ತುಮಕೂರು: ತಾಯಿಯ ಅಂತಃಕರಣ ಹಾಗೂ ಬುದ್ಧನ ಕಾರುಣ್ಯ ಎರಡನ್ನೂ ಯಾವ ವ್ಯಕ್ತಿ ಅಳವಡಿಸಿ ಕೊಳ್ಳುತ್ತಾನೋ ಆತ ಸಮಾಜದಲ್ಲಿ ಯಶಸ್ಸನ್ನು ಕಾಣುತ್ತಾನೆ ಎಂದು ಪತ್ರಕರ್ತ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಗುಬ್ಬಿ ಚಾಲುಕ್ಯ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವ್ಯಕ್ತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೆಲಸದಲ್ಲಿ ತೊಡಗಿಕೊಂಡರೆ ಆತನಿಗೆ ಸಮಾಜದಲ್ಲಿ ಮನ್ನಣೆ ಶತಃ ಸಿದ್ಧ ಎಂದ ಅವರು ಸಮಾಜದಲ್ಲಿ ಸದ್ದು ಮಾಡಿಕೊಂಡು ಕೆಲಸ ಮಾಡುವುದಕ್ಕಿಂತ ಪ್ರಚಾರ ಬಯಸದೆ ಕೆಲಸ ಮಾಡಿದರೆ ದೀರ್ಘ ಕಾಲ ಜನರ ಮನಸ್ಸಿ ನಲ್ಲಿ ಉಳಿಯುತ್ತಾನೆ ಎಂದರು.
ವೈದ್ಯ ವೃತ್ತಿ ಕೇವಲ ಒಂದು ಉದ್ಯೋಗವಲ್ಲ, ಅದೊಂದು ಪವಿತ್ರವಾದ ಸೇವೆ. ಈ ನಿಟ್ಟಿನಲ್ಲಿ ಚಾಲುಕ್ಯ ಆಸ್ಪತ್ರೆಯ ಡಾ. ನಾಗಭೂಷಣ್ ಅವರು ಉತ್ತಮ ವೈದ್ಯಕೀಯ ಸೇವೆ ಮಾಡುತ್ತಿದ್ದಾರೆ ಎಂದರು.
ಗುಬ್ಬಿ ತಾಲೂಕು ವೈದ್ಯಾಧಿಕಾರಿ ಡಾ.ವಿಜಯ ಕುಮಾರ್ ಮಾತನಾಡಿ, ವೈದ್ಯರು ಮನುಷ್ಯರ ಆರೋಗ್ಯಕ್ಕಾಗಿ ಕೆಲಸ ಮಾಡಿದರೆ ಮಾಧ್ಯಮದವರು ಸಮಾಜದ ಅನಿಷ್ಟ ಚಟುವಟಿಕೆಗಳನ್ನು ತಿದ್ದುವ ಕೆಲಸ ಮಾಡುತ್ತಾರೆ. ಔಷಧಿಗಳು ರೋಗವನ್ನು ಗುಣಪಡಿಸಿದರೆ ವೈದ್ಯರ ಪ್ರೀತಿಯ ಮಾತು ಮತ್ತು ಕಾಳಜಿ ರೋಗಿಗೆ ಬೇಗ ಗುಣವಾಗುವ ಆತ್ಮ ವಿಶ್ವಾಸ ಉಂಟಾಗುತ್ತದೆ ಎಂದು ತಿಳಿಸಿದರು.
ಚಾಲುಕ್ಯ ಆಸ್ಪತ್ರೆಯ ಸಿಇಒ ಡಾ. ನಾಗಭೂಷಣ್ ಮಾತನಾಡಿ ಭಾರತದ ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಲದ ಮಾಜಿ ಮುಖ್ಯಮಂತ್ರಿ ಬಿ.ಸಿ. ರಾಯ್ ಅವರ ಜನ್ಮದಿನ ಹಾಗೂ ಪುಣ್ಯ ಸ್ಮರಣೆಯ ನೆನಪಿನಲ್ಲಿ ಪ್ರತಿ ವರ್ಷ ಜುಲೈ 1 ರಂದು ವೈದ್ಯರ ದಿನ ಆಚರಿಸಲಾಗುತ್ತದೆ ಎಂದರು. ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಜಗದೀಶ್, ಡಾ. ರಶ್ಮಿ, ಡಾ. ಮಹಾಲಕ್ಷ್ಮಿ, ಡಾ. ರಕ್ಷಿತ್, ಡಾ. ಶ್ರೀರಕ್ಷ, ಡಾ. ಗಂಗಾ, ಶ್ವೇತಾ, ಪ್ರಸನ್ನ ದೊಡ್ಡಗುಣಿ, ರಾಮಂಜನಯ್ಯ, ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


