nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ

    July 28, 2026

    ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ

    July 28, 2026

    ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ

    July 28, 2026
    Facebook Twitter Instagram
    ಟ್ರೆಂಡಿಂಗ್
    • ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
    • ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
    • ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
    • ಹಾದನೂರು ಸರ್ಕಾರಿ ಶಾಲೆಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಆಸರೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ
    • ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
    • ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
    • ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
    • ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿವನ ವೇಷ ಮತ್ತು ರಾಜನ ಅಹಂಕಾರ: ಒಂದು ಸುಂದರ ನೀತಿ ಕಥೆ
    ಲೇಖನ May 6, 2026

    ಶಿವನ ವೇಷ ಮತ್ತು ರಾಜನ ಅಹಂಕಾರ: ಒಂದು ಸುಂದರ ನೀತಿ ಕಥೆ

    By adminMay 6, 2026No Comments3 Mins Read
    kannada story

    ಈಶ್ವರನು ಒಮ್ಮೆ ಭೂಲೋಕದಲ್ಲಿ ಕಷ್ಟದಲ್ಲಿರುವ ತನ್ನ ಭಕ್ತರಿಗೆ ಒಳ್ಳೆಯದು ಮಾಡಲೆಂದು ನಿರ್ಧರಿಸಿ ಒಂದು ನಾಯಿಯ ವೇಷ ಹಾಕಿಕೊಂಡು ಮೊದಲು ಒಂದು ಗುರುಕುಲಕ್ಕೆ ಹೋದನು. ಅಲ್ಲಿ ಗುರುಗಳು ಒಬ್ಬ ಶಿಷ್ಯನನ್ನು ನಿಲ್ಲಿಸಿ ನಿನಗೆ ಈ ಜನ್ಮದಲ್ಲಿ ವಿದ್ಯೆ ತಲೆಗೆ ಹತ್ತುವುದಿಲ್ಲ, ಬರೀ ಈಶ್ವರ ಭಜನೆ ಮಾಡುವುದರಲ್ಲೇ ಕಾಲ ಕಳೆಯುತ್ತಿರುವೆ ಏನು, ನಿನಗೆ ಈಶ್ವರ ಬಂದು ವಿದ್ಯ ಕಲಿಸುವನೇ ಎನ್ನುತ್ತಿದ್ದಂತೆ ಅಲ್ಲಿಗೆ ಬಂದಿದ್ದ ನಾಯಿ ವೇಷದ ಶಿವನು ಓಡಿಬಂದು ಆ ಶಿಷ್ಯನಿಗೆ ಬಂದು ಕಚ್ಚಿತು ಮತ್ತು ಅಲ್ಲಿಂದ ಯಾರ ಕೈಗೂ ಸಿಕ್ಕದೆ ಓಡಿ ಹೋಯಿತು.

    ಎಲ್ಲರೂ ಗಾಬರಿಯಾಗುತ್ತಿದ್ದರೆ ಇತ್ತ ಶಿಷ್ಯನು ಇದ್ದಕ್ಕಿದ್ದಂತೆ ವೇದ ಉಪನಿಷತ್ತುಗಳನ್ನು ತಪ್ಪಿಲ್ಲದೆ ಜೋರಾಗಿ ಪಠಣ ಮಾಡಲು ಪ್ರಾರಂಭಿಸಿದನು. ಅವನಲ್ಲಿ ಆದ ಬದಲಾವಣೆಗೆ ಆ ನಾಯಿಯೇ ಕಾರಣವಿರಬಹುದು ಎಲ್ಲರೂ ಶಂಕಿಸಿದರು. ನಂತರ ನಾಯಿಯು ಒಬ್ಬ ಭಕ್ತ ಬಡವನ ಮನೆಗೆ ಹೋಯಿತು, ಅಲ್ಲಿ ಬಡವನು ಭಿಕ್ಷೆಯಲ್ಲಿ ಬಂದಿದ್ದ ಊಟವನ್ನು ಮನೆ ಮಂದಿ ಎಲ್ಲಾ ಹಂಚಿಕೊಂಡು ಇನ್ನೇನು ತಿನ್ನಬೇಕು ಅಷ್ಟರಲ್ಲಿ ಬಂದ ನಾಯಿಯನ್ನು ನೋಡಿ ಅಯ್ಯೋಪಾಪ ಹಸಿದಿರಬೇಕು ಎಂದು ಎಲ್ಲವನ್ನೂ ತಂದು ಆ ನಾಯಿಯ ಮುಂದೆ ಇಟ್ಟನು ತಕ್ಷಣವೇ ನಾಯಿಯು ಅವನನ್ನು ಕಚ್ಚಿ ಅಲ್ಲಿಂದ ಓಡಿ ಹೋಯಿತು ಎಲ್ಲರೂ ಮತ್ತೆ ಗಾಬರಿಯಾದರು, ಆದರೆ ನೋಡನೋಡುತ್ತಿದ್ದಂತೆ ಬಡವನ ಮನೆ ಮಹಲಾಯಿತು, ವಜ್ರ ವೈಡೂರ್ಯಗಳು ಬಂದವು. ಇದಕ್ಕೆ ಕಾರಣ ಆ ನಾಯಿ ಕಚ್ಚಿದ ಪರಿಣಾಮವಿರಬೇಕು ಎಂದು ಎಲ್ಲರೂ ಶಂಕಿಸಿದರು.

    ಮತ್ತೆ ಆ ನಾಯಿಯು ಆನೆಗಳಿಂದ ಬೆಳೆ ಹಾನಿಯಾಗಿದ್ದ ಈಶ್ವರ ಭಕ್ತನೊಬ್ಬ ಹೊಲದಲ್ಲಿ ರೋದಿಸುತ್ತಿದ್ದನು ಓಡಿ ಹೋಗಿ ಅವನನ್ನೂ ಕಚ್ಚಿತು ಇದ್ದಕ್ಕಿದ್ದಂತೆ ಹಾನಿಯಾಗಿದ್ದ ಬೆಳೆಗಳೆಲ್ಲಾ ಮತ್ತೆ ಎದ್ದು ನಿಂತವು ಇದಕ್ಕೆ ಕಾರಣ ಆ ನಾಯಿ ಕಚ್ಚಿದ್ದರಿಂದ ಎಂದು ಎಲ್ಲರೂ ಶಂಕಿಸಿದರು. ಈ ವಿಚಾರಗಳೆಲ್ಲಾ ರಾಜ ಭಟರ ಮೂಲಕ ಆ ಊರಿನ ರಾಜನಿಗೆ ಹೋಯಿತು ಮತ್ತು ರಾಜ ಭಟರು ರಾಜನಿಗೆ ಪ್ರಭು ಪಕ್ಕದ ಊರಿನ ರಾಜನಿಗೂ ಆ ನಾಯಿ ಕಚ್ಚಿತಂತೆ ಇದರಿಂದ ಆ ರಾಜನಿಗೆ ಮತ್ತಷ್ಟು ಗ್ರಾಮಗಳನ್ನು ಅವನು ಯುದ್ಧದಲ್ಲಿ ಗೆದ್ದು ಬಂದನಂತೆ ಎಂದು ವರದಿ ನೀಡಿದರು.

    ಇದನ್ನೆಲ್ಲಾ ಕೇಳಿದ ರಾಜನು ಹಾಗಾದರೆ ನಾನು ಆ ನಾಯಿಯನ್ನು ಹೇಗಾದರು ಮಾಡಿ ಹಿಡಿದು ಕಚ್ಚಿಸಿಕೊಳ್ಳಬೇಕು, ಆಗ ನಾನು ಈ ಊರನ್ನು ಮತ್ತಷ್ಟು ಯುದ್ಧಗಳನ್ನು ಮಾಡಿ ವಿಸ್ತರಿಸಬಹುದು ಎಂದು ಯೋಚಿಸಿ ರಾಜಭಟರಿಗೆ ಈ ಕೂಡಲೇ ಆ ನಾಯಿಯನ್ನು ಸೆರೆ ಹಿಡಿದು ತನ್ನಿ ಎಂದು ಆಜ್ಞಾಪಿಸಿದನು. ತಕ್ಷಣ ಹೊರಟ ಸೈನಿಕರು, ಕಷ್ಟಪಟ್ಟು ಹುಡುಕಿ ಹಿಡಿಯಲು ಹರ ಸಾಹಸ ಪಟ್ಟು ಕೊನೆಗೂ ಪಂಜರದಲ್ಲಿ ಬಂಧಿಸಿ ಅರಮನೆಗೆ ತಂದರು.

    ರಾಜನು ಅದನ್ನು ಬಂಧಮುಕ್ತ ಮಾಡಿ ತನ್ನನ್ನೂ ಕಚ್ಚುವಂತೆ ಹೇಳಿದನು, ಕೂಡಲೇ ಮೇಲೆರಗಿದ ನಾಯಿಯು ಸಿಕ್ಕ ಸಿಕ್ಕ ಹಾಗೆ ರಾಜನನ್ನು ಕಚ್ಚಿಹಾಕಿ ಬಿಟ್ಟಿತು ಮತ್ತು ಮಾಯವಾಯಿತು ಕೂಡಲೇ ರಾಜನಿಗೆ ಮೈಯಲ್ಲಾ ಉರಿ ಊತ ಉಂಟಾಗಿ ಸಹಿಸಲಾಗದ ನೋವಿನಿಂದ ಚೀರಾಡತೊಡಗಿದನು ಅದೇ ಸಮಯಕ್ಕೆ ಸರಿಯಾಗಿ ಪಕ್ಕದ ಊರಿನ ರಾಜನು ಆಕ್ರಮಣ ನಡೆಸಿ ಆ ಊರನ್ನೂ ಗೆದ್ದು ಬಿಟ್ಟನು ಮತ್ತು ಈ ರಾಜನನ್ನು ಕಾಡಿಗಟ್ಟಿದನು. ರೋಗಗ್ರಸ್ಥನಾದ ರಾಜನು ನಡೆಯಲಾಗದೇ ನಡೆಯುತ್ತಾ ಕಾಡಿನ ಒಂದು ಋಷಿಯ ಆಶ್ರಮಕ್ಕೆ ಬಂದು ಸೇರಿದನು, ಋಷಿಗಳು ಅವನನ್ನು ಗುರುತಿಸಿ ಸತ್ಕರಿಸಿದರು. ನಂತರ ರಾಜನು ನಡೆದುದೆಲ್ಲಾ ವಿವರಿಸಿ ತನಗೇಕೆ ಹೀಗಾಯಿತು ಎಂದು ಋಷಿಗಳನ್ನು ಕೇಳಿದಾಗ ಋಷಿಗಳು ಹೇಳಿದರು, ಮೊದಲಿಗೇ ನೀನು ರಾಜನಾದ ಕಾರಣ ಗರ್ವದಿಂದ ದೇವರನ್ನು ಮರೆತದ್ದು, ಮತ್ತು ದುರಾಸೆಪಟ್ಟು ನಾಯಿಯಿಂದ ಕಚ್ಚಿಸಿಕೊಂಡು ರಾಜ್ಯ ಗೆಲ್ಲಲು ಹೊರಟಿದ್ದು ಎಂದು ಹೇಳಿ ಅದು ಸಾಧಾರಣ ನಾಯಿಯಲ್ಲ ನಾಯಿಯ ವೇಷದ ಶಿವ ಎಂದಾಗ ರಾಜನಿಗೆ ತನ್ನ ತಪ್ಪು ಅರಿವಾಗಿ ಅಂದಿನಿಂದ ಈಶ್ವರನ ಧ್ಯಾನ ಮಾಡುತ್ತಾ ತಾನು ಕಳೆದುಕೊಂಡಿದ್ದ ಎಲ್ಲವನ್ನು ಮತ್ತೆ ನಿಧಾನವಾಗಿ ಗಳಿಸಿದ.

    venugopal
    ರಚನೆ: ವೇಣುಗೋಪಾಲ್

    ಸಂಪಾದಕರ ನುಡಿ:

    “ಶಿವನ ವೇಷ” ಎಂಬ ಈ ಕಥೆ ಮಾನವ ಜೀವನದ ಆಳವಾದ ಸತ್ಯವನ್ನು ಸುಂದರವಾಗಿ ಮನದಟ್ಟುಗೊಳಿಸುತ್ತದೆ. ದೇವರು ನಮ್ಮ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೋ ನಾವು ತಿಳಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕಥೆ ಸ್ಪಷ್ಟವಾಗಿ ಹೇಳುತ್ತದೆ. ಭಕ್ತಿ, ನಿಸ್ವಾರ್ಥತೆ ಮತ್ತು ವಿನಯ ಇರುವವರ ಮೇಲೆ ದೈವಕೃಪೆ ಹೇಗೆ ಅನಾಯಾಸವಾಗಿ ಬೀಳುತ್ತದೆ ಎಂಬುದನ್ನು ಬಡವನ, ಶಿಷ್ಯನ ಹಾಗೂ ರೈತನ ಘಟನೆಗಳ ಮೂಲಕ ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

    ಇನ್ನೊಂದೆಡೆ, ಗರ್ವ ಮತ್ತು ದುರಾಸೆ ಮನುಷ್ಯನ ಪತನಕ್ಕೆ ಕಾರಣವಾಗುತ್ತವೆ ಎಂಬುದನ್ನು ರಾಜನ ಪಾತ್ರದ ಮೂಲಕ ತಿಳಿಸಲಾಗಿದೆ. ದೇವರನ್ನು ಉಪಯೋಗಿಸಿಕೊಳ್ಳುವ ಮನೋಭಾವವು ಅಪಾಯಕಾರಿಯಾಗಿದೆ; ದೇವರನ್ನು ಭಜಿಸಬೇಕಾದರೆ ನಿಷ್ಠೆಯಿಂದ, ಸ್ವಾರ್ಥವಿಲ್ಲದೆ ಭಜಿಸಬೇಕು ಎಂಬುದು ಈ ಕಥೆಯ ಮುಖ್ಯ ಸಾರಾಂಶ.

    ಸರಳ ಭಾಷೆಯಲ್ಲಿ ಗಂಭೀರ ಅರ್ಥವನ್ನು ಒಳಗೊಂಡಿರುವ ಈ ಕಥೆ ಓದುಗರಿಗೆ ನೈತಿಕ ಮೌಲ್ಯಗಳನ್ನು ನೆನಪಿಸುತ್ತದೆ. ನಮ್ಮ ಬದುಕಿನಲ್ಲಿ ನಡೆಯುವ ಘಟನೆಗಳ ಹಿಂದೆ ದೈವ ಇಚ್ಛೆ ಇರಬಹುದು ಎಂಬ ನಂಬಿಕೆಯನ್ನು ಬಲಪಡಿಸುವ ಜೊತೆಗೆ, ಸದ್ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಮನದಟ್ಟು ಮಾಡುತ್ತದೆ.

    — ಸಂಪಾದಕರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ

    July 19, 2026

    ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ

    July 17, 2026

    ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!

    July 13, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ

    July 28, 2026

    ಲಿಂಗದಹಳ್ಳಿಯಲ್ಲಿ ಮಾದಕ ದ್ರವ್ಯ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮ ಪಾವಗಡ: ಪಿಯುಸಿ ಹಂತವು ವಿದ್ಯಾರ್ಥಿಗಳ ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ…

    ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ

    July 28, 2026

    ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ

    July 28, 2026

    ಹಾದನೂರು ಸರ್ಕಾರಿ ಶಾಲೆಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಆಸರೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ

    July 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.