ತುಮಕೂರು: ತುಮಕೂರು ತಾಲೂಕು ಕೋರ ಗ್ರಾಮದ ಬಳಿಯಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತರಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಎಂದು ಕೋರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ.
- ಪ್ರಕರಣ–1 : ಸುಮಾರು 83 ವರ್ಷದ ನಾರಾಯಣ ಬಿನ್ ಮದಲ್ಪ ಮುತ್ತು ಎಂಬ ಅಪರಿಚಿತ ವೃದ್ಧನು ಜೂನ್ 23ರಂದು ಮೃತಪಟ್ಟಿದ್ದು, ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಡಲಾಗಿದೆ.
ಮೃತನು 153 ಸೆಂ.ಮೀ. ಎತ್ತರ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಮೃತನ ಮೈಮೇಲೆ ನಿರಾಶ್ರಿತ ಪರಿಹಾರ ಕೇಂದ್ರದವರು ನೀಡಿದ್ದ ಕೆಂಪು ಬಣ್ಣದ ಅಂಗಿ ಹಾಗೂ ಬರ್ಮುಡ ನಿಕ್ಕರ್ ಇರುತ್ತದೆ.
- ಪ್ರಕರಣ–2 : ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯು ಜೂನ್ 27ರಂದು ಮೃತಪಟ್ಟಿರುತ್ತಾನೆ. ಮೃತನು 165 ಸೆಂ.ಮೀ. ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದಾನೆ. ಮೃತನ ಮೈಮೇಲೆ ಬಿಳಿ, ಹಳದಿ, ನೀಲಿ ಚುಕ್ಕೆಗಳಿರುವ ಅರ್ಧ ತೋಳಿನ ಜುಬ್ಬಾ, ನೀಲಿ ಬಣ್ಣದ ನಿಕ್ಕರ್ ಇರುತ್ತದೆ. ಬಲ ಮೊಣಕೈ ಮೇಲೆ ಹಾಗೂ ಕಣ್ಣಿನ ಕೆಳಭಾಗದಲ್ಲಿ ಗೋಧಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 0816-2278000 / 2272340 / 2275301 / 2242006, ಮೊ.ಸಂ.9480802900-20-31-49ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


