 1 ಕೋಟಿ, ತೂಬು ದುರಸ್ತಿಗೆ 4.50 ಕೋಟಿ ಹಾಗೂ ಸರ್ಕಾರಿ ಆಸ್ಪತ್ರೆ ದುರಸ್ತಿಗೆ 2 ಕೋಟಿ ಸೇರಿದಂತೆ 15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

    ಈ ವೇಳೆ ಹೇಮಾವತಿ ವಿವಿ ಐ ಇ ರುದ್ರೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಅನಂತರಾಮು ಮತ್ತಿತರರು ಇದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ವಿಕಲಚೇತನ ಮಕ್ಕಳನ್ನು ಕೂಡಿ ಹಾಕಿದರೆ ಕಠಿಣ ಶಿಕ್ಷೆ: ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ

    March 11, 2026

    ಕುಣಿಗಲ್: ಒಂಟಿ ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

    March 11, 2026

    ಕುಣಿಗಲ್: ಮಾ.25ರಂದು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ

    March 5, 2026

    Leave A Reply Cancel Reply

    Our Picks

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಡವರ ಮನೆ ಬೆಳಗಲು ಶಾಲೆ ಉಳಿಸಿ, ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ! : ಲಕ್ಕಪ್ಪ

    March 24, 2026

    ತುಮಕೂರು: ಸ್ವಾತಂತ್ರ ಸಂಗ್ರಾಮನ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ 95ನೇ ಹುತಾತ್ಮ ದಿನದ ಅಂಗವಾಗಿ ಇಂದು ಎಐಡಿಎಸ್ಓ ತುಮಕೂರು…

    ಗುಬ್ಬಿ: ಆಟೊ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರ ಆಕ್ರೋಶ; ಬಂಕ್ ಮುಂದೆ ಪ್ರತಿಭಟನೆ

    March 24, 2026

    ವಿಪಕ್ಷಗಳಿಂದ ಸರ್ಕಾರದ ವಿರುದ್ಧ ದಿವಾಳಿ ಆರೋಪ ಶುದ್ಧ ಸುಳ್ಳು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್

    March 24, 2026

    ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

    March 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.