ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಎಚ್. ಭೈರಾಪುರ ಗ್ರಾಮದ ಬಳಿ, ತಿಪಟೂರು-ಹುಳಿಯಾರು ಸಂಪರ್ಕಿಸುವ ರಸ್ತೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ಒಂದುವರೆ ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ. ಷಡಕ್ಷರಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಗ್ರಾಮದ ರಸ್ತೆಯಲ್ಲಿರುವ ಅತಿ ಕಿರಿದಾದ ಸೇತುವೆಯಿಂದ ಮಳೆ ಬಂದರೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ಕಿಲೋಮೀಟರ್ ಗಟ್ಟಲೆ ವಾಹನಗಳು ನೀರಿನಲ್ಲಿ ಚಲಿಸಲಾಗದೆ ಮುಳುಗಡೆಯಾಗಿ ನಿಲ್ಲುತ್ತಿದ್ದವು. ಇದನ್ನು ಗಮನಿಸಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಸಾರ್ವಜನಿಕರು, ರೈತರು, ವಾಹನ ಸವಾರರಿಗೆ ತೊಂದರೆ ಆಗದಂತೆ ಮತ್ತು ಹಳ್ಳದಿಂದ ಬರುವ ನೀರು ಹಾಲ್ಕುರಿಕೆ ಕೆರೆಗೆ ಸರಾಗವಾಗಿ ಹೋಗಲೆಂದು ಬೃಹತ್ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಈ ಗ್ರಾಮದಲ್ಲಿ ಈಗಾಗಲೇ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದ್ದು, ಮೂರು ಬೀದಿಗಳಿಗೆ ಸಿಸಿ ರಸ್ತೆ ಕಾಮಗಾರಿಯೂ ನಡೆದಿರುತ್ತದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಲೋಕೇಶ್, ಹಾಲ್ಕುರಿಕೆ ಗ್ರಾಪಂ ಮಾಜಿ ಅಧ್ಯಕ್ಷ ಸೋಮಶೇಖರ್, ಚಿಕ್ಕಮುಲ್ಲಯ್ಯ, ಸದಸ್ಯರಾದ ಬಿ.ಟಿ. ಬಸವರಾಜು, ಕುಮಾರಸ್ವಾಮಿ, ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್ ಮತ್ತು ಗುತ್ತಿಗೆದಾರ ಬಿಎನ್ಆರ್ ಸೇರಿದಂತೆ ಇಲಾಖೆ ಮತ್ತು ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


