ಸಿರಾ: ಕಳೆದ 49 ವರ್ಷಗಳ ಹಿಂದೆ ರಾಮದಾಸ್, ಚಿಕ್ಕಚೆನ್ನಯ್ಯ ಎನ್ನುವ ತಹಸೀಲ್ದಾರ್ಗಳ ಅವಧಿಯಲ್ಲಿ ರೈತರಿಗೆ ಬಗರ್ಹುಕುಂ ಸಾಗುವಳಿ ಚೀಟಿಗಳನ್ನು ನೀಡಲಾಗಿತ್ತು. ಈಗ ಅವುಗಳು ಕ್ರಮಬದ್ಧವಲ್ಲವೆಂದು ಸರ್ಕಾರ ಮುಂದಿನ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಈ ಸಂಬಂಧ ಮುಂದಿನ ಕ್ರಮಕ್ಕೆ ಒಂದು ವಾರದ ಗಡುವಿನ ನಂತರ ತಹಸೀಲ್ದಾರ್ ಕಚೇರಿ ಮುಂದೆ ಜೆಡಿಎಸ್ ಪಕ್ಷ ಹಾಗೂ ರೈತ ಪರ ಸಂಘಟನೆಗಳಿಂದ ಅಹೋರಾತ್ರಿ ಪ್ರತಿಭಟನೆ ಮಾಡಲಾಗುವುದು ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ. ಸತ್ಯಪ್ರಕಾಶ್ ಹೇಳಿದರು.
ಅವರು ನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ರೈತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ನಾನು ಸುಮ್ಮನೆ ಕುತಿಲ್ಲ. ಅ.7 ರಂದು ತಹಸೀಲ್ದಾರ್ ಭೇಟಿಯಾಗಿ ಈ ಸಂಬಂಧ ಮನವಿ ಪತ್ರ ನೀಡಿದ್ದೇನೆ. ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಆದರೂ ಪ್ರಯೋಜನವಾಗಿಲ್ಲ ಎಂದರು. ಮತ್ತೊಮ್ಮೆ ಸರ್ವೇ ನಡೆಸಿ ಜಮೀನುಗಳನ್ನು ಸಕ್ರಮಗೊಳಿಸಬಹುದಾಗಿದೆ. ಈ ಸಂಬಂಧ ಸರ್ಕಾರಕ್ಕೆ ಕಡತ ಕಳಿಸಿ ವರ್ಷಗಳೇ ಉರುಳಿದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಈ ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳ ಮಾತನ್ನೇ ಕೇಳದಂತಾಗಿದ್ದಾರೆ. ತಾಲ್ಲೂಕು ಆಡಳಿತದ ನೊಗ ತಪ್ಪಿದೆ ಎಂದು ಬಿ.ಸತ್ಯಪ್ರಕಾಶ್ ಆರೋಪಿಸಿದರು.
ಬಿ.ಸತ್ಯಪ್ರಕಾಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಮಾತನಾಡಿ, ನಮ್ಮ ಹೋರಾಟಗಳನ್ನು ಜಯಚಂದ್ರ ಅವರು ಬೀದಿ ನಾಟಕ ಎನ್ನುತ್ತಿದ್ದಾರೆ. ಜಯಚಂದ್ರ ಅವರಿಗೆ ಬಣ್ಣ ಹಾಕಿಕೊಂಡು ಮತ್ತು ಬಣ್ಣ ಹಾಕಿದೆಯೂ ನಾಟಕವಾಡುವುದು ಗೊತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಾವಿರಾರು ಕೋಟಿ ರೂ. ಅನುದಾನ ದುರುಪಯೋಗವಾಗಿದೆ. ಈವರೆಗೂ ಒಂದು ಹನಿ ನೀರು ಕೊಡಲಿಲ್ಲ. ಇದು ಜಯಚಂದ್ರ ಅವರ ಯಾವ ರೀತಿಯ ಬೀದಿ ನಾಟಕ ಜಯಚಂದ್ರ ಹಿರಿಯಾರಿ ದ್ದಾರೆ. ಹೋರಾಟಗಾರರನ್ನು ಈ ರೀತಿ ಅಲ್ಲಗಳೆ ಯಬಾರದು ಎಂದರು.
ಜೆಪಂ ಮಾಜಿ ಉಪಾಧ್ಯಕ್ಷ ಮುದಿಮದು ರಂಗ ಸ್ವಾಮಯ್ಯ, ತಾಪಂ ಮಾಜಿ ಉಪಾಧ್ಯಕ್ಷ ಉದಯ ಶಂಕರ್, ಬರಗೂರು ಬೊಪ್ಪಣ್ಣ, ತಾಲ್ಲೂಕು ಮಹಿಳಾ ಜೆಡಿಎಸ್ ಅಧ್ಯಕ್ಷೆ ಜಯಮ್ಮ, ಆರ್ ರಾಘ ವೇಂದ್ರ, ವೈ.ಕೆ ತಿಪ್ಪೇಸ್ವಾಮಿ, ಯಶಸ್ವಿನಿ, ಸುನಿಲ್ ಕುಮಾರ್ಗೌಡ, ಪುನೀತ್, ಸೋಮಶೇಖರ್, ಮುದ್ದುಗಣೇಶ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಇದ್ದರು.
49 ವರ್ಷಗಳ ಹಿಂದೆ ಸಾವಿರಾರು ರೈತರಿಗೆ ಸಾಗುವಳಿ ಚೀಟಿ ನೀಡಲಾ ಗಿದ್ದು ಈ ಎಲ್ಲಾ ರೈತರು ಜಮೀನು ಗಳಲ್ಲಿ ಕೊಳವೆ ಬಾವಿ ಕೋರೆಸಿ ಕೊಂಡು ತೋಟ, ಮನೆ ಕಟ್ಟಿಕೊಂಡು, ಕೃಷಿ ಚಟುವಟಿಕೆ ಗಳನ್ನು ಕೈಗೊಂಡುದ್ದು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲಿಂದ ಈವರೆಗಿನೂ ಸದರಿ ರೈತರ ಸಾಗುವಳಿ ಚೀಟಿಯನ್ನು ಕ್ರಮ ಬದ್ಧಗೊಳಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ಕ್ಷೇತ್ರದ ಶಾಸಕ ಟಿ.ಬಿ ಜಯಚಂದ್ರ ಒಂದು ವಾರ ದೊಲಗೆ ಜಮೀನುಗಳನ್ನು ಸಕ್ರಮಗೊಳಿ ಸುವ ಶಕ್ತಿ ಹೊಂದಿದ್ದಾರೆ. ಅವರಿಗೆ ಈ ಕೆಲಸ ದೊಡ್ಡದೇ ಅಲ್ಲ, ಆದರೂ ಅವರು ಕ್ರಮ ವಹಿಸಿದಿರುವುದು ವಿಪರ್ಯಾಸವೆ ಸರಿ.
— ಬಿ. ಸತ್ಯಪ್ರಕಾಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
