nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಸ್ತೂರಿರಂಗನ್ ವರದಿ ಜಾರಿಯಾದರೆ 10 ಜಿಲ್ಲೆಗಳ ಜನಜೀವನಕ್ಕೆ ಹೊಡೆತ: ಡಿ.ಕೆ. ಶಿವಕುಮಾರ್

    September 22, 2026

    ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಹೈಕೋರ್ಟ್ ಸೂಚನೆ ಬಳಿಕ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಕ್ಷಮೆಯಾಚನೆ

    September 22, 2026

    ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳಿಗೆ ಶಾಕ್!

    September 22, 2026
    Facebook Twitter Instagram
    ಟ್ರೆಂಡಿಂಗ್
    • ಕಸ್ತೂರಿರಂಗನ್ ವರದಿ ಜಾರಿಯಾದರೆ 10 ಜಿಲ್ಲೆಗಳ ಜನಜೀವನಕ್ಕೆ ಹೊಡೆತ: ಡಿ.ಕೆ. ಶಿವಕುಮಾರ್
    • ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಹೈಕೋರ್ಟ್ ಸೂಚನೆ ಬಳಿಕ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಕ್ಷಮೆಯಾಚನೆ
    • ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳಿಗೆ ಶಾಕ್!
    • ಡಿಸಿಎಂ ತವರಲ್ಲೇ ದಲಿತ ಅಪ್ರಾಪ್ತ ಬಾಲಕನ ಭೀಕರ ಕೊಲೆ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದೇ ತಪ್ಪಾಯ್ತಾ?
    • ದುರ್ಗದಕೆರೆ, ನಾಗತಿಕೆರೆಗೆ ಎತ್ತಿನ ಹೊಳೆ ನೀರು: ಶಾಸಕ ಸಿ.ಬಿ.ಸುರೇಶ್ ಬಾಬು
    • ಅಧಿಕಾರಿಗಳು ಉಡಾಫೆ ಧೋರಣೆ ಬಿಡಿ: ಶಾಸಕ ಎಸ್.ಆರ್.ಶ್ರೀನಿವಾಸ್ ತರಾಟೆ
    • ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ಅಹಿಂದ ವರ್ಗ ಒಂದಾಗದಿದ್ದರೆ ನಾಶ: ಎಸ್.ಟಿ ಶ್ರೀನಿವಾಸ್ ಕಳವಳ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ
    ಜಿಲ್ಲಾ ಸುದ್ದಿ July 22, 2026

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    By adminJuly 22, 2026No Comments2 Mins Read
    thumakur

    ಸರಗೂರು: ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ತಾಲೂಕು ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷ ಪಿ. ಚಿನ್ನಣ್ಣ ಹೇಳಿದರು.ಪಟ್ಟಣದ ಬಿಡುಗಲು 11ನೇ ವಾರ್ಡ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಾನವ ಹಕ್ಕುಗಳ ಮಿಷನ್ ವತಿಯಿಂದ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಬುಧವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿಗಳನ್ನು ವಿತರಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ವರ್ಷಪೂರ್ತಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಶಾಲೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತಂದುಕೊಟ್ಟಾಗ ಮಾತ್ರ ಇಂತಹ ನೋಟ್‌ಬುಕ್ ವಿತರಣೆ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ. ಬಾಲ್ಯದಿಂದಲೇ ದೇಶಭಕ್ತಿ, ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಹಾಗೂ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.

    ಎಚ್.ಡಿ. ಕೋಟೆ ಮಾನವ ಹಕ್ಕುಗಳ ಮಿಷನ್ ನಿರ್ದೇಶಕ ತುಂಬಸೋಗೆ ನಾಗಣ್ಣ ಮಾತನಾಡಿ, ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕರು ಇಂದು ಸಮಾಜದಲ್ಲಿ ಉನ್ನತ ಹುದ್ದೆ ಹಾಗೂ ಸ್ಥಾನಮಾನಗಳನ್ನು ಅಲಂಕರಿಸಿರುವುದು ಶಾಲೆಯ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಕರು ಮತ್ತು ಪಾಲಕರು ಆರಂಭದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟರೆ ಮಾತ್ರ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.

    ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮರೀಲಿಂಗಯ್ಯ, ಮಾನವ ಹಕ್ಕುಗಳ ಮಿಷನ್ ಮಾಜಿ ಅಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ದೇವಲಾಪುರ, ಸಹ ಕಾರ್ಯದರ್ಶಿ ಸೂರ್ಯಕುಮಾರ್ ಮಸಹಳ್ಳಿ, ಉಪಾಧ್ಯಕ್ಷರಾದ ಶಿವಣ್ಣ ಚೆನ್ನಿಪುರ, ಸೋಮಣ್ಣ ಹೆಗ್ಗುಡಿಲು, ಸಂಘಟನೆ ಸಂಚಾಲಕ ಶಿವರಾಜು ಚೆನ್ನಿಪುರ, ನಿರ್ದೇಶಕರಾದ ಚೆಲುರಾಜು ನರಸೀಪುರ, ಸೋಮಣ್ಣ ಲಂಕೆ, ರಾಮಚಂದ್ರ ನಿಲುವಾಗಿಲು, ಈಶ್ವರ ಲಂಕೆ, ದಡದಹಳ್ಳಿ ಪುಟ್ಟಯ್ಯ, ಶಿವಮಲು, ಶಿಕ್ಷಕರಾದ ನಾಗರಾಜು, ವಿಷಕಂಠ, ಮಹೇಶ್ ಹಾಗೂ ಶಾಲಾ ಸಿಬ್ಬಂದಿ, ಮಕ್ಕಳು ಮತ್ತು ಮುಖಂಡರು ಉಪಸ್ಥಿತರಿದ್ದರು.

    ವರದಿ:ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಹೈಕೋರ್ಟ್ ಸೂಚನೆ ಬಳಿಕ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಕ್ಷಮೆಯಾಚನೆ

    September 22, 2026

    ಬೀದರ್: ವಿವಿಧೆಡೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ದಿಢೀರ್ ಭೇಟಿ; ವಿವಿಧ ಕಾಮಗಾರಿಗಳ ಪರಿಶೀಲನೆ

    September 21, 2026

    ಬಾದಲಗಾಂವ ಗ್ರಾಮಕ್ಕೆ ಜಿ.ಪಂ. ಸಿಇಒ ಗಿತ್ತೆ ಮಾಧವವಿಠ್ಠಲರಾವ್ ದಿಢೀರ್ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    September 21, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕಸ್ತೂರಿರಂಗನ್ ವರದಿ ಜಾರಿಯಾದರೆ 10 ಜಿಲ್ಲೆಗಳ ಜನಜೀವನಕ್ಕೆ ಹೊಡೆತ: ಡಿ.ಕೆ. ಶಿವಕುಮಾರ್

    September 22, 2026

    ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ.ಕೆ.ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರದ ಕ್ರಮದಿಂದ ಕರ್ನಾಟಕದ 10 ಜಿಲ್ಲೆಗಳ ಜನರ…

    ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಹೈಕೋರ್ಟ್ ಸೂಚನೆ ಬಳಿಕ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಕ್ಷಮೆಯಾಚನೆ

    September 22, 2026

    ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳಿಗೆ ಶಾಕ್!

    September 22, 2026

    ಡಿಸಿಎಂ ತವರಲ್ಲೇ ದಲಿತ ಅಪ್ರಾಪ್ತ ಬಾಲಕನ ಭೀಕರ ಕೊಲೆ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದೇ ತಪ್ಪಾಯ್ತಾ?

    September 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.