ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಐಸಿಎಸ್ ಎಸ್ ಆರ್–ಪ್ರಾಯೋಜಿತ ಸಂಶೋಧನ ಯೋಜನೆಗೆ ಸಂಶೋಧನ ಸಹಾಯಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರೊ. ಗುಂಡೂರ್ ಎನ್. ಎಸ್. ಅವರು ಪ್ರಧಾನ ಸಂಶೋಧಕರಾಗಿರುವ ‘ರಿಕನ್ ಸ್ಟ್ರಕ್ಟಿಂಗ್ ಇಂಡಿಯನ್ ಐಡಿಯಾಸ್: ಕೀ ಕಾನ್ಸೆಪ್ಟ್ಸ್ ಇನ್ ವೀರಶೈವ ಡಿಸ್ಕೋರ್ಸ್’ ಎಂಬ ಈ ಸಂಶೋಧನ ಯೋಜನೆಗೆ ಒಂದು ವರ್ಷದ ಅವಧಿಗೆ ಸಂಶೋಧನ ಸಹಾಯಕರ ಅಗತ್ಯವಿದ್ದು ಯಾವುದೇ ಸಮಾಜ ವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳೊಂದಿಗೆ (ಪ.ಜಾ./ಪ.ಪಂ./ದಿವ್ಯಾಂಗ ಅಭ್ಯರ್ಥಿಗಳಿಗೆ ಶೇ. 50) ಸ್ನಾತಕೋತ್ತರ ಪದವಿ, ನೆಟ್ ತೇರ್ಗಡೆ/ ಎಂ.ಫಿಲ್/ ಪಿಹೆಚ್.ಡಿ ಪದವಿ ಪಡೆದಿರಬೇಕು.
ಜು.9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ತುಮಕೂರು ವಿಶ್ವವಿದ್ಯಾನಿಲಯದ ಜಾಲತಾಣ www.tumkuruniversity.ac.in ಗೆ ಭೇಟಿ ನೀಡಲು ಕೋರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


