ತುಮಕೂರು: ಸಂಗೀತ ಕ್ಷೇತ್ರದ ದಿಗ್ದರ್ಶರಾದ ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಶಾಸ್ತ್ರಿಗಳ ಸವಿನೆನಪಿನಲ್ಲಿ ಜುಲೈ 12ರಂದು ಶಾಸ್ತ್ರೀಯ ಸಂಗೀತೋತ್ಸವ ಕಾರ್ಯಕ್ರಮವನ್ನು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ 9.30 ಗಂಟೆಗೆ ಆಯೋಜಿಸಲಾಗಿದೆ.
ಸಂಗೀತ ಕಚೇರಿಯನ್ನು ವಿದ್ವಾನ್ ಈ. ರಾಮಕೃಷ್ಣಾಚಾರ್, ಸಂಗೀತ ವಿದುಷಿ ಕು. ಸ್ನೇಹ ಮತ್ತು ಸ್ನೇಹ ಹೆಚ್. ರಾಯಪ್ಪ, ರಾಧಕೃಷ್ಣ ಭಜನಾ ಮಂಡಳಿಯಿಂದ ದಾಸರ ಕೀರ್ತನೆಗಳನ್ನು ನಡೆಸಿಕೊಡುವರು, ಸಂಗೀತ ಕ್ಷೇತ್ರದ ಹಿರಿಯ ಸಪ್ತ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು.
ಮುಳ್ಳುಹಾದಿ ಚಲನಚಿತ್ರದ ಟ್ರೈಲರ್ ಅನ್ನು ಮುರಳೀಧರ ಹಾಲಪ್ಪ ರವರು ಬಿಡುಗಡೆಗೊಳಿಸುವರು, ಕುರು ಪಾಂಡವ ನಾಟಕದ ಪುಸ್ತಕದ ಬಿಡುಗಡೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ನಡೆಸಿಕೊಡುವರು ಕಾರ್ಯಕ್ರಮವನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸುವರು. ವ.ಚ. ಚನ್ನೇಗೌಡ ರವರು ಅಧ್ಯಕ್ಷತೆವಹಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


