ತುಮಕೂರು: ಡಾ. ಜಿ.ಎಸ್. ಸಿದ್ದಲಿಂಗಯ್ಯನವರ ಬದುಕು-ಬರಹ ವಿಚಾರ ಸಂಕಿರಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ ಸಮಾರಂಭವನ್ನು ಮೇ 12 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಸಿದ್ಧಗಂಗಾ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸೊಂಡಲಗೆರೆ ಮಲ್ಲಮ್ಮ ಶ್ರೀ ನಾರಸೀಗೌಡ ನೆನಪಿನ ಸಾಹಿತ್ಯ ದತ್ತಿಗಳಿಗೆ ಕೊರಟಗೆರೆ ತಾಲ್ಲೂಕಿನ ಯಲಚಗೆರೆ ಉಮೇಶ್ ತುಮಕೂರು ತಾಲ್ಲೂಕಿನ ಚಿಕ್ಕನಾರವಂಗಲ ರೇಖಾ ಹಿಮಾನಂದ್, ತಿಪಟೂರು ತಾಲ್ಲೂಕಿನ ಕೆ.ಬಿ. ಗೀತ ಆಯ್ಕೆಯಾಗಿದ್ದಾರೆ. ರತ್ನಮ್ಮ ಜಿ. ರಾಜನ್ ದತ್ತಿಗೆ ಎಲ್.ಎನ್. ಉಮಾಶಂಕರ್ ಆಯ್ಕೆಯಾಗಿದ್ದು ಪ್ರಶಸ್ತಿ ಪುರಸ್ಕೃತರಿಗೆ ಸಂಸ್ಕೃತಿ ಚಿಂತಕ, ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ವಹಿಸುತ್ತಾರೆ.
ಪ್ರೊ. ಎಸ್.ಜಿ. ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯನವರ ಬದುಕು–ಬರಹದ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು, ಜಿಎಸ್ ಎಸ್ ಸಿದ್ದಲಿಂಗಯ್ಯನವರ ಬದುಕು ಮತ್ತು ಆಡಳಿತದ ಬಗ್ಗೆ ಪ್ರೊ. ಆರ್. ಲಕ್ಷ್ಮೀನಾರಾಯಣ, ಸಿದ್ದಲಿಂಗಯ್ಯನವರ ಪರ್ಯಾಲೋಕನದ ಡಾ. ಎಂ.ಎಸ್. ಆಶಾದೇವಿ, ಪ್ರೊ. ಸಿದ್ದಲಿಂಗಯ್ಯನವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬಗ್ಗೆ ಡಾ. ಸಿ. ನಾಗಭೂಷಣ್ ವಿಚಾರ ಮಂಡಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಡಿ.ಎನ್. ಯೋಗೀಶ್ವರಪ್ಪ ಡಾ. ಟಿ.ಬಿ. ನಿಜಲಿಂಗಪ್ಪ, ಡಾ. ಹೆಚ್.ಎಂ. ದಕ್ಷಿಣಾಮೂರ್ತಿ ಹಾಗೂ ದತ್ತಿದಾನಿಗಳಾದ ಸೊಂಡಲಗೆರೆ ಲಕ್ಷ್ಮೀಪತಿ, ಜಿ. ರಾಜನ್ ಭಾಗವಹಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


