nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಾಜಿ ಶಾಸಕ ರಫೀಕ್ ಅಹಮದ್ ಅವರ ತಾಯಿ ನಿಧನ: ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ ಸಚಿವ ಜಿ.ಪರಮೇಶ್ವರ್

    April 25, 2026

    ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತ: ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅಭಿಮತ

    April 25, 2026

    ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಹಬ್ಬ: ಅಂತರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಡಲು ಸಜ್ಜಾದ ಕಲ್ಪತರು ನಾಡು

    April 25, 2026
    Facebook Twitter Instagram
    ಟ್ರೆಂಡಿಂಗ್
    • ಮಾಜಿ ಶಾಸಕ ರಫೀಕ್ ಅಹಮದ್ ಅವರ ತಾಯಿ ನಿಧನ: ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ ಸಚಿವ ಜಿ.ಪರಮೇಶ್ವರ್
    • ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತ: ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅಭಿಮತ
    • ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಹಬ್ಬ: ಅಂತರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಡಲು ಸಜ್ಜಾದ ಕಲ್ಪತರು ನಾಡು
    • ತುಮಕೂರಿನಲ್ಲಿ ಬೈಕ್ ಕಳ್ಳರ ಬಂಧನ; 10 ದ್ವಿಚಕ್ರ ವಾಹನಗಳ ಜಪ್ತಿ
    • ಮೇ 9ರಂದು ಚಿತ್ರದುರ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ‘ಅಭಿಮಾನೋತ್ಸವ’
    • ಮೈಸೂರು: ಕುಡಿಯಲು ಹಣ ನೀಡದಿದ್ದಕ್ಕೆ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಾಯಿ!
    • ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
    • ಕನ್ನಡ ನಾಡು–ನುಡಿಗೆ ಡಾ.ರಾಜ್ ಕುಮಾರ್ ನೀಡಿದ ಕೊಡುಗೆ ಅಪಾರ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತ: ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅಭಿಮತ
    ರಾಜ್ಯ ಸುದ್ದಿ April 25, 2026

    ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತ: ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅಭಿಮತ

    By adminApril 25, 2026No Comments2 Mins Read
    ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ, ಡಾ.ಮನಮೋಹನ್ ಸಿಂಗ್ ನಗರ ವಿವಿಯ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಅವರ 135ನೇ ಜಯಂತಿ ಮತ್ತು ಮನ ಮನೆಗೆ ಸಂವಿಧಾನ ಎಂಬ ವಿಶೇಷ ರಾಷ್ಟ್ರೀಯ ವಿಚಾರ ಸಂಕಿರಣವನ್ನು  ಚಾಮರಾಜನಗರ ವಿವಿ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್, ಕರ್ನಾಟಕ ನ್ಯೂಸ್ ಬೀಟ್ ನ ಸಂಪಾದಕ ನಾಗರಾಜ್ ಅರೆಹೊಳೆ,ಡಾ. ಎಚ್. ಕೃಷ್ಣರಾಮ್, ಡಾ. ಗೋವಿಂದಯ್ಯ, ಪ್ರಾಧ್ಯಾಪಕ ಪ್ರೊ. ಬಿ.ಎಲ್. ಮುರಳೀಧರ್, ಡಾ.ಎಂ.ನಾಗೇಶ್, ಡಾ. ಸತ್ಯಮೂರ್ತಿ, ಎಸ್.ಕೆಂಚಯ್ಯ, ಡಾ. ಅರ್ಜುನ ಗೋಪಾಲಯ್ಯ ಮತ್ತಿತರ ಗಣ್ಯರು ಉದ್ಘಾಟಿಸಿದರು.

    ಬೆಂಗಳೂರು: ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ, ಡಾ.ಮನಮೋಹನ್ ಸಿಂಗ್ ನಗರ ವಿವಿಯ ಆಶ್ರಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಜಯಂತಿ ಮತ್ತು ಮನ ಮನೆಗೆ ಸಂವಿಧಾನ ಎಂಬ ವಿಶೇಷ ರಾಷ್ಟ್ರೀಯ ವಿಚಾರ ಸಂಕಿರಣವನ್ನು ​ಉದ್ಘಾಟಿಸಿ ಮಾತನಾಡಿದ ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅವರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಸಲಹೆ ನೀಡಿದರು.

    ನಂತರದಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದ ಹರಿಕಾರ ಬಾಬಾಸಾಹೇಬರು, ಎಲ್ಲಾ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಇದೆ. ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತವಾಗಿದ್ದು, ಹಾಗೆ ವಿವಾಹ ಕಾಯಿದೆಗಳಲ್ಲಿ ಸಹ ಇವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡರೆ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ನೀಡಿದಂತೆ ಎಂದು ತಿಳಿಸಿದರು.


    Provided by
    Provided by

    ನಂತರದಲ್ಲಿ ಬೆಂಗಳೂರು ನಗರ ವಿವಿಯ ಕುಲಪತಿಯಾದ ಪ್ರೊ. ಬಿ. ರಮೇಶ್ ಅವರು ಮಾತನಾಡಿ, ‘ಅಂಬೇಡ್ಕರ್ ಅವರು  ಮಹಿಳಾ ಶಿಕ್ಷಣಕ್ಕೆ ನೀಡಿದ ಆದ್ಯತೆ ರಾಷ್ಟ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣವಾಗಿದೆ. ಪ್ರತಿಯೊಬ್ಬರೂ  ಕೂಡ ಭಾರತೀಯರು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಇಂತಹ ವಿಚಾರ ಸಂಕಿರಣಗಳು ಆಶಯ ಈಡೇರುವುದು ಎಂಬ ಅಶಯ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಬೆಂವಿವಿಯ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ.ಎಲ್. ಮುರಳೀಧರ್ ಅವರು ಇದೇ ವೇಳೆಯಲ್ಲಿ ಮಾತನಾಡಿದರು. ಪ್ರಾಸ್ತಾವಿಕ ನುಡಿಯನ್ನು ಡಾ. ಅರ್ಜುನ್ ಗೋಪಾಲಯ್ಯ, ಡಾ.ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.

    ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿವಿಯ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಎಲ್. ಮುರಳೀಧರ್, ಕರ್ನಾಟಕ ನ್ಯೂಸ್ ಬೀಟ್ ನ ಸಂಪಾದಕರು ಹಾಗೂ ಮುಖ್ಯಸ್ಥ ನಾಗರಾಜ್ ಅರೆಹೊಳೆ, ಸಿಂಡಿಕೇಟ್ ಸದಸ್ಯ ಡಾ. ಎಚ್. ಕೃಷ್ಣರಾಮ್, ಸಮತಾ ಸೈನಿಕ ದಳದ ಕಾರ್ಯಧ್ಯಕ್ಷ ಡಾ. ಗೋವಿಂದಯ್ಯ ಜಿ,ವನಿವೃತ್ತ ಗ್ರಂಥಪಾಲಕ ಶ್ರೀ ನರೇಂದ್ರ,  ದಲಿತ ಚಳುವಳಿ ನಾಯಕ ಡಾ.ಎಂ.ನಾಗೇಶ್, ದಲಿತ ಟೈಗರ್ಸ್ ಅರುಣ್, ಮಹಿಳಾ ಅಧ್ಯಕ್ಷರು ಕಮಲಮ್ಮ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರು ಪ್ರೊ.ಅಶೋಕ್, ಸಿಂಡಿಕೇಟ್ ಸದಸ್ಯ ಚಲಪತಿ, ಪ್ರಾಧ್ಯಾಪಕ  ಹಾಗೂ ಸಾಹಿತಿ .ಸತ್ಯಮೂರ್ತಿ, ಎಸ್ ಕೆಂಚಯ್ಯ, , ನವೀನ್, ಮುನಿರಾಜು, ಯಂಕೋಬ ಜೂರಟಗಿ, ಬೆಂಗಳೂರು ವಿವಿ ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಸರ್ವ ಸದಸ್ಯರು ಮತ್ತಿತರರು ಈ ವಿಚಾರ ಸಂಕಿರಣದಲ್ಲಿ   ಮತ್ತಿತರರು ಉಪಸ್ಥಿತರಿದ್ದರು.

    ದೇಶದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸುವುದು ಇಂತಹ ವಿಚಾರ ಸಂಕಿರಣಗಳ ಕಾರ್ಯಕ್ರಮದ ಮುಖ್ಯವಾಗಬೇಕು.

    – ಪ್ರೊ. ಬಿ. ರಮೇಶ್, ಕುಲಪತಿಗಳು, ಡಾ. ಮನಮೋಹನ್ ಸಿಂಗ್ ನಗರ ವಿಶ್ವವಿದ್ಯಾಲಯ, ಬೆಂಗಳೂರು.

     

    ಸಹಸ್ರಾರು ವರ್ಷಗಳಿಂದ ಕೇವಲ ನಾಲ್ಕು ಗೋಡೆಯೊಳಗೆ ಸೀಮಿತವಾಗಿದ್ದ ಮಹಿಳೆಗೆ ಇಂದು ಮತದಾನ, ಶಿಕ್ಷಣ, ಆಸ್ತಿ ಎಲ್ಲ ರೀತಿಯ ಹಕ್ಕು, ಮಹಿಳೆಯರಿಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಇರುವುದಕ್ಕೆ ಪ್ರಮುಖ ಕಾರಣವೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ.

    – ಪ್ರೊ. ಬಿ.ಎಲ್. ಗಂಗಾಧರರ್, ಕುಲಪತಿಗಳು, ಚಾಮರಾಜನಗರ ವಿವಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮೇ 9ರಂದು ಚಿತ್ರದುರ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ‘ಅಭಿಮಾನೋತ್ಸವ’

    April 24, 2026

    ಮೈಸೂರು: ಕುಡಿಯಲು ಹಣ ನೀಡದಿದ್ದಕ್ಕೆ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಾಯಿ!

    April 24, 2026

    ಕನ್ನಡ ನಾಡು–ನುಡಿಗೆ ಡಾ.ರಾಜ್ ಕುಮಾರ್ ನೀಡಿದ ಕೊಡುಗೆ ಅಪಾರ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

    April 24, 2026

    Leave A Reply Cancel Reply

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಾಜಿ ಶಾಸಕ ರಫೀಕ್ ಅಹಮದ್ ಅವರ ತಾಯಿ ನಿಧನ: ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ ಸಚಿವ ಜಿ.ಪರಮೇಶ್ವರ್

    April 25, 2026

    ತುಮಕೂರು:  ತುಮಕೂರು ನಗರದ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ಅವರ ತಾಯಿ ಫಾತಿಮಾ ಬೇಗಂ ಅವರು ಇಂದು ದೈವಾಧೀನರಾಗಿದ್ದಾರೆ. ಅವರ…

    ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತ: ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅಭಿಮತ

    April 25, 2026

    ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಹಬ್ಬ: ಅಂತರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಡಲು ಸಜ್ಜಾದ ಕಲ್ಪತರು ನಾಡು

    April 25, 2026

    ತುಮಕೂರಿನಲ್ಲಿ ಬೈಕ್ ಕಳ್ಳರ ಬಂಧನ; 10 ದ್ವಿಚಕ್ರ ವಾಹನಗಳ ಜಪ್ತಿ

    April 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.