ಪಾವಗಡ: ಮೇ 20ರಂದು ತುಮಕೂರು ನಗರದಲ್ಲಿ ನಡೆಯಲಿರುವ ಸರ್ಕಾರದ ಮೂರನೇ ವರ್ಷದ ಸಾಧನ ಸಮಾವೇಶದ ಅಂಗವಾಗಿ ಪಾವಗಡ ತಾಲೂಕಿನಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ನಾಗಲಮಡಿಕೆ ಹೋಬಳಿಯ 1008 ಫಲಾನುಭವಿಗಳಿಗೆ ವಿವಿಧ ಪಿಂಚಣಿಗಳ ಮಂಜೂರಾತಿ ಪತ್ರ, ಪೌತಿ ಖಾತೆ ಆಂದೋಲನ, ಪೋಡಿ ಮುಕ್ತ ಆಂದೋಲನ ಹಾಗೂ ಕಂದಾಯ ಗ್ರಾಮಗಳಿಗೆ ಸಂಬಂಧಿಸಿದ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಮಹತ್ವವನ್ನು ಜನರಿಗೆ ತಿಳಿಸಲು ನಾಗಲಮಡಿಕೆ ಹೋಬಳಿಯ ಉಪ ತಹಶೀಲ್ದಾರ್ ಕೆ. ನಾರಾಯಣಸ್ವಾಮಿ ಅವರು ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ನಡೆದ ಮಹತ್ವದ ಬದಲಾವಣೆಗಳು ಮತ್ತು ಸರ್ಕಾರದ ಸಾಧನೆಗಳ ಕುರಿತು ಅವರು ಜನರಿಗೆ ಮಾಹಿತಿ ಹಂಚುತ್ತಿದ್ದಾರೆ.
ಹುಸೇನ್ ಪುರ, ತಪ್ಪಗಾನದೊಡ್ಡಿ, ಅಪ್ಪಾಜಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ಕಾರ್ಯ ನಡೆಯುತ್ತಿದೆ, ಮೇ 20ರಂದು ನಾಗಲಮಡಿಕೆ ಹೋಬಳಿಯಿಂದ ಸುಮಾರು 20 ಬಸ್ಸುಗಳಲ್ಲಿ 1500ಕ್ಕೂ ಹೆಚ್ಚು ಫಲಾನುಭವಿಗಳು ತುಮಕೂರಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


