ಕೊರಟಗೆರೆ : ತಾಲೂಕಿನ ಸಿದ್ದರಬೆಟ್ಟದ ಶ್ರೀ ಬಾಳೆಹೊನ್ನೂರು ಖಾಸಾಶಾಖಾ ಮಠದಲ್ಲಿ ಜೂ.21 ರಂದು ನಡೆಯುವ 20ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನ ಶ್ರೀ ಮಠದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಜೀ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಹಾಗೂ ಬಡವರಿಗೆ ದಾರಿ ದೀಪವಾದ ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮವನ್ನ ಏರ್ಪಡಿಸಲಾಗಿದ್ದು, ಶ್ರೀಮಠದ ಭಕ್ತರು ಈ ಎಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿ ಸಮಾರಂಭವನ್ನ ಯಶ್ವಸಿಗೊಳಿಸಲು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಶ್ರೀ ಮಠದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಹಕಾರದಿಂದ ನಡೆದುಕೊಂಡು ಬರುತ್ತಿದ್ದು, 20ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಭಕ್ತರು ನಡೆಸಿಕೊಡಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು, ಹೊಸ ಚಿಂತನೆ ಬಂದಿದ್ದು ನಮ್ಮ ಪುರ್ವಜರು ಸಿದ್ದರಬೆಟ್ಟದ ಆರಾಧ್ಯ ದೈವ ಸಿದ್ದೇಶ್ವರ ಸ್ವಾಮಿಗೆ ಪ್ರಸಾದವನ್ನಾಗಿ ಹೊಳಿಗೆ ಮಾಡುತ್ತಿದ್ದರು ಎನ್ನಲಾಗಿದ್ದು, ಅದರಂತೆ ನಮ್ಮ ಶ್ರೀಮಠದಲ್ಲಿ 365 ದಿನಗಳ ಕಾಲ ಹೊಳಿಗೆ ಊಟ ಮಾಡಲು ಚಿಂತನೆ ಮಾಡಲಾಗುತ್ತಿದ್ದು, ಭಕ್ತರ ಸಹಕಾರ ನೀಡಿದರೆ, ಆದಷ್ಟು ಬೇಗ ಹೊಳಿಗೆ ಊಟಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಶ್ರೀಮದ್ ರಂಭಾಪುರಿ ವೀರ ಸಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ವಿ.ಸೋಮಣ್ಣ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಮಧುಗಿರಿ ಶಾಸಕ ರಾಜಣ್ಣ, ಜಿಲ್ಲೆ ಎಲ್ಲಾ ಶಾಸಕರು, ಎಂಲ್ಸಿಗಳು, ಹಾಗೂ ಜನ ಪ್ರತಿನಿಧಿಗಳು ಸೇರಿದಂತೆ 20ಕ್ಕೂ ಹೆಚ್ಚು ಸ್ವಾಮಿಜೀಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಶ್ರೀ ಮಠದ ಭಕ್ತರಾದ ಡಾ.ಕೆ.ಎಲ್.ದರ್ಶನ್ ಭದ್ರಯ್ಯ, ಗಿರೀಶ್, ಗಂಗಾಧರಪ್ಪ, ರಾಜಣ್ಣ, ಶಿವಕುಮಾರ್, ಉಮಣ್ಣ, ಮಂಜಣ್ಣ, ಲೋಕೇಶ್, ರೇಣುಪ್ರಸಾದ್, ಉಮೇಶ್, ಮಹೇಂದ್ರ, ದ್ವಾರಕನಾಥ್, ಶಾಂತಣ್ಣ, ರುದ್ರೇಶ್, ಆನಂದ್, ಆರ್.ಎಸ್.ರಾಜಣ್ಣ, ಅರವಿಂದ್, ಸದಾಶಿವಯ್ಯ, ನಟರಾಜು, ಪುಣ್ಯಕೋಟಿ ಮಹಿಳಾ ಬಳಗ ಮಧುಗಿರಿ ಸೇರಿದಂತೆ ಭಕ್ತರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


