ಸಿರಾ: ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಷ್ಟೇ ಅಲ್ಲದೆ ಅವು ಧರ್ಮ ಸಂಸ್ಥೃತಿಯ ಹೆಸರಿನಲ್ಲಿ ಜನರನ್ನು ಒಂದು ಗೂಡಿಸುವ ಮಹತ್ತದ ಶಕ್ತಿಯನ್ನು ಹೊಂದಿವೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಅವರು ಬುಕ್ಕಾಪಟ್ಟಣ ಹೋಬಳಿ ಕೆಂಚಪ್ಪನಹಳ್ಳಿ ವಡ್ಡರಹಟ್ಟಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಕಳಶ ಪ್ರತಿಷ್ಠಾಪನೆಯಲ್ಲಿ ಮಾತನಾಡಿದರು.
ಜನತೆಯನ್ನು ಏಕತೆಯತ್ತ ಒಂದುಗೂಡಿಸುವ ಹಾಗೂ ಎಲ್ಲರಲ್ಲಿಯೂ ಭ್ರಾತೃತ್ವ ಜಾಗೃತಗೊಳಿಸುವ, ನಾವೆಲ್ಲ ಒಂದೇ ಎಂಬ ಮನೋಭಾವನೆ ಉಂಟು ಮಾಡುವ ಏಕೈಕ ಸಾಧನವೆಂದರೆ ಅದು ದೇವಸ್ಥಾನಗಳು ಮಾತ್ರ. ದೇವಸ್ಥಾನಗಳಲ್ಲಿ ಭಜನೆ ಪೂಜೆ ಪುರಸ್ಕಾರ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆ ಮೂಲಕ ಎಲ್ಲರನ್ನು ಒಂದುಗೂಡಿಸುವ ಕೆಲಸವಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಕ್ತಿ ಶ್ರದ್ಧೆಗಳು ಕಡಿಮೆಯಾಗಿವೆ ಎಂದರು.
ಕೆಂಚಪ್ಪನಹಳ್ಳಿ ವಡ್ಡರಹಟ್ಟಿ ಗ್ರಾಮದ ಭಕ್ತ ಜನರು ಅಪಾರ ಭಕ್ತಿ ಹಾಗೂ ಸಹಕಾರದಿಂದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಕಳಶ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಿದ್ದು, ಆಂಜನೇಯಸ್ವಾಮಿ ದಯೆಯಿಂದ ನಾಡಿನ ಎಲ್ಲಾ ಜನ ಜೀವನ ಸುಖ ಶಾಂತಿ ಸಮೃದ್ಧಿಯಿಂದ ಕೂಡಿರಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಾಂತಕುಮಾರ್ ಬಿ.ಜೆ., ಹನುಮಂತರಾಜು, ಕಂಚಿಗಾನಹಳ್ಳಿ ನಟರಾಜು, ಪುಟ್ಟಯ್ಯ, ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


