ವೈ.ಎನ್.ಹೊಸಕೋಟೆ: ರೋಗನಿರ್ಣಯ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಕಾಲಿಡುತ್ತಿರುವ ಲಕ್ಷ್ಮೀನಾರಾಯಣ ಆಸ್ಪತ್ರೆ, ಜೂ.17ರಂದು ಅತ್ಯಾಧುನಿಕ ಡಿಜಿಟಲ್ ಎಕ್ಸ್–ರೇ ಘಟಕವನ್ನು ಉದ್ಘಾಟಿಸಲು ಸಜ್ಜಾಗಿದೆ.
ಆಸ್ಪತ್ರೆಯಲ್ಲಿ ಅಳವಡಿಸಿರುವ “Next–Gen DR System” ಡಿಜಿಟಲ್ ರೇಡಿಯೋಗ್ರಫಿ ಹಾಗೂ 150 mA “High–Frequency” ಎಕ್ಸ್–ರೇ ತಂತ್ರಜ್ಞಾನವು ರೋಗಿಗಳಿಗೆ ಕಡಿಮೆ ವಿಕಿರಣ, ವೇಗದ ಸ್ಕ್ಯಾನ್ ಮತ್ತು ಅತ್ಯಂತ ಸ್ಪಷ್ಟ ಚಿತ್ರಣ ನೀಡಲಿದೆ. ಸಾಂಪ್ರದಾಯಿಕ ಎಕ್ಸ್–ರೇಗಿಂತ ಈ ವ್ಯವಸ್ಥೆಯಲ್ಲಿ ಚಿತ್ರಗಳು ತಕ್ಷಣ ಲಭ್ಯವಾಗುವುದರಿಂದ ಚಿಕಿತ್ಸೆ ವೇಗವಾಗಲಿದೆ.
ಈ ಹೊಸ ಘಟಕದ ಉದ್ಘಾಟನಾ ಸಮಾರಂಭವು ಬುಧವಾರ, ಜೂ.17 ರಂದು ಸಂಜೆ 5:00 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಆಸ್ಪತ್ರೆಯ ಮುಖ್ಯಸ್ಥ ಡಾ.ಎಂ.ಪ್ರೇಮಯೋಗಿ ಹಾಗೂ ಕುಟುಂಬದವರು ಆತಿಥ್ಯ ವಹಿಸಲಿದ್ದಾರೆ.
ವೈ.ಎನ್.ಹೊಸಕೋಟೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಮಹತ್ವದ್ದಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಕಾರ್ಯಕ್ರಮಕ್ಕೆ ಸ್ನೇಹಿತರು, ವೈದ್ಯಕೀಯ ವೃಂದ ಹಾಗೂ ಸಾರ್ವಜನಿಕರಿಗೆ ಆತ್ಮೀಯ ಆಹ್ವಾನ ನೀಡಲಾಗಿದೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
—


