ತಿಪಟೂರು: ನೈತಿಕ ರಾಜಕಾರಣ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಬಿ.ಸಿ.ನಾಗೇಶ್ ಆದರ್ಶ ರಾಜಕಾರಣ ನಡೆಸಿದ್ದಾರೆ. ಪ್ರಾಮಾಣಿಕತೆ, ಸಿದ್ಧಾಂತ ಮತ್ತು ಹಿಂದುತ್ವದ ಆಧಾರದ ಮೇಲೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು, ಅವರ ಕುಟುಂಬಕ್ಕೆ ರಾಜಕೀಯವಾಗಿ ಶಕ್ತಿ ತುಂಬುವುದರ ಜೊತೆಗೆ, ಮಾನ್ಯತೆ ನೀಡುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಅವರು ನಗರದ ಗುರುಕುಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಬಿ.ಸಿ.ನಾಗೇಶ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ನೈತಿಕ ರಾಜಕಾರಣ ಕುಸಿಯುತ್ತಿದೆ. ಧರ್ಮ ಹಾಗೂ ನೈತಿಕತೆಯ ರಕ್ಷಣೆಗಾಗಿ ನಾನು ಸಹ ಪ್ರತಿರೋಧ ಮಾಡಿದ್ದೇನೆ. ನಮಗೆ ಧರ್ಮರಕ್ಷಣೆ ಮುಖ್ಯ. ಬಿ.ಸಿ. ನಾಗೇಶ್ ಅವರೊಂದಿಗೆ ನಾನು ಅತಿ ಪ್ರೀಯ ಒಡನಾಟ ಹೊಂದಿದ್ದೆ. ಸರಳತೆಯ ಜೀವನ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆದರ್ಶಮಯ ರಾಜಕೀಯ ಜೀವನವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿ.ಸಿ.ನಾಗೇಶ್ ವೈಚಾರಿಕ ರಾಜಕಾರಣ ಪಾಲಿಸುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ನೈತಿಕ ಮೌಲ್ಯ ತುಂಬುವ ಕೆಲಸ ಮಾಡಿದ್ದರು. ವೈಚಾರಿಕ ರಾಜಕಾರಣದ ಮೂಲಕ ಜನಮನ್ನಣೆ ಗಳಿಸಿದ್ದರು. ಸಾವಿಲ್ಲದ ಮನೆ ಇಲ್ಲ, ಅವರ ಸಾವು ಆದರ್ಶಮಯವಾಗಿದೆ. ನೈತಿಕ ರಾಜಕಾರಣಕ್ಕಾಗಿ ಅವರ ಕುಟುಂಬ ರಾಜಕೀಯಕ್ಕೆ ಬರುವ ಅಗತ್ಯವಿದೆ.
–ಸಿ.ಟಿ.ರವಿ, ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ
ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಬಿ.ಸಿ. ನಾಗೇಶ್ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ನಗರ ಸೇರಿದಂತೆ ಸಮಗ್ರ ತಿಪಟೂರಿನ ಅಭಿವೃದ್ಧಿಗೆ ಹೆಚ್ಚಿನ ಪಾತ್ರವಹಿಸಿದ್ದಾರೆ. ಸಚಿವರಾಗಿದ್ದ ಸಂದರ್ಭದಲ್ಲಿ ಮಠಮಾನ್ಯಗಳಿಗೆ ಹೆಚ್ಚಿನ ಅನುದಾನ ದೊರಕಿಸಿಕೊಟ್ಟು, ಅವುಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಮಾತನಾಡಿ, ಬಿ.ಸಿ.ನಾಗೇಶ್ ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ಹೆಚ್ಚಿನ ಪರಿಶ್ರಮ ಪಟ್ಟರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯತೆಯನ್ನು ಅಳವಡಿಸಬೇಕು ಎನ್ನುವ ಕನಸು ಹೊಂದಿದ್ದರು ಎಂದು ತಿಳಿಸಿದರು.
ಗುರುಕುಲನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಮೂಡಾಳು ವಿರಕ್ತಮಠದ ಶ್ರೀ ರುದ್ರಮುನಿ ಸ್ವಾಮೀಜಿ, ತಮಡಿಹಳ್ಳಿ ವಿರಕ್ತಮಠದ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಆರ್.ಎಸ್.ಎಸ್ನ್ ಭಾರತೀಯ ಪರಿಕ್ರಮ ಯಾತ್ರೆಯ ಮುಖ್ಯಸ್ಥ ಸೀತಾರಾಮ್ ಕೇದಿಲಾಯರ್, ರಾಜೇಶ್ ಪದ್ಮಾರ್, ವಿಷ್ಣುಕಾಂತ್ ಚಟಿಪಲ್ಲಿ, ವೈ.ಎಚ್. ಬಿ.ಸಿ.ನಾಗೇಶ್ ನೈತಿಕ ರಾಜಕಾರಣದ ಮೂಲಕ ಎಲ್ಲ ವರ್ಗದ ಜನರ ಮನ ಗೆದ್ದ ಜನನಾಯಕರಾಗಿದ್ದರು. ಪಕ್ಷ ಹಾಗೂ ಸಂಘ ಪರಿವಾರದ ಚಟುವಟಿಕೆಗಳಿಗೆ ತಮ್ಮ ಜೀವನವನ್ನು ತ್ಯಾಗ ಮಾಡಿದ್ದು, ಅವರ ಕುಟುಂಬಕ್ಕೆ ಪಕ್ಷ ಶಕ್ತಿ ತುಂಬುವ ಕೆಲಸ ಮಾಡಬೇಕು ಹಾಗೂ ಪಕ್ಷದ ಹಿರಿಯರ ಮನವೊಲಿಸುವ ಕೆಲಸ ಮಾಡಬೇಕು. ಉತ್ತಮ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ವಿಸ್ತೀರ್ಣದವರೆಗೆ ಟಿಕೆಟ್ ನೀಡಿದರೆ ತಪ್ಪೇನಿಲ್ಲ.
— ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ
ಈ ಸಂದರ್ಭದಲ್ಲಿ ಹುಚ್ಚಯ್ಯ, ಪತ್ನಿ ವೀಣಾ ನಾಗೇಶ್, ಪುತ್ರ ವಿಶ್ವದೀಪ್, ಡಾ.ಶ್ರೀಧರ್ ಮತ್ತು ಡಾ.ವಿವೇಚನ್, ಆಯರಹಳ್ಳಿ ಶಂಕರಪ್ಪ, ಶಿವಪ್ರಸಾದ್, ಗಂಗರಾಜು, ಅಂಬಿಕ ಹುಲಿನಾಯ್ಕರ್, ನಲಪಾತ್ ರಾಣಾ, ಬಿಸ್ಸೆಹಳ್ಳಿ ಜಗದೀಶ್, ತರಕಾರಿ ನಾಗರಾಜು, ಶ್ರೀಕಾಂತ್, ಉದಯ್ ಕುಮಾರ್, ಉಮಾಕಾಂತ್, ರಾಜ್ಯ, ಜಿಲ್ಲಾ ಮತ್ತು ತಾಲೂಕಿನ ಪಕ್ಷದ ಪದಾಧಿಕಾರಿಗಳು, ನಗರಸಭಾ ಮಾಜಿ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
