nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾಲ್ಕು ಹೆಣ್ಣುಮಕ್ಕಳ ತಾಯಿಗೆ ಸ್ವಯಂ ಉದ್ಯೋಗ: ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಕಾರ್ಯಕ್ಕೆ ಇಕ್ಬಾಲ್ ಅಹಮದ್ ಸಾಥ್

    March 24, 2026

    ಬಡವರ ಮನೆ ಬೆಳಗಲು ಶಾಲೆ ಉಳಿಸಿ, ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ! : ಲಕ್ಕಪ್ಪ

    March 24, 2026

    ಗುಬ್ಬಿ: ಆಟೊ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರ ಆಕ್ರೋಶ; ಬಂಕ್ ಮುಂದೆ ಪ್ರತಿಭಟನೆ

    March 24, 2026
    Facebook Twitter Instagram
    ಟ್ರೆಂಡಿಂಗ್
    • ನಾಲ್ಕು ಹೆಣ್ಣುಮಕ್ಕಳ ತಾಯಿಗೆ ಸ್ವಯಂ ಉದ್ಯೋಗ: ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಕಾರ್ಯಕ್ಕೆ ಇಕ್ಬಾಲ್ ಅಹಮದ್ ಸಾಥ್
    • ಬಡವರ ಮನೆ ಬೆಳಗಲು ಶಾಲೆ ಉಳಿಸಿ, ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ! : ಲಕ್ಕಪ್ಪ
    • ಗುಬ್ಬಿ: ಆಟೊ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರ ಆಕ್ರೋಶ; ಬಂಕ್ ಮುಂದೆ ಪ್ರತಿಭಟನೆ
    • ವಿಪಕ್ಷಗಳಿಂದ ಸರ್ಕಾರದ ವಿರುದ್ಧ ದಿವಾಳಿ ಆರೋಪ ಶುದ್ಧ ಸುಳ್ಳು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್
    • ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
    • ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!
    • ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!
    • ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಾಲ್ಕು ಹೆಣ್ಣುಮಕ್ಕಳ ತಾಯಿಗೆ ಸ್ವಯಂ ಉದ್ಯೋಗ: ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಕಾರ್ಯಕ್ಕೆ ಇಕ್ಬಾಲ್ ಅಹಮದ್ ಸಾಥ್
    ತುಮಕೂರು March 24, 2026

    ನಾಲ್ಕು ಹೆಣ್ಣುಮಕ್ಕಳ ತಾಯಿಗೆ ಸ್ವಯಂ ಉದ್ಯೋಗ: ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಕಾರ್ಯಕ್ಕೆ ಇಕ್ಬಾಲ್ ಅಹಮದ್ ಸಾಥ್

    By adminMarch 24, 2026No Comments2 Mins Read
    iqbal ahmed

    ತುಮಕೂರು: ನಗರದ ಮರಳೂರು ದಿಣ್ಣೆ ಮೂರನೇ ಕ್ರಾಸ್‌ನಲ್ಲಿ ವಾಸಿಸುತ್ತಿರುವ ದಿವಂಗತ ಅಬ್ದುಲ್ ಬಾಬಾ ಅವರ ಕುಟುಂಬಕ್ಕೆ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಹಾಗೂ ಕಾಂಗ್ರೆಸ್ ಮುಖಂಡ ಮತ್ತು ಸಮಾಜ ಸೇವಕ ಇಕ್ಬಾಲ್ ಅಹಮದ್ ಅವರ ಸಹಯೋಗದಲ್ಲಿ ದಿನಸಿ ಪೆಟ್ಟಿಗೆ ಅಂಗಡಿಯನ್ನು ವಿತರಿಸಲಾಯಿತು.

    ನಾಲ್ಕು ಹೆಣ್ಣುಮಕ್ಕಳನ್ನು ಪೋಷಿಸುತ್ತಿರುವ ವಿಧವೆ ತಾಯಿಗೆ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಈ ಸಹಾಯ ಮಾಡಲಾಗಿದೆ.


    Provided by
    Provided by

    ಕಾರ್ಯಕ್ರಮದಲ್ಲಿ ಇಕ್ಬಾಲ್ ಅಹಮದ್ ಅವರು ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಮುಖ್ಯಸ್ಥರಾದ ರಹಮತ್ ಅಲಿ, ಮೊಯಿನುದ್ದೀನ್ ರಹಮಾನ್ ಹಾಗೂ ಪತ್ರಕರ್ತ ಸೈಯದ್ ಯೂಸುಫ್ ಉಲ್ಲಾ ಅವರೊಂದಿಗೆ ಅಂಗಡಿಯನ್ನು ಉದ್ಘಾಟಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಇಕ್ಬಾಲ್ ಅಹಮದ್ ಅವರು, ಕೊರೋನಾ ಸಮಯದಲ್ಲಿ ನಿರ್ಗತಿಕರಿಗೆ ರೇಷನ್ ಕಿಟ್ ವಿತರಿಸುವ ಕಾರ್ಯದಲ್ಲಿ ದಿವಂಗತ ಅಬ್ದುಲ್ ಬಾಬಾ ಅವರು ನಮ್ಮೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

    ರಂಜಾನ್ ತಿಂಗಳಲ್ಲಿ ಅನಾರೋಗ್ಯದಿಂದ ಅವರು ನಿಧನರಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು.

    ಇದೇ ವೇಳೆ ಜಕಾತ್ ಮಹತ್ವದ ಬಗ್ಗೆ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಐದು ಸ್ತಂಭಗಳಿದ್ದು, ಅವುಗಳಲ್ಲಿ ನಾಲ್ಕನೇ ಸ್ತಂಭವಾದ ಜಕಾತ್ ಅತ್ಯಂತ ಪ್ರಮುಖವಾಗಿದೆ. ತಮ್ಮ ಆದಾಯದ ಶೇಕಡಾ 2.5 ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ನೀಡುವುದು ಜಕಾತ್‌ನ ಉದ್ದೇಶವಾಗಿದೆ ಎಂದು ಹೇಳಿದರು.

    ಮುಸ್ಲಿಂ ಸಮುದಾಯದ ಜನರಲ್ಲಿ ಜಕಾತ್ ನೀಡುವ ಬಗ್ಗೆ ಮನವಿ ಮಾಡಿದ ಅವರು, “ಜಕಾತ್ ಅನ್ನು ಕೇವಲ ಒಂದು ದಿನದ ಹಸಿವು ನೀಗಿಸಲು ನೀಡುವುದಕ್ಕಿಂತ, ಒಂದು ಕುಟುಂಬದೊಂದಿಗೆ ನಿಂತು ಅವರ ಜೀವನವನ್ನು ಶಾಶ್ವತವಾಗಿ ಕಟ್ಟಿಕೊಳ್ಳಲು ಸಹಾಯ ಮಾಡುವುದು ಹೆಚ್ಚು ಮಹತ್ವದ್ದು. ಚೂರುಚೂರುವಾಗಿ ಹಂಚುವುದಕ್ಕಿಂತ ಒಬ್ಬರ ಬದುಕನ್ನು ರೂಪಿಸುವ ದಿಕ್ಕಿನಲ್ಲಿ ಸಹಕಾರ ನೀಡಬೇಕು” ಎಂದು ಹೇಳಿದರು.

    ಅಬ್ದುಲ್ ಬಾಬಾ ಅವರ ಕುಟುಂಬದಲ್ಲಿ ನಾಲ್ಕು ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ನಡೆಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಉತ್ತಮ ಕಾರ್ಯ ನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಫೌಂಡೇಶನ್ ಸೇವಾಕಾರ್ಯಗಳಲ್ಲಿ ನಾನು ಕೂಡ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

    ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ವತಿಯಿಂದ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಫೌಂಡೇಶನ್ ಮತ್ತು ಇಕ್ಬಾಲ್ ಅಹಮದ್ ಅವರ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಸ್ಥಳೀಯರಾದ ಮಖ್ದೂಮ್ ಅಲಿ, ಖತುನ್ ಬಿ., ಮುಝಮ್ಮಿಲ್ ಖಾನ್, ರೋಶನ್, ಗೌಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬಡವರ ಮನೆ ಬೆಳಗಲು ಶಾಲೆ ಉಳಿಸಿ, ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ! : ಲಕ್ಕಪ್ಪ

    March 24, 2026

    ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

    March 23, 2026

    ಸಚಿವ ಶಿವರಾಜ್ ತಂಗಡಗಿಗೆ ದಿಢೀರ್ ಎದೆನೋವು: ತುಮಕೂರಿನ ಆಸ್ಪತ್ರೆಗೆ ದಾಖಲು

    March 23, 2026

    Leave A Reply Cancel Reply

    Our Picks

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ನಾಲ್ಕು ಹೆಣ್ಣುಮಕ್ಕಳ ತಾಯಿಗೆ ಸ್ವಯಂ ಉದ್ಯೋಗ: ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಕಾರ್ಯಕ್ಕೆ ಇಕ್ಬಾಲ್ ಅಹಮದ್ ಸಾಥ್

    March 24, 2026

    ತುಮಕೂರು: ನಗರದ ಮರಳೂರು ದಿಣ್ಣೆ ಮೂರನೇ ಕ್ರಾಸ್‌ನಲ್ಲಿ ವಾಸಿಸುತ್ತಿರುವ ದಿವಂಗತ ಅಬ್ದುಲ್ ಬಾಬಾ ಅವರ ಕುಟುಂಬಕ್ಕೆ ರೆಸ್ಪಾನ್ಸಿವ್ ಕೇರ್ ಫೌಂಡೇಶನ್…

    ಬಡವರ ಮನೆ ಬೆಳಗಲು ಶಾಲೆ ಉಳಿಸಿ, ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ! : ಲಕ್ಕಪ್ಪ

    March 24, 2026

    ಗುಬ್ಬಿ: ಆಟೊ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರ ಆಕ್ರೋಶ; ಬಂಕ್ ಮುಂದೆ ಪ್ರತಿಭಟನೆ

    March 24, 2026

    ವಿಪಕ್ಷಗಳಿಂದ ಸರ್ಕಾರದ ವಿರುದ್ಧ ದಿವಾಳಿ ಆರೋಪ ಶುದ್ಧ ಸುಳ್ಳು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್

    March 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.