nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್: ವಿವಿಧೆಡೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ದಿಢೀರ್ ಭೇಟಿ; ವಿವಿಧ ಕಾಮಗಾರಿಗಳ ಪರಿಶೀಲನೆ

    September 21, 2026

    ಬಾದಲಗಾಂವ ಗ್ರಾಮಕ್ಕೆ ಜಿ.ಪಂ. ಸಿಇಒ ಗಿತ್ತೆ ಮಾಧವವಿಠ್ಠಲರಾವ್ ದಿಢೀರ್ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    September 21, 2026

    ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ

    September 21, 2026
    Facebook Twitter Instagram
    ಟ್ರೆಂಡಿಂಗ್
    • ಬೀದರ್: ವಿವಿಧೆಡೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ದಿಢೀರ್ ಭೇಟಿ; ವಿವಿಧ ಕಾಮಗಾರಿಗಳ ಪರಿಶೀಲನೆ
    • ಬಾದಲಗಾಂವ ಗ್ರಾಮಕ್ಕೆ ಜಿ.ಪಂ. ಸಿಇಒ ಗಿತ್ತೆ ಮಾಧವವಿಠ್ಠಲರಾವ್ ದಿಢೀರ್ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
    • ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ
    • ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮಹಿಳೆಯರು, ಯುವಕರಿಗೆ ಉಪಯುಕ್ತವಾಗಿದೆ: ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್
    • ತುಮಕೂರು ದಸರಾ ಉತ್ಸವ: ಅಕ್ಟೋಬರ್ 17ರಂದು ದಸರಾ ಕವಿಗೋಷ್ಠಿ – ಸ್ವರಚಿತ ಕವನಗಳ ಆಹ್ವಾನ
    • ಸಾಧಕರಿಗೆ ರಾಜ್ಯ ಮಟ್ಟದ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’: ಅರ್ಜಿ ಆಹ್ವಾನ
    • ಬುಕ್ಕಾಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ: ತಹಶೀಲ್ದಾರ್ ಆನಂದ್ ಕುಮಾರ್ ವಿರುದ್ಧ ಎಂಎಲ್ಸಿ ಬೆಂಬಲಿಗರ ತೀವ್ರ ಆಕ್ರೋಶ
    • ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಬಡ್ಡಿ ಮನ್ನಾ ಹಾಗೂ ಒಟಿಎಸ್ ಅವಕಾಶಕ್ಕೆ ಸೂರ್ಯಕಾಂತ್ ನಾಗಮಾರಪಳ್ಳಿ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ
    Uncategorized September 21, 2026

    ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ

    By Ganesh TumkuruSeptember 21, 2026No Comments2 Mins Read
    nahida zam zam

    ಕೊರಟಗೆರೆ (ತುಮಕೂರು): ಅಧಿಕಾರಿಗಳು ಕರ್ತವ್ಯ ನಿಮಿತ್ತ ಬರುತ್ತಾರೆ, ಕಾರ್ಯ ನಿರ್ವಹಿಸಿ ವರ್ಗಾವಣೆಯಾಗಿ ತೆರಳುತ್ತಾರೆ. ಆದರೆ ತಮ್ಮ ಸರಳ ನಡೆ, ಆತ್ಮೀಯತೆ ಹಾಗೂ ಪ್ರಾಮಾಣಿಕ ಸೇವೆಯಿಂದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಳ್ಳುವ ಅಧಿಕಾರಿಗಳು ಬಹಳ ವಿರಳ. ಅಂತಹ ಅಪರೂಪದ ಮಾನವೀಯ ಬಾಂಧವ್ಯಕ್ಕೆ ಕೊರಟಗೆರೆ ತಾಲೂಕು ಸಾಕ್ಷಿಯಾಗಿದೆ.

    ಹಿಂದೆ ಕೊರಟಗೆರೆಯಲ್ಲಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ತುಮಕೂರು ಉಪವಿಭಾಗಾಧಿಕಾರಿಯಾಗಿ (AC) ಕಾರ್ಯನಿರ್ವಹಿಸುತ್ತಿರುವ ನಾಹೀದ್ ಜಮ್ ಜಮ್ ಅವರಿಗೆ ಕೊರಟಗೆರೆಯ ಸಾರ್ವಜನಿಕರೇ ಮುಂದೆ ನಿಂತು ಅದ್ದೂರಿ ಸೀಮಂತ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮ ಅಪಾರ ಅಭಿಮಾನವನ್ನು ಮೆರೆದಿದ್ದಾರೆ.

    ಪಟ್ಟಣದ ಕನ್ನಿಕಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾರ್ವಜನಿಕರು, ಗಣ್ಯರು ಹಾಗೂ ನಾಹೀದ್ ಜಮ್ ಜಮ್ ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಪ್ರಸ್ತುತ ಒಂಬತ್ತು ತಿಂಗಳ ಗರ್ಭಿಣಿಯಾಗಿರುವ ಅಧಿಕಾರಿಯನ್ನು “ನಮ್ಮ ಊರಿನ ಮನೆ ಮಗಳು” ಎಂದೇ ಭಾವಿಸಿರುವ ಕೊರಟಗೆರೆ ಜನತೆ, ಸಾಂಪ್ರದಾಯಿಕ ವಿಧಿ-ವಿಧಾನಗಳಂತೆ ಹೂವು, ಹಣ್ಣು, ಸೀರೆ ಹಾಗೂ ಬಾಗಿನ ನೀಡಿ ತಾಯಿ ಮತ್ತು ಹುಟ್ಟಲಿರುವ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಹಾರೈಸಿದರು.

     “ಕೊರಟಗೆರೆಯಲ್ಲಿ ತಹಶೀಲ್ದಾರರಾಗಿ ಕೆಲಸ ಮಾಡಿದ ದಿನಗಳನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ನನ್ನನ್ನು ಕೊರಟಗೆರೆಗೆ ನೇಮಕ ಮಾಡದಿದ್ದರೆ, ಇಲ್ಲಿನ ಜನರ ಜೊತೆ ಈ ರೀತಿಯ ಆತ್ಮೀಯ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನತೆ ನೀಡಿರುವ ಈ ಆಶೀರ್ವಾದ ಹಾಗೂ ಅಭಿಮಾನವನ್ನು ಎಂದಿಗೂ ಮರೆಯುವುದಿಲ್ಲ.”

    — ನಾಹೀದ್ ಜಮ್ ಜಮ್, ತುಮಕೂರು ಎಸಿ

    ಸಮಾರಂಭದಲ್ಲಿ ಭಾಗವಹಿಸಿದ್ದ ಅಧಿಕಾರಿಯ ತಂದೆಯವರು ಮಾತನಾಡಿ, “ನನ್ನ ಮಗಳು ಕೆಲಸ ಮಾಡಿದ ಊರಿನ ಜನರು ಈ ರೀತಿ ಮುಂದೆ ನಿಂತು ಸೀಮಂತ ಮಾಡುತ್ತಿದ್ದಾರೆ ಎಂದರೆ ಅದು ನಮಗೆ ಸಿಕ್ಕ ಅತಿದೊಡ್ಡ ಗೌರವ. ಗೃಹ ಸಚಿವರು ಅಂದು ನನ್ನ ಮಗಳನ್ನು ಇಲ್ಲಿಗೆ ಕಳುಹಿಸಿಕೊಡಲು ಹೇಳಿದ್ದರಿಂದ ಈ ಅಪಾರ ಪ್ರೀತಿಯನ್ನು ಕಾಣುವ ಭಾಗ್ಯ ಸಿಕ್ಕಿದೆ” ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, “ಅಧಿಕಾರಿಯಾಗಿ ಬಂದು ವರ್ಗಾವಣೆಯಾದ ಮೇಲೆಯೂ ಜನರ ಮನಸ್ಸಿನಲ್ಲಿ ಉಳಿಯುವುದು ಸುಲಭದ ಮಾತಲ್ಲ. ನಾಹೀದ್ ಜಮ್ ಜಮ್ ಅವರ ಸರಳತೆ, ಆತ್ಮೀಯ ಮಾತು ಹಾಗೂ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣವೇ ಜನರೇ ಮುಂದೆ ನಿಂತು ಈ ಸೀಮಂತ ಕಾರ್ಯಕ್ರಮ ಆಯೋಜಿಸಲು ಕಾರಣ” ಎಂದು ಶ್ಲಾಘಿಸಿದರು.

    ಸಮಾರಂಭದಲ್ಲಿ ನಾಹೀದ್ ಜಮ್ ಜಮ್ ಅವರ ಪತಿ ಹಾಗೂ ಕುಟುಂಬಸ್ಥರು, ಕೊರಟಗೆರೆಯ ಹಲವು ಗಣ್ಯರು, ಸಾರ್ವಜನಿಕರು ಮತ್ತು ಅಭಿಮಾನಿಗಳು ಭಾಗವಹಿಸಿ ಶುಭ ಹಾರೈಸಿದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಪೊಲೀಸ್ ಠಾಣೆಗೆ ನುಗ್ಗಿದ್ರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳಿಸ್ತೀವಿ; ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

    September 13, 2026

    ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ

    September 11, 2026

    ಹಸು–ಎಮ್ಮೆ ಸಾಕಾಣಿಕೆ : ಸಹಾಯಧನಕ್ಕೆ ಅರ್ಜಿ ಸಲ್ಲಿಸಿ

    September 10, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್: ವಿವಿಧೆಡೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ದಿಢೀರ್ ಭೇಟಿ; ವಿವಿಧ ಕಾಮಗಾರಿಗಳ ಪರಿಶೀಲನೆ

    September 21, 2026

    ಬೀದರ್ / ಔರಾದ್: ಬೀದರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೋಮವಾರ…

    ಬಾದಲಗಾಂವ ಗ್ರಾಮಕ್ಕೆ ಜಿ.ಪಂ. ಸಿಇಒ ಗಿತ್ತೆ ಮಾಧವವಿಠ್ಠಲರಾವ್ ದಿಢೀರ್ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    September 21, 2026

    ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ

    September 21, 2026

    ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮಹಿಳೆಯರು, ಯುವಕರಿಗೆ ಉಪಯುಕ್ತವಾಗಿದೆ: ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್

    September 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.