ತುಮಕೂರು: ರಾಜಕಾರಣದಷ್ಟೇ ಇತ್ತೀಚೆಗೆ ದೇಶದ ಶಿಕ್ಷಣ ವ್ಯವಸ್ಥೆಯೂ ಕಲುಷಿತಗೊಳ್ಳುತ್ತಿದ್ದು, ಗುಣಾತ್ಮಕ ಶಿಕ್ಷಣ ನೀಡುವುದು ಪ್ರಸ್ತುತ ದಿನಗಳಲ್ಲಿ ದೊಡ್ಡ ಸವಾಲಾಗಿದೆ ಎಂದು ಮಾಜಿ ವಿಧಾನ ಪರಿಷತ್ತು ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
ನಗರದ ಸೆಂಟ್ರಲ್ ಲೈಬ್ರರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗೆಳೆಯರ ಗೆಳೆಯ ಕೆಸಿಬಿ ಕೃತಿ ಲೋಕಾರ್ಪಣೆ ಹಾಗೂ ಡಾ. ಕೆ.ಸಿ. ಬಸವರಾಜ್ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಿವಿಜಿ ಅವರ ಮಂಕುತಿಮ್ಮನ ಕಗ್ಗದಂತೆ ದೀನದುರ್ಬಲರ ಪಾಲಿಗೆ ಬೆಲ್ಲ-ಸಕ್ಕರೆಯಾಗಿ, ಸಮಾಜಕ್ಕೆ ಬೆಳಕಾಗಿದ್ದಾರೆ ಎಂದು ಬಣ್ಣಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಾತ್ರಕ್ಕೆ ಮನೆಯಲ್ಲಿ ಕೂರದೆ, ಕೆಸಿಬಿ ಅವರು ತಮ್ಮಲ್ಲಿರುವ ಜ್ಞಾನ, ವಿದ್ವತ್ತು ಹಾಗೂ ಅನುಭವವನ್ನು ಸಮಾಜದ ಏಳಿಗೆಗಾಗಿ ಹಾಗೂ ಯುವಜನರ ಹಿತಕ್ಕಾಗಿ ಧಾರೆ ಎರೆಯಬೇಕು. ಅಧಿಕಾರದ ಹಿಂದೆ ಹೋಗದೆ ಸಮಾಜಮುಖಿ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಡಾ. ವೈ. ಎ. ನಾರಾಯಣಸ್ವಾಮಿ ತಿಳಿಸಿದರು.
ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರವು ದಿನೇ ದಿನೇ ವ್ಯಾಪಾರೀಕರಣಗೊಳ್ಳುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಶಿಕ್ಷಕರು ಸೇರಿದಂತೆ ಇಡೀ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಶಿಕ್ಷಣ ಮತ್ತು ಶಿಕ್ಷಕರ ಹೊಣೆಗಾರಿಕೆ ಕುರಿತು ಗೌರವಾನ್ವಿತ ವಿಚಾರಗಳನ್ನು ಹಂಚಿಕೊಂಡರು.
ಮಿಡಿಗೇಸಿ ಡಿಗ್ರಿ ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ಸಿ. ಬಸವರಾಜು, ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ನೃಪತುಂಗ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಟಿ.ಎಂ. ಮಂಜುನಾಥ್, ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ. ಕೆ. ರಾಮಕೃಷ್ಣರೆಡ್ಡಿ ಮಾತನಾಡಿದರು.
ಈ ವೇಳೆ ಹೆಚ್.ಜಿ. ನಾರಾಯಣ್, ವೈ. ರಮೇಶ್, ಶ್ರೀನಾಥ್ರಾಜ್, ಜಿ. ತಿಪ್ಪೇಸ್ವಾಮಿ, ಡಾ. ಎಂ.ಜಿ. ಶಿವಣ್ಣ ಮಲ್ಲಿಕಾರ್ಜುನಯ್ಯ, . ಟಿ. ಗಂಗಾಧರಯ್ಯ, ಎಂ.ಜಿ. ರಾಮಣ್ಣ, ವಸಂತ ಟಿ.ಡಿ. ಪ್ರಾಂಶುಪಾಲರು, ಎಂ.ಎಸ್. ನಾಗರಾಜು, ಪಿ.ಟಿ. ಶ್ರೀನಿವಾಸ ನಾಯಕ್, ಮುನೀಂದ್ರ ಕುಮಾರ್ ಡಿ.ಎಸ್. ಡಾ. ಶ್ರೀನಿವಾಸ್ ರೆಡ್ಡಿ, ಕೆ. ರಾಮಕೃಷ್ಣ ರೆಡ್ಡಿ, ಡಾ. ಟಿ.ಎಂ. ಮಂಜುನಾಥ್, ಡಿ. ಶಿವನಂಜಯ್ಯ, ಡಾ. ಕೆ. ರಾಮಕೃಷ್ಣ ರೆಡ್ಡಿ ಡಾ. ಟಿ.ಎಂ. ಮಂಜುನಾಥ್, ಡಾ. ಡಿ. ಶಿವನಂಜಯ್ಯ, ಜಿ. ಶ್ರೀನಾಥ್ರಾಜ್, ಟಿ.ಡಿ. ವಸಂತ, ಡಿ.ಎಸ್. ಮುನೀಂದ್ರ ಕುಮಾರ್, ಜಿ. ತಿಪ್ಪೇಸ್ವಾಮಿ ಡಾ. ಓ. ನಾಗರಾಜು, ಸ ಎಂ. ಗೋವಿಂದರಾಯ, ವಿ.ಎನ್. ಮುರುಳೀಧರ್, ಸದಸ್ಯರು ಪ್ರೊ. ಎನ್.ಪಿ. ಶಿವಾನಂದಯ್ಯ, ಧರ್ಮಪತ್ನಿ ವಸಂತಟಿಪುತ್ರಿ ಭೂಮಿಕಾ ಕೃತಿ ಸಂಪಾದಕೀಯ ಮಂಡಳಿ ಸದಸ್ಯರು ಲಕ್ಷ್ಮೀ ರಂಗಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
