24 ರ ಯುವಕನೋರ್ವ ಮತ್ತು 77 ರ ವಯಸ್ಸಿನ ಮಹಿಳೆಯನ್ನು ವರಿಸಿದ (Marriage) ಘಟನೆ ನಡೆದಿದೆ. ತಮ್ಮ ಸಂಬಂಧವನ್ನು ತಪ್ಪು ಎಂದು ಅನೇಕರು ಕರೆದರೂ ಅವರು ಮುಜುಗರ ಪಟ್ಟಿಲ್ಲ ಎಂದು ಇವರು ಹೇಳಿದ್ದಾರೆ.
ಅಕ್ಟೋಬರ್ 2015 ರಲ್ಲಿ ಮದುವೆಯಾದ 53 ವರ್ಷಗಳ ವಯಸ್ಸಿನ (Wedding) ಅಂತರವಿರುವ ಈ ದಂಪತಿಗಳು ತಮ್ಮ ಮದುವೆ “ಅತ್ಯುತ್ತಮ” ಮತ್ತು “ಸ್ಥಿರವಾಗಿದೆ” ಎಂದು ಹೇಳಿದ್ದಾರೆ.2015 ರಲ್ಲಿ ಅಲ್ಮೆಡಾ ಎಂಬ ವೃದ್ಧೆ ಅವರ ಮಗನ ಅಂತ್ಯಕ್ರಿಯೆಯಲ್ಲಿ (Funeral) ಗ್ಯಾರಿ ಎಂಬ ಯುವಕನನ್ನು ಭೇಟಿಯಾದರು.
ಆ ನಂತರ ಇವರಿಬ್ಬರು ಎರಡು ವಾರಗಳ ಬಳಿಕ ವಿವಾಹವಾದರು. ಆ ಸಮಯದಲ್ಲಿ, ಗ್ಯಾರಿ ಕೇವಲ 17 ವರ್ಷ ವಯಸ್ಸಿನವರಾಗಿದ್ದರು. “ನಾವು ಯಾವಾಗಲೂ ಅತ್ಯುತ್ತಮವಾದ, ಸ್ಥಿರವಾದ ದಾಂಪತ್ಯವನ್ನು ಹೊಂದಿದ್ದೇವೆ” ಎಂದು ಗ್ಯಾರಿ ಹೇಳುತ್ತಾರೆ.
ಇವರಿಬ್ಬರ ನಡುವೆ 53 ವರ್ಷಗಳ ವಯಸ್ಸಿನ ಅಂತರವಿದೆ. ಗ್ಯಾರಿ ಮತ್ತು ಅಲ್ಮೆಡಾ (Gary & Almeda) ಅವರ ದಾಂಪತ್ಯ ಜೀವನ ಸಂತಸದಿಂದ ತುಂಬಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB