nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ
    • ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ
    • ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ
    • ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!
    • ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ
    • ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ
    • ಪಾವಗಡ: ಸಕಾಲಕ್ಕೆ ಸಿಗದ ಚಿಕಿತ್ಸೆ; ಹಾವು ಕಚ್ಚಿ ಬಿ.ಫಾರ್ಮಸಿ ವಿದ್ಯಾರ್ಥಿ ದುರ್ಮರಣ
    • ಐದು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ
    ತುಮಕೂರು June 13, 2026

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    By adminJune 13, 2026No Comments2 Mins Read

    ತುಮಕೂರು: ನಗರದ ಅಮಾನಿಕೆರೆ ಗಾಜಿನ ಮನೆ ಉದ್ಯಾನವನದ ಆವರಣದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ 5ನೇ ಪುಣ್ಯ ಸ್ಮರಣೆ ಹಾಗೂ ದಲಿತ ಚಳುವಳಿಯ ಹರಿಕಾರ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನಾಚರಣೆಯನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.

    ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚುವ ಮೂಲಕ ಗೌರವ ಸಮರ್ಪಿಸಲಾಯಿತು.


    Provided by
    Provided by

    ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಎನ್. ಕೆ. ನಿಧಿ ಕುಮಾರ್, “ಡಾ. ಸಿದ್ದಲಿಂಗಯ್ಯನವರು ಬಂಡಾಯ ಸಾಹಿತ್ಯದ ಸಾರಥಿ ಹಾಗೂ ಸರಳತೆ ಮತ್ತು ಹಾಸ್ಯಪ್ರಜ್ಞೆಯ ಅಪರೂಪದ ಕವಿ. ತಮ್ಮ ಕಾವ್ಯ ಹಾಗೂ ಸಾಮಾಜಿಕ ಹೋರಾಟಗಳ ಮೂಲಕ ಶೋಷಿತ ಸಮುದಾಯಗಳ ಧ್ವನಿಯಾಗಿ ಅವರು ಹೊರಹೊಮ್ಮಿದರು,” ಎಂದರು.

    “ನಿಮ್ಮ ಬೇಟೆಯುತ್ಸವದಲಿ ಕುರಿಗಳಾಗಿ ಸತ್ತ ಜನರು ಬಂದಿರುವರು ಹುಲಿಗಳಾಗಿ ಗರ್ಜನೆಯನು ಕೇಳಿರಿ”  ಎಂಬ ಸಾಲುಗಳ ಮೂಲಕ ಅಸಮಾನ ಸಮಾಜ ಮತ್ತು ರಾಜಕಾರಣಿಗಳ ವಿರುದ್ಧ ಕಾವ್ಯವನ್ನೇ ಖಡ್ಗವಾಗಿಸಿ ಸಿದ್ದಲಿಂಗಯ್ಯನವರು ಹೋರಾಡಿದ್ದರು. ಅವರ ಸರಳ ವ್ಯಕ್ತಿತ್ವ ಮತ್ತು ಜನಸಾಮಾನ್ಯರ ನೋವು-ನಲಿವುಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ಸದಾ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿರುತ್ತದೆ ಎಂದು ಅವರು ತಿಳಿಸಿದರು.

    ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ರವಿಕುಮಾರ್ ಎನ್. ಮಾತನಾಡಿ, “ಶೋಷಣೆ, ಅವಮಾನ ಹಾಗೂ ಅಸ್ಪೃಶ್ಯತೆಯ ಕತ್ತಲೆಯಲ್ಲಿದ್ದ ತಳಸಮುದಾಯಗಳ ಬದುಕಿಗೆ ಸ್ವಾಭಿಮಾನ ಮತ್ತು ಸಂಘಟನೆಯ ಬೆಳಕು ತಂದ ಅಪರೂಪದ ನಾಯಕ ಪ್ರೊ. ಬಿ. ಕೃಷ್ಣಪ್ಪ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಸಂದೇಶವನ್ನು ಕರ್ನಾಟಕದ ಕೇರಿ-ಕೇರಿಗಳಿಗೆ ತಲುಪಿಸಿದ ಧೀಮಂತ ಶಕ್ತಿ ಅವರು. ಅವರ ಹೋರಾಟದ ಕರೆಗೆ ಸ್ಪಂದಿಸಿ ಸಾವಿರಾರು ಯುವಕರು ಸಾಮಾಜಿಕ ಪರಿವರ್ತನೆಯ ಹಾದಿ ಹಿಡಿದರು,” ಎಂದು ಬಣ್ಣಿಸಿದರು.

    ಇನ್ನೂ ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ್ ಕೆ. ಮಾತನಾಡಿ, “ದಲಿತರ ಗುಡಿಸಲಿನಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ, ಅದನ್ನು ಆರದಂತೆ ಕಾಪಾಡಿ’ ಎಂದು ಜಾಗೃತಿಯ ಕರೆ ನೀಡಿದ ಪ್ರೊ. ಬಿ. ಕೃಷ್ಣಪ್ಪನವರ ತತ್ವಗಳು ಹಾಗೂ ಕನ್ನಡ ಸಾಹಿತ್ಯ ಲೋಕದ ಬಂಡಾಯ ಕವಿ ಡಾ. ಸಿದ್ದಲಿಂಗಯ್ಯನವರ ಕೊಡುಗೆಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣಾದಾಯಕ ಮತ್ತು ಚಿರಸ್ಮರಣೀಯ,” ಎಂದರು.

    ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ತಾಲೂಕು ಅಧ್ಯಕ್ಷರಾದ ಹನುಮ ನರಸಯ್ಯ, ತುಮಕೂರು ನಗರ ಕಾರ್ಯದರ್ಶಿ ವಿಜಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ನಗರ ಪ್ರಧಾನ ಕಾರ್ಯದರ್ಶಿ ನರಸಿಂಹ ಕೋತಿ ತೋಪು, ಮಾರ್ಕೆಟ್ ಮಣ್ಣೆಪ್ಪ ಸೇರಿದಂತೆ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ತುಮಕೂರು: UGD ಓಪನ್ ಆಗಿ ಸಾರ್ವಜನಿಕರಿಗೆ ತೊಂದರೆ, ಪಾಲಿಕೆ ಮೌನ

    June 12, 2026

    ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

    June 11, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ಕೊರಟಗೆರೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ನಡೆಸಲು ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಬಾರದು ಎಂದು…

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.