ಕೊರಟಗೆರೆ: ನಮ್ಮ ದೇಶದ ಸಂವಿಧಾನಕ್ಕೆ ತನ್ನದೇ ಆದ ಮಹತ್ವವಿದೆ ಅದರ ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಸಂದೇಶ ಸ್ಪಷ್ಟವಾಗಿ ಕಾಣಿಸುತ್ತದೆ ನಮ್ಮ ಸಂವಿಧಾನದ ಮೂಲ ಬಸವಣ್ಣನವರು ಎಂದು ಗೃಹ ಸಚಿವ ಡಾ.ಜಿ.ಪರಮೇಶ‍್ವರ್ ತಿಳಿಸಿದರು.
ತಾಲ್ಲೂಕಿನ ಮಲ್ಲೇಶಪುರ ಗ್ರಾಮದ ಬಳಿಯ ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಬಸವೇಶ್ವರ ಸ್ವಾಮಿಯ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಸವಣ್ಣನವರು 18ನೇ ಶತಮಾನದಲ್ಲಿಯೇ ಜಾತ್ಯಾತೀತ ತತ್ವವನ್ನು ಸಾರಿದ ಮಹಾನ್ ಚಿಂತಕರು. “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಅವರ ಸಂದೇಶವು 21ನೇ ಶತಮಾನದಲ್ಲೂ ಮಾದರಿಯಾಗಿದ್ದು, ಸಮಾಜಕ್ಕೆ ದಿಕ್ಕು ತೋರಿಸುತ್ತಿತ್ತು ವಿಶ್ವದ ಮೊದಲ ಸಂಸತ್(ಅನುಭವ ಮಠಪ)ವನ್ನು ಸ್ಥಾಪಿಸಿದಂತೆ ಮಹಾನ್ ನಾಯಕರು, ಬ್ರಿಟಿಷ್ ಪಾರ್ಲಿಮೆಂಟನ್ನು ವಿಶ್ವದ ಪಾರ್ಲಿಮೆಂಟ್ ತಂದೆ ಎಂದು ಕರೆದರೆ ನಮ್ಮ ಸಂಮಿದಾನವನ್ನು ಇಡೀ ವಿಶ್ವಯದಲ್ಲಿಯೇ ಅಂಬೇಡ್ಕರ್ ಮತ್ತು ಬಸವಣ್ಣವನರ ಸಂಮಿಧಾನ ಶ್ರೇಷ್ಠವಾದದ್ದು ಎಂದು ಒಪ್ಪುವಂತಿದೆ ಎಂದರು.
ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂ ಸಂಪ್ರದಾಯದಲ್ಲಿ ದೇವಸ್ಥಾನಗಳಿಗೆ ಅಪಾರ ಮಹತ್ವವಿದೆ ಅದರಲ್ಲೂ ಶಿವನ ದೇವಾಲಯ ಮತ್ತು ನಂದಿ ದೇವಾಲಯ ವಿಶಿಷ್ಟ ಸ್ಥಾನ ಪಡೆದಿವೆ ಎಂದರು.
ಅಕ್ಷಯ ತೃತೀಯೆ ಎಂಬ ಪವಿತ್ರ ದಿನ. ನಂದಿ ಭೂಮಿಗೆ ಬಂದ ದಿನವೆಂಬ ನಂಬಿಕೆ ಇದೆ. ಇಂತಹ ಶುಭ ಸಂದರ್ಭದಲ್ಲಿ ಬಸವೇಶ್ವರ ದೇವಾಲಯ ಉದ್ಘಾಟನೆ ಆಗುತ್ತಿರುವುದು ವಿಶೇಷ. ಇಂದಿನ ಒತ್ತಡದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯಲು ದೇವಾಲಯಗಳು ಅನಿವಾರ್ಯ, ಆದುನಿಖತೆ ಎಷ್ಟೇ ಬೆಳೆದರೂ ಸಹ ಇಂದೂ ಸಹ ನಮ್ಮ ಗೃಹ ಪ್ರವೇಶದ ದಿನದಂದು ಮೊದಲ ಪೂಜೆಯನ್ನು ಗೋವಿಗೆ ಸಲ್ಲಿಸಿ ಗೋವಿನ ಪ್ರವೇಶಕ್ಕೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ್, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವಥನಾರಾಯಣ್, ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕರ್, ಪ.ಪಂ ಮಾಜಿ ಅಧ್ಯಕ್ಷ ಎ.ಡಿ ಬಲರಾಮಯ್ಯ, ಪ.ಪಂ ಸದಸ್ಯ ಕೆ.ಆರ್ ಓಬಳರಾಜು, ಬುಕ್ಕಪಟ್ಟಣ ಗ್ರಾ.ಪಂ ಮಾಜಿ ಅಧ್ಯಕ್ಷೆ ಲಕ್ಷ್ಮಿ, ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ಬಾಲಾಜಿ ದರ್ಶನ್ ಮುಖಂಡರಾದ ನಟರಾಜ್, ಚಡ್ಡಿ ಬಸವರಾಜು, ಕಾತ್ಯಾಯಿನಿ, ಹೆಚ್.ಕೆ ಮಹಾಲಿಂಗಪ್ಪ, ವಾಲೆ ಚಂದ್ರಯ್ಯ,ಕವಿತಾ, ಎಎಸ್ ಪಿ ಗೋಪಾಲ್, ಸಿಪಿಐ ಅನಿಲ್, ಪಿಎಸ್ ಐಗಳಾದ ತೀಥೇಶ್, ಅಭಿಷೇಕ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


