ಸರಗೂರು: ಅರಣ್ಯನಾಶದಿಂದ ಪರಿಸರ ಮಾಲಿನ್ಯ ಉಂಟಾಗಿ ವಿದೇಶಗಳಲ್ಲಿ ಶುದ್ಧ ಆಮ್ಲಜನಕವನ್ನು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮಲ್ಲೂ ಸಹ ಪ್ರಕೃತಿದತ್ತವಾಗಿ ಸಿಗುವುದೆಲ್ಲವನ್ನು ಕೊಂಡುಕೊಳ್ಳಬಹುದಾದ ಪರಿಸ್ಥಿತಿ ಎದುರಾಗುವ ಕಾಲ ದೂರವಿಲ್ಲ ಎಂದು ಸರಗೂರು ವಲಯ ಅರಣ್ಯಾಧಿಕಾರಿ ಡಾ.ಲೋಕೇಶ್ ಎಚ್.ಎಲ್. ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆ ಹಾಗೂ ಕಾಲೇಜು ರಾಜಮ್ಮ ಲಿಂಗಯ್ಯ ಫೌಂಡೇಷನ್ ಮತ್ತು ಶಾಲೆಯ ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣ ಮಿತಿ ಮೀರಿದ ಜನಸಂಖ್ಯೆ. ಅತಿಯಾದ ಜನಸಂಖ್ಯೆಯಿಂದಾಗಿ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಪಾರ ಪರಿಸರವನ್ನು ನಾಶ ಮಾಡಲಾಗುತ್ತಿದೆ. ಈಗಾಗಲೇ ನೀರು, ಆಹಾರವನ್ನು ಮಾರಿಕೊಂಡಿದ್ದೆವೆ. ಪರಿಸರ ನಾಶದಿಂದ ಉತ್ತಮವಾದ ಆಮ್ಲಜನಕ ಸಿಗುತ್ತಿಲ್ಲ. ಇದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಿಗೆ ಭೂಮಿಯನ್ನು ಉಳಿಸಿ ಕೊಳ್ಳಬೇಕಾದರೆ ಸಾಧ್ಯವಾದಷ್ಟು ಗಿಡಗಳನ್ನು ನೆಡಬೇಕು. ನಿಮ್ಮ ಎಲ್ಲಾ ಆಚರಣೆಗಳಿಗೆ ಉಡುಗೊರೆಯಾಗಿ ಗಿಡಗಳನ್ನು ಕೊಡಿ ಮತ್ತು ನೆಧಿಡಧಿಬೇಧಿಕು ಎಂದು ಸಲಹೆ ನೀಡಿದರು.
ಸಂಪಾದಕರು ವಿಶೇಷ ಯೋಜನೆಗಳ ಮತ್ತು ಏಷ್ಯಾ ನೆಟ್ ಸುವರ್ಣ ನ್ಯೂಸ್ ಬೆಂಗಳೂರು ವಿನೋದ್ ಕುಮಾರ್ ಬಿ. ನಾಯಕ್ ರವರು ಮಾತನಾಡಿ, ಇಂದು ಸರಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಕಟ್ಟಡಗಳನ್ನು ನಿರ್ಮಾಣ ಮಾಡಿ ಅಭಿವೃದ್ಧಿ ಎಂದು ಹೇಳಲಾಗುತ್ತದೆ. ಪರಿಸರವನ್ನು ಉಳಿಸಿಕೊಂಡು ಅದರ ಜತೆಗ ಹೊಂದಾಣಿಕೆ ಮಾಡಿಕೊಂಡು ಬದುಕಬೇಕು ಎಂದರು.
ಪರಿಸರದ ಸಮತೋಲನ ಕಾಪಾಡಲು ಹಾಗೂ ಮುಂದಿನ ಪೀಳಿಗೆಗೆ ಹಸಿರು ವಾತಾವರಣ ನಿರ್ಮಿಸಲು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ವಹಿಸಬೇಕು ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಖಂಡಿಸಿ ಪರಸರವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಧರ್ಮದರ್ಶಿಗಳು ಪ್ರಭಾಕರ್, ಪ್ರಗತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪಳಿನಿಸ್ವಾಮಿ, ಕಾಲೇಜು ಪ್ರಾಂಶುಪಾಲ ಪ್ರಕಾಶ್, ಕಾಲೇಜು ಉಪನ್ಯಾಸಕರು ಗೋವಿಂದರಾಜು ಎಸ್, ಮಹೇಂದ್ರ ಜೆ ಎಂ, ನಾಗರತ್ನ, ಸುನೀಲ್, ನಂದನ್ ಕುಮಾರ್, ಶಂಕರ್ ಪ್ರಮೋದ್, ವನಿತಾ ಮಣಿ, ಪಲ್ಲವಿ, ಮೀನಾ, ಪ್ರದೀಪ್ ಕುಮಾರ್, ಇನ್ನೂ ಮುಖಂಡರು ಸೇರಿದಂತೆ ಶಿಕ್ಷಕರು ಹಾಜರಿದ್ದರು.
ಈ ಸಂದರ್ಭದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕಂಠಪಾಠ ಸ್ಪರ್ಧೆ ಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


