ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಟೀಮ್ ಈಶ್ವರ್ ಮಲ್ಲೆ ಸಹಯೋಗದಲ್ಲಿ ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಉಚಿತ ಶ್ರವಣ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಟೀಮ್ ಈಶ್ವರ್ ಮಲ್ಲೆ ತಂಡದ ಡಾ. ಪವನ್ ಮತ್ತು ತಂಡದವರು ಶಿಬಿರದಲ್ಲಿ ಶ್ರವಣ ತಪಾಸಣೆ ಮಾಡಿದರು. ನಂತರ ಅಗತ್ಯವಿರುವವರಿಗೆ ಸಹಾಯಧನದ ಮೂಲಕ ಶ್ರವಣ ಯಂತ್ರಗಳನ್ನು ವಿತರಿಸಲಾಯಿತು.
ಟೀಮ್ ಈಶ್ವರ್ ಮಲ್ಲೆ ತಂಡದ ಸಂಚಾಲಕ ಲವ ಬಂಗೇರಾ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಲ್. ಯೋಗೇಶ್, ಜಿಲ್ಲಾ ಖಜಾಂಚಿ ಸತೀಶ್ ಹಾರೋಗೇರೆ, ನಿರ್ದೇಶಕರಾದ ವಿಜಯ್, ದೊಡೇರಿ ಕೆಂಚಮಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಹಲವು ಪತ್ರಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




