ತುಮಕೂರು: ಪ್ರತಿಯೊಂದು ಕುಟುಂಬವು ಪ್ರೀತಿ, ವಾತ್ಸಲ್ಯದೊಂದಿಗೆ ಕುಟುಂಬದಲ್ಲಿ ಬೆಳೆಯುವ ಹಕ್ಕನ್ನು ಹೊಂದಿದ್ದು, ಕುಟುಂಬವು ಮಕ್ಕಳ ಬದುಕಿಗೆ ಜೀವನಾಡಿ” ಯಾಗಿ ಮಹತ್ತರವಾದ ಪಾತ್ರ ವಹಿಸುತ್ತದೆ. ಪೋಷಕರು ಕುಟುಂಬದ ಕೇಂದ್ರ ಬಿಂದುವಾಗಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವುದು ಮತ್ತು ಅವರಿಗೆ ಮಮತೆಯ ಸಾನಿಧ್ಯಗಳನ್ನು ಎಲ್ಲಾ ಸಂದರ್ಭಗಳಲ್ಲೂ ಒದಗಿಸುವುದಾಗಿದೆ.
ಆದರೆ ಕಾರಣಾಂತರಗಳಿಂದ ಕೆಲವು ಮಕ್ಕಳು ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲು ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವನ್ನು ಸ್ವಂತ ಕುಟುಂಬದಲ್ಲಿ ಇರಿಸಲು ಸಾಧ್ಯವಾಗದಿದ್ದಾಗ, ಅಂತಹ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬದ ಆರೈಕೆಯನ್ನು ಒದಗಿಸುವ ಹಿತದೃಷ್ಟಿಯಿಂದ ಪೋಷಕತ್ವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ 6 ರಿಂದ 18 ವರ್ಷದ ಒಳಗಿನ ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ ಹಿರಿಯ ಮಕ್ಕಳನ್ನು ಕುಟುಂಬದ ವಾತಾವರಣಕ್ಕೆ ಅಳವಡಿಸಿಕೊಳ್ಳಲು ಮಗುವನ್ನು ಪಡೆಯಲು ಆಸಕ್ತಿ ಇರುವ ಪೋಷಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಮಕ್ಕಳಿಗೆ ಸುರಕ್ಷಿತ ಮತ್ತು ಪ್ರೀತಿಯ ವಾತಾವರಣ ನೀಡಬಲ್ಲವರು ಹಾಗೂ ಮಕ್ಕಳನ್ನು ಪಾಲನೆ ಮಾಡಲು ಸಿದ್ಧರಿರುವ ಕಾಳಜಿ ಇರುವ ಯಾವುದೇ ಅರ್ಹ ದಂಪತಿ/ ವ್ಯಕ್ತಿಗಳು ಅರ್ಜಿಯನ್ನು ಪಡೆದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊದಲನೇ ಮಹಡಿ, ಮಹಾತ್ಮ ಗಾಂಧಿ ಕ್ರೀಡಾಂಗಣ, ಕುವೆಂಪುನಗರ, ತುಮಕೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ದೂ.ಸಂ. 0816-2956699 ಮೊ: 9110857472 ಇಲ್ಲಿಗೆ ಸಂಪರ್ಕಿಸುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


