ಬೆಂಗಳೂರು: ರಾಜ್ಯದಲ್ಲಿ ಒಂದನೇ ತರಗತಿ ಸೇರ್ಪಡೆಗೆ ಇರುವ ಕನಿಷ್ಠ ವಯೋಮಿತಿಯ ನಿಯಮದಲ್ಲಿ ಸರ್ಕಾರ ಮಹತ್ವದ ಸಡಿಲಿಕೆ ಮಾಡಿದೆ. ಈ ಕುರಿತು ಶಿಕ್ಷಣ ಸಚಿವರು ಸದನದಲ್ಲಿ ಅಧಿಕೃತ ಮಾಹಿತಿ ನೀಡಿದ್ದು, ಪೋಷಕರ ಆತಂಕಕ್ಕೆ ತೆರೆ ಎಳೆದಿದ್ದಾರೆ.
ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ 60 ದಿನಗಳ ವಯೋಮಿತಿ ಕೊರತೆಯಿದ್ದರೂ ಅಡ್ಮಿಷನ್ ಪಡೆಯಲು ಅವಕಾಶ ನೀಡಲಾಗಿದೆ. ಈ ಮೊದಲು ಕಟ್ಟುನಿಟ್ಟಾಗಿ 6 ವರ್ಷ ಪೂರೈಸಿರಬೇಕೆಂಬ ನಿಯಮವಿತ್ತು.
ಈ ಹೊಸ ನಿಯಮವು ಮುಂಬರುವ 2026–27ನೇ ಶೈಕ್ಷಣಿಕ ಸಾಲಿಗೂ ಅನ್ವಯಿಸಲಿದೆ. ದಾಖಲಾತಿ ಸಮಯದಲ್ಲಿ ತಾಂತ್ರಿಕ ತೊಂದರೆಯಾಗದಂತೆ ಸಾಫ್ಟ್‌ವೇರ್ ನಲ್ಲೂ (SATS) ಅಗತ್ಯ ಬದಲಾವಣೆಗಳನ್ನು ಮಾಡಲು ಇಲಾಖೆ ಸೂಚಿಸಿದೆ.
ಕೇವಲ ಒಂದನೇ ತರಗತಿ ಮಾತ್ರವಲ್ಲದೆ, ಎಲ್ ಕೆಜಿ ಮತ್ತು ಯುಕೆಜಿ ದಾಖಲಾತಿಗೂ ಈ ವಿನಾಯಿತಿ ಅನ್ವಯವಾಗಲಿದ್ದು, ಈ ಕುರಿತು ಶೀಘ್ರದಲ್ಲೇ ಹೊಸ ಕಾನೂನು ತರುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಪ್ರತಿ ವರ್ಷ ಪೋಷಕರು ಆತಂಕಕ್ಕೊಳಗಾಗುವುದನ್ನು ತಪ್ಪಿಸಲು, ಈ ವಯೋಮಿತಿ ಸಡಿಲಿಕೆಯನ್ನು ಪರ್ಮನೆಂಟ್ ಆಗಿ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ.
ಈ ನಿರ್ಧಾರದಿಂದಾಗಿ ಕೆಲವೇ ದಿನಗಳ ಅಂತರದಲ್ಲಿ ವಯೋಮಿತಿ ಕೊರತೆ ಎದುರಿಸುತ್ತಿದ್ದ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದ್ದು, ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


